ಹಿರಿಯ ಸಚಿವರ ಜತೆ ಮೋದಿ ಚರ್ಚೆ, ಸರ್ಕಾರದ ವರ್ಷಾಚರಣೆ
ಮೂರು ರಾಷ್ಟ್ರಗಳ ಪ್ರವಾಸದಿಂದ ವಾಪಸಾದ ಬೆನ್ನಲ್ಲೇ ಸರ್ಕಾರದ ಮೊದಲ ವರ್ಷಾಚರಣೆಗೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಹಿರಿಯ ಸಚಿವರ ಜತೆ ಬುಧವಾರ ಮಾತುಕತೆ ನಡೆಸಿದ್ದಾರೆ...

ನವದೆಹಲಿ: ಮೂರು ರಾಷ್ಟ್ರಗಳ ಪ್ರವಾಸದಿಂದ ವಾಪಸಾದ ಬೆನ್ನಲ್ಲೇ ಸರ್ಕಾರದ ಮೊದಲ ವರ್ಷಾಚರಣೆಗೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಹಿರಿಯ ಸಚಿವರ ಜತೆ ಬುಧವಾರ ಮಾತುಕತೆ ನಡೆಸಿದ್ದಾರೆ.
ಸಚಿವರಾದ ಅರುಣ್ ಜೇಟ್ಲಿ, ರಾಜನಾಥ್ ಸಿಂಗ್, ಸುಷ್ಮಾ ಸ್ವರಾಜ್, ಎಂ.ವೆಂಕಯ್ಯನಾಯ್ಡು ಮತ್ತು ನಿತಿನ್ ಗಡ್ಕರಿ ಅವರಿದ್ದ ಈ ಸಭೆಯಲ್ಲಿ ಮೇ 26ರಂದು ನಡೆಯಲಿರುವ ಬಿಜೆಪಿ ಮೊದಲ ವರ್ಷಾಚರಣೆ ಕಾರ್ಯ ಕ್ರಮದ ಕುರಿತು ಮೋದಿ ಮಾಹಿತಿ ಪಡೆದರು. ಈ ವಿಚಾರಕ್ಕೆ ಸಂಬಂಧಿಸಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕೂಡ ಪ್ರಧಾನಿಯನ್ನು ಭೇಟಿಯಾಗಿ ಮಾತು ಕತೆ ನಡೆಸಿದ್ದಾರೆ. ಸರ್ಕಾರ ಜಾರಿಗೆ ತಂದಿರುವ ಕಾರ್ಯಕ್ರಮಗಳ ಕುರಿತು ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳುವಂತೆ ಮೋದಿ ಸೂಚಿಸಿದ್ದಾರೆ.
ಉಪಾಧ್ಯಾಯ್ ಹುಟ್ಟೂರಲ್ಲಿ ಕಾರ್ಯಕ್ರಮ
ಮೋದಿ ಸರ್ಕಾರದ ಮೊದಲ ವರ್ಷಾಚರಣೆ ಅದೂಟಛಿರಿ ಹಾಗೂ ವಿಶಿಷ್ಟವಾಗಿ ಆಚರಿಸಲ್ಪಡಲಿದೆ. ಇದಕ್ಕಾಗಿ ಭಾರತೀಯ ಜನ ಸಂಘದ ಅಧ್ಯಕ್ಷ ದೀನ್ ದಯಾಳ್ ಉಪಾಧ್ಯಾಯ ಹುಟ್ಟೂರು ಮಥುರಾದ ನಿಗ್ಲಾ ಚಂದ್ರಭನ್ ಗ್ರಾಮದಲ್ಲಿ `ಮೆಗಾ ರ್ಯಾಲಿ' ನಡೆಯಲಿದೆ. ಮೇ 26ರಂದು ಮೋದಿ ನಡೆಯುವ ಈ ರ್ಯಾಲಿಯಲ್ಲಿ ಭಾರಿ ಸಂಖ್ಯೆಯಲ್ಲಿ ರೈತರು ಪಾಲ್ಗೊಳ್ಳಲಿದ್ದಾರೆ.
ಈಗ ದೀನ್ ದಯಾಳ್ ಉಪಾಧ್ಯಾಯ ಅವರ 125ನೇ ವರ್ಷಾಚರಣೆ ನಡೆಯುತ್ತಿದೆ. ಹಾಗಾಗಿ ಅವರ ಹುಟ್ಟೂರಲ್ಲಿ ಸರ್ಕಾರದ ವರ್ಷಾಚರಣೆ ಕಾರ್ಯಕ್ರಮ ನಡೆಯುತ್ತಿದೆ. ಇದಲ್ಲದೆ, ಬಿಜೆಪಿ ದೇಶಾದ್ಯಂತ ಕನಿಷ್ಠ 500 ಪತ್ರಿಕಾಗೋಷ್ಠಿಗಳನ್ನೂ ನಡೆಸಲಿದೆ. ದೂರದರ್ಶನ ಕೂಡ ವಿಶೇಷ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಿದೆ.
ಸಾಲ್ ಏಕ್ ಶೌರತ್ ಅನೇಕ್
ಮೋದಿ ಸರ್ಕಾರದ ವರ್ಷಾಚರಣೆಯು ಸಾಲ್ ಏಕ್ ಶೌರತ್ ಅನೇಕ್(ವರ್ಷ ಒಂದು ಸಾಧನೆ ಅನೇಕ) ಎಂಬ ಘೋಷಣೆಯೊಂದಿಗೆ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


