ಭಾರತಕ್ಕೆ ಸುನಾಮಿ ಭೀತಿ ಇಲ್ಲ
ಪಪುವಾ ನ್ಯೂ ಗಿನಿಯಾದಲ್ಲಿ ಮಂಗಳವಾರ 7.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಇದರಿಂದಾಗಿ ಭಾರತ ಮತ್ತು ಹಿಂದೂ...

ಹೈದ್ರಾಬಾದ್: ಪಪುವಾ ನ್ಯೂ ಗಿನಿಯಾದಲ್ಲಿ ಮಂಗಳವಾರ 7.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಇದರಿಂದಾಗಿ ಭಾರತ ಮತ್ತು ಹಿಂದೂ ಮಹಾಸಾಗರದಲ್ಲಿ ಸುನಾಮಿ ಭೀತಿ ಕಾಣಿಸಿಕೊಂಡಿಲ್ಲ . ನಾವು ಈ ಬಗ್ಗೆ ಎಚ್ಚರಿಕೆಯನ್ನೂ ನೀಡಿಲ್ಲ ಎಂದು ಭಾರತೀಯ ಸುನಾಮಿ ಮುನ್ಸೂಚನಾ ಸಂಸ್ಥೆ (ಐಟಿಇಡಬ್ಲ್ಯುಸಿ) ಹೇಳಿದೆ.
ಏತನ್ಮಧ್ಯೆ, ಪೆಸಿಫಿಕ್ ಸುನಾಮಿ ಎಚ್ಚರಿಕೆ ಸಂಸ್ಥೆಯು ಭೂಕಂಪದ ಕೇಂದ್ರ ಬಿಂದುವಿನಿಂದ 300 ಕಿಮೀ ದೂರದಲ್ಲಿ ಸುನಾಮಿ ಸಂಭವಿಸುವ ಸಾಧ್ಯತೆ ಇದೆ ಎಂದು ಹೇಳಿತ್ತು. ಆದರೆ ಸುನಾಮಿಯ ಯಾವುದೇ ಮುನ್ಸೂಚನೆಗಳು ಇಲ್ಲ ಎಂದು ಐಟಿಇಡಬ್ಲ್ಯುಸಿ ಸ್ಪಷ್ಟ ಪಡಿಸಿದೆ.
ಯಾವುದೇ ಪ್ರದೇಶದಲ್ಲಿ 8 ಮ್ಯಾಗ್ನಿಟ್ಯೂಡ್ ತೀವ್ರತೆಯಲ್ಲಿ ಭೂಮಿ ಕಂಪಿಸಿದರೆ ಸುನಾಮಿ ಸಂಭವಿಸುವ ಸಾಧ್ಯತೆಗಳಿರುತ್ತವೆ. ಆದರೆ ಭೂಕಂಪದ ತೀವ್ರತೆ 6.5 ರಿಂದ ಹೆಚ್ಚಿಗೆ ಇದ್ದರೂ ಐಟಿಇಡಬ್ಲ್ಯುಸಿ ಸುನಾಮಿ ಭೀತಿಯ ಮುನ್ನೆಚ್ಚರಿಕೆಯನ್ನು ನೀಡುತ್ತದೆ ಎಂದು ಐಟಿಇಡಬ್ಲ್ಯುಸಿ ಇನ್ ಚಾರ್ಜ್ ಟಿ. ಶ್ರೀನಿವಾಸ ಕುಮಾರ್ ಹೇಳಿದ್ದಾರೆ.
ಪಪುವಾ ನ್ಯೂ ಗಿನಿಯಾದಲ್ಲಿ ಭೂಕಂಪ ಸಂಭವಿಸಿದ್ದರೂ ಐಟಿಇಡಬ್ಲ್ಯುಸಿ ಯಾವುದೇ ಸುನಾಮಿ ಭೀತಿ ಎಚ್ಚರಿಕೆಗಳನ್ನು ನೀಡಿಲ್ಲ ಎಂದು ಶ್ರೀನಿವಾಸ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


