ಸಲ್ಮಾನ್ ಮುಸ್ಲಿಂ ಆಗಿದ್ದಕ್ಕೆ ಜಾಮೀನು ಸಿಕ್ತಂತೆ
ಸಲ್ಮಾನ್ ಖಾನ್ ಮುಸ್ಲಿಂ ಆಗಿದ್ದರಿಂದ ಬಹುಬೇಗನೇ ಜಾಮೀನು ಸಿಕ್ಕಿದೆ ಎಂದು ಉತ್ತರ ಪ್ರದೇಶದ ಬಿಜೆಪಿ ನಾಯಕಿ ಸಾದ್ವಿ ಪ್ರಾಚಿ ಮತ್ತೊಂದು ಬಾರಿ...

ನವದೆಹಲಿ: ಸಲ್ಮಾನ್ ಖಾನ್ ಮುಸ್ಲಿಂ ಆಗಿದ್ದರಿಂದ ಬಹುಬೇಗನೇ ಜಾಮೀನು ಸಿಕ್ಕಿದೆ ಎಂದು ಉತ್ತರ ಪ್ರದೇಶದ ಬಿಜೆಪಿ ನಾಯಕಿ ಸಾದ್ವಿ ಪ್ರಾಚಿ ಮತ್ತೊಂದು ಬಾರಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
2002ರ ಗುದ್ದೋಡು(ಹಿಟ್ಆ್ಯಂಡ್ ರನ್) ಪ್ರಕರಣದಲ್ಲಿ ಸಲ್ಮಾನ್ ಖಾನ್ ಅವರಿಗೆ ಜಾಮೀನು ಸಿಕ್ಕಿದ್ದ ವಿಚಾರಕ್ಕೆ ಸಾದ್ವಿ ಪ್ರಾಚಿ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. ಒಂದು ವೇಳೆ ಆತ ಮುಸ್ಲಿಂ ಆಗಿರದಿದ್ದರೆ ಬಡ ಸಂತ್ರಸ್ತನಿಗೆ ನ್ಯಾಯ ಸಿಗುತ್ತಿತ್ತು ಎಂದು ಅವರು ತಿಳಿಸಿದ್ದಾರೆ.
ಇದೇ ವೇಳೆ ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ ಜೈಲು ಸೇರಿರುವ ಸಾದ್ವಿ ಪ್ರಗ್ನಾ ಸಿಂಗ್ ಅವರನ್ನೂ ಕೂಡಲೇ ಬಿಡುಗಡೆಗೊಳಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ಬೀದಿ ಬದಿ ಮಲಗಿರುವವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಾಲಿವುಡ್ ಗಾಯಕ ಅಭಿಜಿತ್ ಅವರನ್ನು ಕೂಡ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ. ಪದೇ ಪದೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಸುದ್ದಿಯಲ್ಲಿದ್ದ ಸಾದ್ವಿ ಪ್ರಾಚಿ ಅವರಿಗೆ ವಿವಾದಿತ ಹೇಳಿಕೆ ನೀಡದಂತೆ ಬಿಜೆಪಿ ಎಚ್ಚರಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


