ರಾಹುಲ್ ಬಂದೇ ಬರುತಾನೆ!
`ನನ್ನ ಮಗ, ನಿಮ್ಮ ನಾಯಕ ರಾಹುಲ್ ಗಾಂಧಿ ಎಲ್ಲೂ ಹೋಗಿಲ್ಲ, ಬಂದೇ ಬರುತ್ತಾನೆ.. ಏನೋ ಸ್ವಲ್ಪ ತಡವಾಗಿದೆ. ರಾಹುಲ್ ಬದಲು ನಾನು ಬಂದಿದ್ದೇನೆ. ನೀವೆಲ್ಲ ನನ್ನವರೇ..' - ಇದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಮೇಠಿಯ ಜನರಿಗೆ ನೀಡಿದ ಭರವಸೆಯ...

ಅಮೇಠಿ: `ನನ್ನ ಮಗ, ನಿಮ್ಮ ನಾಯಕ ರಾಹುಲ್ ಗಾಂಧಿ ಎಲ್ಲೂ ಹೋಗಿಲ್ಲ, ಬಂದೇ ಬರುತ್ತಾನೆ.. ಏನೋ ಸ್ವಲ್ಪ ತಡವಾಗಿದೆ. ರಾಹುಲ್ ಬದಲು ನಾನು ಬಂದಿದ್ದೇನೆ. ನೀವೆಲ್ಲ ನನ್ನವರೇ..' - ಇದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಮೇಠಿಯ ಜನರಿಗೆ ನೀಡಿದ ಭರವಸೆಯ ಮಾತುಗಳು.
ಕ್ಷೇತ್ರದ ಸಂಸದ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ದೀರ್ಘಕಾಲದ ರಜೆಯಲ್ಲಿರುವುದುನ್ನು ಖಂಡಿಸಿ ಸ್ಥಳೀಯರು `ನಮ್ಮ ಸಂಸದ ರಾಹುಲ್ ನಾಪತ್ತೆಯಾಗಿದ್ದಾರೆ' ಎಂದು ಪೋಸ್ಟರ್ ಅಂಟಿಸಿದ್ದರು. ಜತೆಗೆ ದೇಶಾದ್ಯಂತ ಸುದ್ದಿಯೂ ಆಗಿತ್ತು. ಇದರಿಂದ ಮುಜುಗರಕ್ಕೆ ಒಳಗಾದ ಸೋನಿಯಾ ಗಾಂಧಿ ಖುದ್ದಾಗಿ ಪುತ್ರನ ಕ್ಷೇತ್ರಕ್ಕೆ ದೌಡಾಯಿಸಿ ಹೋಗಿ, ಅಭಯ ನೀಡಿದ್ದಾರೆ.
ನಿಮ್ಮ ಸಮಸ್ಯೆಗಳನ್ನು ನನ್ನ ಬಳಿ ಹೇಳಿ, ನನ್ನ ಕ್ಷೇತ್ರ ರಾಯ್ ಬರೇಲಿಯಾಗಿದ್ದರೂ ನನಗೆ ಅಮೇಠಿ ಬೇರೆಯಲ್ಲ ಎಂದು ಜನರಿಗೆ ಧೈರ್ಯ ತುಂಬಿದ್ದಾರೆ. ರಾಯ್ ಬರೇಲಿ ಮತ್ತು ಅಮೇಠಿ ನಮಗೆ ಮನೆ ಇದ್ದಂತೆ. ಪ್ರಿಯಾಂಕಾ ಮತ್ತು ರಾಹುಲ್ ಶೀಘ್ರವೇ ನಿಮ್ಮ ಎದುರು ಬರಲಿದ್ದಾರೆ ಎಂದಿದ್ದಾರೆ ಸೋನಿಯಾ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


