ದೇಶ

ಬೇರೆಯವರ ಅನುಭವದಿಂದ ಹೆಚ್ಚು ಪ್ರೇರಿತನಾಗಿದ್ದೇನೆ: ಮೋದಿ

ಛತ್ತೀಸ್‌ಗಢ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಸುಮಾರು 5 ಸಾವಿರ ಮಕ್ಕಳಿರುವ, 100 ಎಕರೆ ಪ್ರದೇಶದಲ್ಲಿ ವ್ಯಾಪಿಸಿರು...

ಬೇರೆಯವರ ಅನುಭವದಿಂದ ಹೆಚ್ಚು ಪ್ರೇರಿತನಾಗಿದ್ದೇನೆ: ಮೋದಿ
ನರೇಂದ್ರ ಮೋದಿ
Published On :

ರಾಯಪುರ: ಛತ್ತೀಸ್‌ಗಢ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಸುಮಾರು 5 ಸಾವಿರ ಮಕ್ಕಳಿರುವ, 100 ಎಕರೆ ಪ್ರದೇಶದಲ್ಲಿ ವ್ಯಾಪಿಸಿರು ಶಿಕ್ಷಣ ನಗರಕ್ಕೆ ಶನಿವಾರ ಭೇಟಿ ನೀಡಿದ್ದು, ಅಲ್ಲಿನ ಮಕ್ಕಳೊಂದಿಗೆ ಸಂವಾದ ನಡೆಸಿದರು.

ಸಂವಾದಲ್ಲಿ ಮಾತನಾಡಿದ ಮೋದಿ, ಜೀವನದಲ್ಲಿ ಸಫಲತೆ ಕಾಣಲು ಇಚ್ಛಾಶಕ್ತಿ ಮುಖ್ಯ. ಇಚ್ಛಾಶಕ್ತಿ ಸ್ಥಿರವಾಗಿದ್ದರೆ ಮಾತ್ರ ಯಶಸ್ಸು ಸಾಧ್ಯ ಎಂದರು. ಅಲ್ಲದೆ ಶ್ರದ್ಧೆಯಿಂದ ಕೆಲಸ ಮಾಡಬೇಕಾಗಿರುವುದು ನಮ್ಮ ಧರ್ಮ ಎಂದು ಮೋದಿ ಹೇಳಿದರು.

ಯಾವ ಘಟನೆಯಿಂದ ನೀವು ಹೆಚ್ಚು ಪ್ರೇರಣೆಗೊಂಡಿದ್ದೀರಿ? ಎಂಬ ವಿದ್ಯಾರ್ಥಿನಿ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ, ಘಟನೆ ಯಾವುದೇ ಇರಲಿ, ನಮ್ಮ ದೃಷ್ಠಿಕೋನ ಸರಿ ಇರಬೇಕು. ನಾನು ನನ್ನ ಅನುಭವಕ್ಕಿಂತ ಬೇರೆಯವರ ಅನುಭವದಿಂದ ಹೆಚ್ಚು ಪ್ರೇರಿತನಾಗಿದ್ದೆನೆ. ಕಠಿಣ ಪರಿಸ್ಥಿತಿಯಲ್ಲಿರುವ ಜೀವನ ನಮಗೆ ಹೆಚ್ಚು ಮಾದರಿ ಎಂದರು.

ನಾನು ಸಮಯ ನಿರ್ಧರಿಸಿಕೊಂಡು ಕೆಲಸ ಮಾಡುವುದಿಲ್ಲ ಮತ್ತು ಎಷ್ಟು ಹೊತ್ತು ಕೆಲಸ ಮಾಡುತ್ತೇನೆಂದು ನನಗೆ ಗೊತ್ತಿಲ್ಲ. ಆದರೆ ಕೆಲಸ ಮುಗಿದಾಗ ಸಂತೃಪ್ತಿಯ ಭಾವ ನನ್ನಲ್ಲಿರುತ್ತದೆ. ದೇಶದ ಕೆಲಸ ಮಾಡುವಾಗ ನನಗೆ ದಣಿವಾಗಲ್ಲ ಎಂದು ಪ್ರಧಾನಿ ಹೇಳಿದರು.

ನೀವು ಏನು ಸಾಧಿಸಬೇಕು ಎಂದು ವ್ಯಾಸಂಗ ಮಾಡುತ್ತಿದ್ದೀರಿ? ಎಂದು ಮಕ್ಕಳಿಗೆ ಪ್ರಶ್ನೆ ಹಾಕಿದ ಪ್ರಧಾನಿ ಮೋದಿ, ಬಾಲ್ಯದ ಜೀವನ ಅತಿ ಆನಂದಮಯವಾಗಿರುತ್ತದೆ. ದೊಡ್ಡವರಾದ ಮೇಲೆ ಜೀವನ ಹೀಗೆ ಇರಲ್ಲ. ಆದರೆ ಜೀವನದಲ್ಲಿ ಏನನ್ನಾದ್ರೂ ಸಾಧಿಸಬೇಕು ಎಂದು ಕಿವಿಮಾತು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.