ದೇಶ

ಉಗ್ರರಿಗೆ ಪ್ರತ್ಯೇಕ ಜೈಲು ನಿರ್ಮಿಸಿ: ಮಹಾರಾಷ್ಟ್ರ ಗೃಹ ಸಚಿವಾಲಯ

ಉಗ್ರರನ್ನು ಇತರ ಖೈದಿಗಳಿಂದಾಗಿ ಪ್ರತ್ಯೇಕವಾಗಿರಿಸಿ, ಅವರಿಗಾಗಿ ಹೊಸತೊಂದು ಜೈಲು ನಿರ್ಮಿಸಿ ಎಂದು ಮಹಾರಾಷ್ಟ್ರ ಗೃಹ...

ಉಗ್ರರಿಗೆ ಪ್ರತ್ಯೇಕ ಜೈಲು ನಿರ್ಮಿಸಿ: ಮಹಾರಾಷ್ಟ್ರ ಗೃಹ ಸಚಿವಾಲಯ
ರಾಜ್ ನಾಥ್ ಸಿಂಗ್
Published On :

ನವದೆಹಲಿ: ಉಗ್ರರನ್ನು ಇತರ ಖೈದಿಗಳಿಂದಾಗಿ ಪ್ರತ್ಯೇಕವಾಗಿರಿಸಿ, ಅವರಿಗಾಗಿ ಹೊಸತೊಂದು ಜೈಲು ನಿರ್ಮಿಸಿ ಎಂದು ಮಹಾರಾಷ್ಟ್ರ ಗೃಹ ಸಚಿವಾಲಯ ಮಹಾರಾಷ್ಟ್ರ ಸರ್ಕಾರ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ ನೀಡಿದೆ.

ಕುಖ್ಯಾತ ಖೈದಿಗಳು ಇತರ ಖೈದಿಗಳೊಂದಿಗೆ ಬೆರೆಯುವುದನ್ನು ತಪ್ಪಿಸುವ ಸಲುವಾಗಿಯೇ ಪ್ರತ್ಯೇಕ ಜೈಲು ನಿರ್ಮಾಣ ಮಾಡಬೇಕೆಂಬ ಬೇಡಿಕೆಯೊಡ್ಡಿರುವುದಾಗಿ ಗೃಹ ಸಚಿವಾಲಯ ಹೇಳಿದೆ.

ಉಗ್ರ ಕೃತ್ಯಗಳಲ್ಲಿ ಭಾಗಿಯಾಗಿರುವ ಅಪರಾಧಿಗಳಿಗೆ ರಾಜ್ಯದ ಹೊರಗೆ ಬೇರೆ ಜೈಲು ನಿರ್ಮಿಸಬೇಕು. ಇದು ಸಾಧ್ಯವಾಗದೇ ಇದ್ದರೆ,  ಉಗ್ರರು/ ಶಂಕಿತ ಉಗ್ರರು , ಇತರ ಖೈದಿಗಳು ಹೀಗೆ ಎಲ್ಲರನ್ನೂ ಪ್ರತ್ಯೇಕಿಸಿ ಸೆಂಟ್ರಲ್ ಮತ್ತು ಜಿಲ್ಲಾ ಕಾರಾಗೃಹಗಳಿಗೆ ಕಳುಹಿಸಿ ಎಂದು ಮಹಾರಾಷ್ಟ್ರ ಗೃಹ ಸಚಿವಾಲಯದ  ಜಂಟಿ ಕಾರ್ಯದರ್ಶಿ  ಕುಮಾರ್ ಅಲೋಕ್ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.