ಮಾನಹಾನಿ ವರದಿ ಇದ್ದರೆ ಕೇಸು ಹಾಕಿ: ಕೇಜ್ರಿ ಆದೇಶ
`ದೆಹಲಿ ಮುಖ್ಯಮಂತ್ರಿ ಮತ್ತು ಸರ್ಕಾರದ ಗೌರವಕ್ಕೆ ಚ್ಯುತಿ ತರುವಂಥ ವರದಿಗಳು ಬಂದರೆ ಪರಿಶೀಲಿಸಿ ವರದಿ ನೀಡಿ. ಅದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ'..

ನವದೆಹಲಿ: `ದೆಹಲಿ ಮುಖ್ಯಮಂತ್ರಿ ಮತ್ತು ಸರ್ಕಾರದ ಗೌರವಕ್ಕೆ ಚ್ಯುತಿ ತರುವಂಥ ವರದಿಗಳು ಬಂದರೆ ಪರಿಶೀಲಿಸಿ ವರದಿ ನೀಡಿ. ಅದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ' --ಇಂಥದ್ದೊಂದು ವಿವಾದಾತ್ಮಕ ಸುತ್ತೋಲೆಯನ್ನು ದೆಹಲಿ ಸರ್ಕಾರದ ವಾರ್ತಾ ಮತ್ತು ಪ್ರಚಾರ ಸಚಿವಾಲಯ ಹೊರಡಿಸಿದೆ.
ಕೆಲ ದಿನಗಳ ಹಿಂದಷ್ಟೇ ಸುದ್ದಿ ವಾಹಿನಿಗಳು ಪ್ರಸಾರ ಮಾಡುವ ಸುದ್ದಿಗಳ ಮೇಲೆ ನಿಗಾ ಇರಿಸುವಂತೆ ಆದೇಶ ಹೊರಡಿಸಲಾಗಿತ್ತು. ಇದರ ಜತೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೂಡ ಮಾಧ್ಯಮಗಳು ಆಮ್ ಆದ್ಮಿ ಪಕ್ಷ (ಆಪ್)ವನ್ನು ಮುಗಿಸಲು ಸಂಚು ರೂಪಿಸಿವೆ ಎಂದು ಆರೋಪಿಸಿದ್ದರು. ದೆಹಲಿಯಲ್ಲಿನ ಮಾಧ್ಯಮ ಸಂಸ್ಥೆಗಳು ಮುದ್ರಿಸಿದ ಮತ್ತು ಪ್ರಸಾರ ಮಾಡಿದ ವರದಿಯಲ್ಲಿ ಮಾನ ಹಾನಿಕಾರಕ ಅಂಶ ಇದ್ದರೆ ಗೃಹ ಖಾತೆ ಪ್ರಧಾನ ಕಾರ್ಯದರ್ಶಿಗೆ ದೂರು ನೀಡಬಹುದು. ನಂತರ ಅದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎನ್ನುವುದು ಸರ್ಕಾರದ ಹೇಳಿಕೆ. ಆದರೆ ಇಂಥ ಕ್ರಮಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ. ಆಪ್ ವತಿಯಿಂದಯಾರೂ ಪ್ರತಿಕ್ರಿಯೆ ನೀಡಿಲ್ಲ.
ಸರ್ಕಾರದ ವಿರುದ್ಧ ಟೀಕೆಯನ್ನು ಕೇಜ್ರಿವಾಲ್ ಅವರು ಸಹಿಸಿಕೊಳ್ಳುತ್ತಿಲ್ಲ. ಇದು ಅವರ ಪ್ರಜಾಪ್ರಭುತ್ವ ವಿರೋಧಿ ನಿಲುವನ್ನು ತೋರಿಸುತ್ತದೆ.
- ಪಿ.ಸಿ. ಚಾಕೋ, ಕಾಂಗ್ರೆಸ್ ಮುಖಂಡ
ಕೇಜ್ರಿವಾಲ್ ಅನಿರ್ಬಂಧಿತ ವಾಕ್ ಸ್ವಾತಂತ್ರ್ಯ ಇರಬೇಕೆಂದು ಪ್ರತಿಪಾದಿಸುತ್ತಿದ್ದಾರೆ. ಈಗ ಅವರೇ ಪ್ರತಿಯೊಬ್ಬರ ಮಾತಿನ ಮೇಲೆ ನಿಯಂತ್ರಣ ಹೇರಲು ಮುಂದಾಗಿದ್ದಾರೆ. ಇದು
ಬೂಟಾಟಿಕೆಯಲ್ಲದೆ ಮತ್ತೇನು?
- ಜಿ.ವಿ.ಎಲ್.ನರಸಿಂಹ ರಾವ್, ಬಿಜೆಪಿ ವಕ್ತಾರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


