ಸೇಡು ತೀರಿಸುವ ಕೋತಿ
ಹಾವಿನ ದ್ವೇಷದ ಬಗ್ಗೆ ಕೇಳಇದ್ದೇವೆ, ಆದರೆ ಕೋತಿ ದ್ವೇಷದ ಬಗ್ಗೆ ಕೇಳಿದ್ದೀರಾ? ಬಿಹಾರದ ಪಟನಾದಲ್ಲಿರುವ ಕೋತಿಗಳು, ಯಾವುದೇ...

ಪಟನಾ: ಹಾವಿನ ದ್ವೇಷದ ಬಗ್ಗೆ ಕೇಳಇದ್ದೇವೆ, ಆದರೆ ಕೋತಿ ದ್ವೇಷದ ಬಗ್ಗೆ ಕೇಳಿದ್ದೀರಾ? ಬಿಹಾರದ ಪಟನಾದಲ್ಲಿರುವ ಕೋತಿಗಳು, ಯಾವುದೇ ಗೂಡ್ಸ್ ರೈಲು ಬಂದರೂ ಆ ಚಾಲಕನ ಮೇಲೆ ದಾಳಿ ಮಾಡುವುದು ಸಾಮಾನ್ಯವಾಗಿದೆ.
ಏಕೆಂದರೆ ಆಗಲೇ ಈ ಕೋತಿ ಮೂರು ಮಂದಿ ರೈಲು ಚಾಲಕರ ಮೇಲೆ ದಾಳಿ ಮಾಡಿದೆ. ಇದಕ್ಕೆ ಕಾರಣ ಹುಡುಕಿ ಹೊರಟಾಗ ಅಚ್ಚರಿಯ ಸಂಗತಿಯೊಂದು ಬಯಲಾಗಿದೆ.
ಒಂದು ಕೋತಿ ಗೂಡ್ಸ್ ರೈಲಿಗೆ ಸಿಕ್ಕಿ ಮೃತಪಟ್ಟಿತ್ತು. ಅದೃಷ್ಟವಶಾತ್ ಮಿಕ್ಕ ಕೋತಿಗಳು ಬಚಾವ್ ಆಗಿದ್ದವು.
ಗುಂಪಿನ ಸದಸ್ಯನ ಸಾವಿನಿಂದ ಆಕ್ರೋಶಗೊಂಡ ಉಳಿತ ಕೋತಿಗಳು, ಆ ದಾರಿಯಲ್ಲಿ ಬರುವ ಪ್ರತೀ ಗೂಡ್ಸ್ ರೈಲಿನ ಚಾಲಕರನ್ನು ಪೀಡಿಸುತ್ತಿವೆ. ಒಳಗೇ ನುಗ್ಗಿ ಚಾಲಕನಿಗೆ ಕಿರುಕುಳ ಕೊಡುತ್ತಿದೆ.
ಇದರಿಂದ ಕಂಗೆಟ್ಟ ಚಾಲಕರು ರೈಲ್ವೆ ಸಿಬ್ಬಂದಿಗೆ ಪ್ರತಿ ಬಾರಿ ದೂರು ನೀಡಿ ಹೈರಾಣಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


