ಸಾಮಾನ್ಯ ರೈತನನ್ನು ವರಿಸಿದ ಕೇರಳ ಸಚಿವೆ!
ಕೇರಳದ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರದಲ್ಲಿ ಪರಿಶಿಷ್ಟ ಜನಾಂಗ ಹಾಗೂ ಯುವಜನ ಸೇವೆ ವ್ಯವಹಾರಗಳ ಸಚಿವೆಯಾಗಿರುವ ಪಿ.ಕೆ ಜಯಲಕ್ಷ್ಮಿ

ವೈನಾಡು: ಇದು ಆಶ್ಚರ್ಯ ಆದ್ರೂ ಸತ್ಯ. ರಾಜಕೀಯ ವ್ಯಕ್ತಿಗಳ ಮಕ್ಕಳು, ರಾಜಕಾರಣಿಗಳು, ದೊಡ್ಡ ದೊಡ್ಡ ಉದ್ಯಮಿಗಳು ಅಥವಾ ಅವರ ಮಕ್ಕಳನ್ನು ವಿವಾಹವಾಗುವುದು ಸಾಮಾನ್ಯ . ಆದ್ರೆ ಕೇರಳದ ಸಚಿವೆಯೊಬ್ಬರು ರೈತನನ್ನು ವಿವಾಹವಾಗಿ ಎಲ್ಲರನ್ನು ಆಶ್ಟರ್ಯ ಚಕಿತಗೊಳಿಸಿದ್ದಾರೆ.
ಕೇರಳದ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರದಲ್ಲಿ ಪರಿಶಿಷ್ಟ ಜನಾಂಗ ಹಾಗೂ ಯುವಜನ ಸೇವೆ ವ್ಯವಹಾರಗಳ ಸಚಿವೆಯಾಗಿರುವ ಪಿ.ಕೆ ಜಯಲಕ್ಷ್ಮಿ ಇಂದು ಸಾಮಾನ್ಯ ರೈತನೊಬ್ಬನ ಜೊತೆ ಸಪ್ತಪದಿ ತುಳಿದಿದ್ದಾರೆ.
ಕೇರಳದ ಕುರಿಚಿಯ ಜನಾಂಗದ ಸಂಪ್ರದಾಯದಂತೆ ವಿವಾಹ ನೆರವೇರಿತು. ಹಸಿರು ರೇಷ್ಮೆ ಸೀರೆಯುಟ್ಟು ಅನಿಲ್ ಕುಮಾರ್ ಅವರಿಂದ ತಾಳಿ ಕಟ್ಟಿಸಿಕೊಂಡರು. ನಂತರ ಮಲ್ಲಿಗೆ ಹೂವಿನ ಹಾರವನ್ನು ಪರಸ್ಪರ ಬದಲಾಯಿಸಿಕೊಂಡರು.
ಕೇರಳ ಮುಖ್ಯಮಂತ್ರಿ ಒಮ್ಮನ್ ಚಾಂದಿ, ವಿರೋಧ ಪಕ್ಷದ ನಾಯಕ ಅಚ್ಯುತಾನಂದ ವಧುವರರನ್ನು ಆಶೀರ್ವದಿಸಿದರು. ಉತ್ತರ ಕೇರಳದ ಜಿಲ್ಲೆಯ ವಳಾಡುವಿನಲ್ಲಿ ನಡೆದ ಈ ವಿವಾಹ ಸಮಾರಂಭದಲ್ಲಿ ಕೇರಳ ವಿಧಾನ ಸಭೆ ಸ್ಪೀಕರ್ ಎನ್. ಶಕ್ತನ್, ಕೆ.ಸಿ ಜೋಸೆಫ್, ರಮೇಶ್ ಚೆನ್ನಿತಾಲ ಸೇರಿದಂತೆ ಹಲವು ಸಚಿವರು ಭಾಗಿಯಾಗಿದ್ದರು. ಜಯಲಕ್ಷ್ಮಿ ಮಾನಂತವಾಡಿ ವಿಧಾನ ಸಭೆ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


