ಪ್ರಿನ್ಸ್ ವಿಲಿಯಮ್, ಕೇಟ್ ದಂಪತಿಗೆ ಹೆಣ್ಣು ಮಗು
ಬ್ರಿಟನ್ ರಾಜಮನೆತನದ ಪ್ರಿನ್ಸ್ ವಿಲಿಯಮ್ ಅವರ ಪತ್ನಿ ಕೇಟ್ ಮಿಡ್ಲೆಟನ್ ಅವರು ಶನಿವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ...

ಲಂಡನ್: ಬ್ರಿಟನ್ ರಾಜಮನೆತನದ ಪ್ರಿನ್ಸ್ ವಿಲಿಯಮ್ ಅವರ ಪತ್ನಿ ಕೇಟ್ ಮಿಡ್ಲೆಟನ್ ಅವರು ಶನಿವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಬಕಿಂಗ್ ಹ್ಯಾಮ್ ಅರಮನೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುವಂತೆ ಪ್ರಿನ್ಸ್ ವಿಲಿಯಮ್ ಪತ್ನಿ ಕೇಟ್ ಶನಿವಾರ ಲಂಡನ್ ನ ಸೈಂಟ್ ಮೇರಿಸ್ ಆಸ್ಪತ್ರೆಯಲ್ಲಿ ಬೆಳಗ್ಗೆ 8.34ಕ್ಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆಸ್ಪತ್ರೆಗೆ ದಾಖಲಿಸಿದ 3 ಗಂಟೆಯೊಳಗೆ ಕೇಟ್ ಗೆ ಸುಖಕರವಾಗಿ ಹೆರಿಗೆಯಾಗಿದೆ. ಇದು ಪ್ರಿನ್ಸ್, ಕೇಟ್ ದಂಪತಿಗಳ ಎರಡನೇ ಮಗುವಾಗಿದ್ದು, ಹೆಣ್ಣು ಮಗುವಿನ ಜನನದ ಘೋಷಣೆಯಾಗುತ್ತಿದ್ದಂತೆಯೇ ಅರಮನೆ ಆವರಣದಲ್ಲಿ ನೆರೆದಿದ್ದ ಸಾವಿರಾರು ಮಂದಿ ಸಂಭ್ರಮಿಸಿದರು.
ಪ್ರಿನ್ಸ್ ಮತ್ತು ಕೇಟ್ ಅವರ ಹೆಣ್ಣು ಮಗು 8 ಪೌಂಡ್ 3 ಔನ್ಸ್ (3.7ಕೆಜಿ) ತೂಕ ಹೊಂದಿದೆ. ಕೇಟ್(33) ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಪ್ರಿನ್ಸ್ ವಿಲಿಯಮ್ ಹಾಗೂ ಕೇಟ್ 2011ರ ಏಪ್ರಿಲ್ ತಿಂಗಳಿನಲ್ಲಿ ಅದ್ದೂರಿಯಾಗಿ ವಿವಾಹವಾಗಿದ್ದರು. 2013ರ ಜುಲೈನಲ್ಲಿ ಇದೇ ಸೈಂಟ್ ಮೇರಿಸ್ ಆಸ್ಪತ್ರೆಯಲ್ಲಿ ಕೇಟ್ ಗಂಡು ಮಗು(ಪ್ರಿನ್ಸ್ ಜಾರ್ಜ್)ವಿಗೆ ಜನ್ಮ ನೀಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


