ಲಾಡೆನ್ ಮೃತ ದೇಹ ಸಮಾಧಿ ಮಾಡಿದ್ದು ಪರ್ವತದಲ್ಲಿ
ಉಗ್ರ ಒಸಾಮಾ ಬಿನ್ ಲ್ಯಾಡನ್ ಸಾವಿನ ನಾಲ್ಕು ವರ್ಷಗಳ ನಂತರವೂ ಆತನ ಬಗೆಗಿನ ವದಂತಿಗಳಿಗೆ ತೆರೆ ಬಿದ್ದಿಲ್ಲ. ಲ್ಯಾಡನ್ ಅಂತ್ಯ ಸಂಸ್ಕಾರ ಇಸ್ಲಾಂ ವಿಧಿವಿಧಾನಗಳ ಪ್ರಕಾರ ನಡೆದಿಲ್ಲ ಎಂಬ ಸುದ್ದಿಯನ್ನು ಅಮೆರಿಕದ ಹಿರಿಯ ಪತ್ರಕರ್ತರೊಬ್ಬರು ಸ್ಫೋಟಿಸಿದ್ದಾರೆ...

ವಾಷಿಂಗ್ಟನ್: ಉಗ್ರ ಒಸಾಮಾ ಬಿನ್ ಲ್ಯಾಡನ್ ಸಾವಿನ ನಾಲ್ಕು ವರ್ಷಗಳ ನಂತರವೂ ಆತನ ಬಗೆಗಿನ ವದಂತಿಗಳಿಗೆ ತೆರೆ ಬಿದ್ದಿಲ್ಲ. ಲ್ಯಾಡನ್ ಅಂತ್ಯ ಸಂಸ್ಕಾರ ಇಸ್ಲಾಂ ವಿಧಿವಿಧಾನಗಳ ಪ್ರಕಾರ ನಡೆದಿಲ್ಲ ಎಂಬ ಸುದ್ದಿಯನ್ನು ಅಮೆರಿಕದ ಹಿರಿಯ ಪತ್ರಕರ್ತರೊಬ್ಬರು ಸ್ಫೋಟಿಸಿದ್ದಾರೆ.
ಪಾಕಿಸ್ತಾನದಲ್ಲಿ ಕೊಲ್ಲಲ್ಪಟ್ಟಿದ್ದ ಉಗ್ರ ಒಸಾಮನನ್ನು ಸೀಲ್ ಪಡೆಗಳು ಕೊಂದು ಜಲಸಮಾಧಿ ಮಾಡಿದ್ದಾರೆಂದು ಅಮೆರಿಕ ಸರ್ಕಾರ ಹೇಳಿಕೊಂಡಿತ್ತು. ಆದರೆ `ಒಬಾಮ ಸರ್ಕಾರ ಹೇಳುತ್ತಿರುವುದು ಶುದ್ಧಸುಳ್ಳು. ಆತನ ಲ್ಯಾಡೆನ್‍ನನ್ನು ಬಂದೂಕಿನಿಂದ ಗುಂಡು ಹಾರಿಸಿ ತುಂಡುತುಂಡು ಮಾಡಿ ದೇಹದ ಕೆಲವು ಭಾಗಗಳನ್ನು ಹಿಂದುಖುಷ್ ಪರ್ವತದಲ್ಲಿ ಎಸೆಯಲಾಗಿದೆ' ಎಂದು ಹೇಳಿರುವ ಪುಲಿಟ್ಜರ್ ಪ್ರಶಸ್ತಿ ವಿಜೇತ ತನಿಖಾ ಪತ್ರಕರ್ತ ಸೀಮುರ್ ಹೆರ್ಶ್, `ಕಾರ್ಲ್ ವಿನ್ಸನ್ ನಲ್ಲಿ ಒಸಾಮನ ಮೃತ ದೇಹಕ್ಕೆ ಸಂಸ್ಕಾರ ನಡೆದಿದೆ ಎಂಬುದು ಅಮೆರಿಕ ಸೃಷ್ಟಿಸಿರುವ ಕಟ್ಟುಕಥೆ' ಎಂದಿದ್ದಾರೆ.
ಲ್ಯಾಡೆನ್ ಸಾವು ಹಾಗೂ ಆನಂತರದ ಆಸಕ್ತಿಕರ ಮಾಹಿತಿಗಳು ಸೀಮುರ್ ಹೆರ್ಶ್‍ರವರ 10000- ಪದಗಳ ಲೇಖನ ಇದೆ. ದ ಲಂಡನ್‍ರಿವ್ಯೂ ಆಫ್ ಬುಕ್ಸ್ ನಲ್ಲಿ ಲಭ್ಯವಿದೆ.
http://bit.ly/1HaLA81
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


