ಐಸಿಸ್ ಪಾಲಾದ ಪಲ್ಮೆರಾ ನಗರ
ಐಸಿಸ್ ಉಗ್ರರ ಅಟ್ಟಹಾಸಕ್ಕೆ ಸಿರಿಯಾದ ಇನ್ನೊಂದು ಪುರಾತನ ನಗರ ಆಪೋಶನವಾಗಿದೆ. ಪಾರಂಪರಿಕ ಅದ್ಭುತ ಗಳಲ್ಲೊಂದಾಗಿರುವ ಪಲ್ಮೆರಾ ನಗರದ ಮೇಲೆ ದಾಳಿ ಮಾಡಿ ಐಸಿಸ್ ತನ್ನ ಕೈವಶ ಮಾಡಿಕೊಂಡಿದೆ.

ಲಂಡನ್: ಐಸಿಸ್ ಉಗ್ರರ ಅಟ್ಟಹಾಸಕ್ಕೆ ಸಿರಿಯಾದ ಇನ್ನೊಂದು ಪುರಾತನ ನಗರ ಆಪೋಶನವಾಗಿದೆ. ಪಾರಂಪರಿಕ ಅದ್ಭುತ ಗಳಲ್ಲೊಂದಾಗಿರುವ ಪಲ್ಮೆರಾ ನಗರದ ಮೇಲೆ ದಾಳಿ ಮಾಡಿ ಐಸಿಸ್ ತನ್ನ ಕೈವಶ ಮಾಡಿಕೊಂಡಿದೆ.
ಪಲ್ಮೆರಾ ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳಲ್ಲೊಂದಾಗಿದೆ. ಐಸಿಸ್ ಪಲ್ಮೆರಾವನ್ನು ಆಕ್ರಮಿಸಿರುವ ಸುದ್ದಿಯನ್ನು ಸಿಎನ್‍ಎನ್‍ನ ಕಾರ್ಯಕಾರಿ ನಿರ್ದೇಶಕ ರಾಮಿ ಅಬ್ದುರ್ ರಹಮಾನ್ ಫೋನ್ ಮೂಲಕ ದೃಢಪಡಿಸಿದ್ದಾರೆ. ಐಸಿಸ್‍ನ ಉಗ್ರರು ಪಾಲ್ಮಿರಾದ ಪ್ರತಿ ಮನೆ ಬಾಗಿಲಿಗೂ ಹೋಗಿ ಆತಂಕ ಮೂಡಿಸುತ್ತಿದ್ದಾರೆ. ಇಡೀ ನಗರದಲ್ಲಿ ಕರ್ಫ್ಯೂ ವಾತಾವರಣ ನಿರ್ಮಾಣವಾಗಿದೆ ಎಂದು ಪ್ರತ್ಯಕ್ಷದರ್ಶಿ ವರದಿಗಳು ತಿಳಿಸಿವೆ.
ನಾಶ ಮಾಡುವ ಆತಂಕ
ಐಸಿಸ್ ಪಲ್ಮೆರಾ ನಗರವನ್ನು ಸಂಪೂರ್ಣವಾಗಿ ನಾಶ ಮಾಡಿ, ಪಾರಂಪರಿಕ ನಗರವನ್ನು ಇಲ್ಲದಂತೆಯೇ ಮಾಡಿಬಿಡುತ್ತಾರೆಂಬ ಆತಂಕ ಕಾಡಲಾರಂಭಿಸಿದೆ. ಏಕೆಂದರೆ ಸಿರಿಯಾದ
ನಿಮೃದ್ ನಗರವನ್ನು ವಶಪಡಿಸಿಕೊಂಡ ಐಸಿಸ್ ಅಲ್ಲಿದ್ದ ಎಲ್ಲ ಐತಿಹಾಸಿಕ ವೈಶಿಷ್ಟ್ಯಗಳನ್ನೂ ಹಾಳುಗೆಡವಿತ್ತು. ಈಗಾಗಲೇ ಅವನತಿ ಹೊಂದಿರುವ ಪಾರಂಪರಿಕ ಐತಿಹ್ಯವಾದ ಪಲ್ಮೆರಾ ಐಸಿಸ್ ಕೈಗೆ ಸಿಕ್ಕು ಪೂರ್ತಿಯಾಗಿ ನಾಶವಾಗುವ ಭಯವನ್ನು ಯುನೆಸ್ಕೊ ವ್ಯಕ್ತಪಡಿಸಿದೆ.
ಪಲ್ಮೆರಾ ವೈಶಿಷ್ಟ್ಯ
ಇದನ್ನು ಮರು ಭೂಮಿಯ ಮದುಮಗಳು ಅಂತಲೇ ಕರೆಯಲಾಗುತ್ತದೆ. ಈ ನಗರದಲ್ಲಿ ಲೆಕ್ಕವಿಲ್ಲದಷ್ಟು ಗತವೈಭವದ ಕುರುಹುಗಳಿವೆ. ಪಲ್ಮೆರಾ ಒಂದು ಕಾಲದಲ್ಲಿ ಪರ್ಷಿಯಾ ಭಾರತ ಹಾಗೂ ಚೀನಾ ದೇಶಗಳನ್ನು ರೋಮ್ ಸಾಮ್ರಾಜ್ಯದೊಂದಿಗೆ ಬೆಸೆಯುವ ಮಾರ್ಗವಾಗಿತ್ತು. ಇರಾಕ್ ಹಾಗೂ ಅರಬ್ ಪ್ರಭಾವವಿರುವ ವಾಸ್ತುಶಿಲ್ಪಗಳಿಗೆ ಪಲ್ಮೆರಾ ಪ್ರಖ್ಯಾತ. ಪಲ್ಮೆರಾ ನಾಶವಾದರೆ ಅದು ಸಿರಿಯಾಗೆ ಮಾತ್ರವಲ್ಲ ಜಗತ್ತಿಗಾಗುವ ನಷ್ಟ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
ಈ ನಗರವನ್ನು ವಶಪಡಿಸಿಕೊಳ್ಳುವುದರಿಂದ ಐಸಿಸ್‍ಗೆ ಮತ್ತೊಂದು ಜಾಗ ಕೈವಶ ಮಾಡಿಕೊಂಡಿರುವ ಗರ್ವ ಬಿಟ್ಟರೆ, ಇನ್ಯಾವ ಲಾಭವೂ ಇಲ್ಲ ಎಂದು ಅಲ್ಲಿನ ಭೌಗೋಳಿಕ ಅಧ್ಯಯನಕಾರರು ಅಂದಾಜಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


