ಭಾರತ ವಿರುದ್ಧ ಹೇಳಿಕೆ: ಮೋದಿ ವಿರುದ್ಧ ಟ್ವಿಟರ್ ನಲ್ಲಿ ಟೀಕಾ ಪ್ರಹಾರ
ಮೋದಿ ಸರ್ಕಾರ 1 ವರ್ಷ ಪೂರೈಸಿ ತಮ್ಮ ಸರ್ಕಾರ ಸಾಧನೆಗಳನ್ನು ಎತ್ತಿಹೇಳುವ ಮೂಲಕ ಸಂತಸ ವ್ಯಕ್ತಪಡಿಸುತ್ತಿದೆ. ಮಾಧ್ಯಮಗಳು ಮೋದಿ ಸರ್ಕಾರ ಹಾಗೂ ಈ ಹಿಂದಿದ್ದ ಇತರ ಸರ್ಕಾರಗಳ ಕೆಲಸ ಹಾಗೂ ಯೋಜನೆಗಳನ್ನು ತುಲನೆ ಮಾಡಿ...

ನವದೆಹಲಿ: ಮೋದಿ ಸರ್ಕಾರ 1 ವರ್ಷ ಪೂರೈಸಿ ತಮ್ಮ ಸರ್ಕಾರ ಸಾಧನೆಗಳನ್ನು ಎತ್ತಿಹೇಳುವ ಮೂಲಕ ಸಂತಸ ವ್ಯಕ್ತಪಡಿಸುತ್ತಿದೆ. ಮಾಧ್ಯಮಗಳು ಮೋದಿ ಸರ್ಕಾರ ಹಾಗೂ ಈ ಹಿಂದಿದ್ದ ಇತರ ಸರ್ಕಾರಗಳ ಕೆಲಸ ಹಾಗೂ ಯೋಜನೆಗಳನ್ನು ತುಲನೆ ಮಾಡಿ ಸುದ್ದಿ ಮಾಡುತ್ತಿದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಮೋದಿ ಕುರಿತಂತೆ ಹೊಸ ಟ್ರೆಂಡ್ ಒಂದು ಪ್ರಾರಂಭವಾಗಿದೆ. ಮುಖ್ಯವಾಗಿ ಟ್ವಿಟರ್ ನಲ್ಲಿ.
ಟ್ವಿಟರ್ ನಲ್ಲಿ #Modiinsultsindia ಎಂಬ ಹೊಸ ಟ್ರೆಂಡ್ ಪ್ರಾರಂಭವಾಗಿದೆ. ಇದರಲ್ಲಿ ಮೋದಿ ವಿದೇಶ ಪ್ರವಾಸ, ವೇಷಭೂಷಣ ಕುರಿತಂತೆ ಹಲವು ವಿರೋಧಗಳು ವ್ಯಕ್ತವಾಗುತ್ತಿದೆ. ಪ್ರಮುಖವಾಗಿ ಚೀನಾ ಪ್ರವಾಸ ಕುರಿತಂತೆ ಮೋದಿ ವಿರುದ್ಧ ಹಲವು ಟೀಕೆಗಳು ವ್ಯಕ್ತವಾಗುತ್ತಿದೆ.
ಇದಕ್ಕೆ ಪ್ರಮುಖ ಕಾರಣ ವಿದೇಶ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾರತದ ಕುರಿತಂತೆ ವಿರೋಧ ಮಾತುಗಳನ್ನು ಹೇಳುತ್ತಿರುವುದು.
ದ್ವಿಪಕ್ಷೀಯ ಮಾತುಕತೆಗಾಗಿ ಚೀನಾ ಪ್ರವಾಸದಲ್ಲಿರುವ ಮೋದಿ ಅವರು, ಶಾಂಘೈ ನಲ್ಲಿ ಭಾರತೀಯರನ್ನುದ್ದೇಶಿಸಿ ಮಾತನಾಡುವಾಗ, ಈ ಹಿಂದೆ ತಮ್ಮ ಸರ್ಕಾರ ಅಧಿಕಾರಕ್ಕೆ ಬರುವುದಕ್ಕೂ ಮೊದಲು ಭಾರತೀಯರು ಭಾರತದಲ್ಲಿ ಹುಟ್ಟಿರುವುದಕ್ಕೆ ಅವಮಾನವಾಗುತ್ತಿದೆ ಎಂದು ಹೇಳುತ್ತಿದ್ದರು. ಆದರೀಗ ಆ ಮನೋಭಾವ ಬದಲಾಗಿದೆ ಎಂದು ಹೇಳಿದ್ದರು.
ಹೋದ ಜನ್ಮದಲ್ಲಿ ಯಾವ ಪಾಪ ಮಾಡಿದ್ದೆವೊ ಗೊತ್ತಿಲ್ಲ. ಈ ಜನ್ಮದಲ್ಲಿ ಭಾರತದಲ್ಲಿ ಹುಟ್ಟಿದ್ದೇವೆ. ಇಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಹೇಳಿ ಭಾರತೀಯರು ಕೆಲಸಗಳನ್ನು ಹುಡುಕಿಕೊಂಡು ವಿದೇಶಕ್ಕೆ ಹೋಗುತ್ತಿದ್ದರು. ಆದರೆ ಇದೀಗ ಭಾರತೀಯರು ಭಾರತದಲ್ಲಿ ಹುಟ್ಟಿರುವುದಕ್ಕೆ ಹೆಮ್ಮೆ ಪಡುತ್ತಿದ್ದಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಸಾಕಷ್ಟು ಅಭಿವೃದ್ಧಿ ಕಂಡಿದೆ. ಹೀಗಾಗಿ ಭಾರತ ಬಿಟ್ಟು ವಿದೇಶಕ್ಕೆ ಹಾರಿದ್ದ ಭಾರತೀಯರು ಇದೀಗ ಭಾರತಕ್ಕೆ ಹಿಂತಿರುಗಿ ಬರಲು ಸಿದ್ದರಿದ್ದಾರೆ ಎಂದು ಹೇಳಿದ್ದರು.
ಪ್ರಧಾನಿ ಅವರ ಈ ಹೇಳಿಕೆ ಟ್ವಿಟರ್ ನಾದ್ಯಂತ ತೀವ್ರ ವಿರೋಧಕ್ಕೆ ಕಾರಣವಾಗಿದ್ದು, ಟ್ವಿಟರ್ ನಲ್ಲಿ ಇದೀಗ ಮೋದಿ ಅವರ ಈ ಹೇಳಿಕೆ ವಿರುದ್ಧ 38 ಸಾವಿರಕ್ಕೂ ಹೆಚ್ಚು ಟೀಕೆಗಳು ವ್ಯಕ್ತವಾಗಿದೆ. ದೇಶದ ಪ್ರಧಾನಿಯಾಗಿರುವ ಓರ್ವ ಜವಾಬ್ದಾರಿಯುತ ವ್ಯಕ್ತಿ ಈ ರೀತಿಯ ಹೇಳಿಕೆ ನೀಡುವುದು ಸರಿಯಲ್ಲ, ವಿದೇಶಗಳಲ್ಲಿ ಮೋದಿ ತಮ್ಮ ತಾಯಿನಾಡಿಗೆ ಅವಮಾನ ಮಾಡುತ್ತಿದ್ದಾರೆ ಎಂಬ ಅಕ್ರೋಶ ವ್ಯಕ್ತವಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


