ದೇಶ

ಜಯಾ ಅಕ್ರಮ ಆಸ್ತಿ: ಹೈಕೋರ್ಟಲ್ಲೂ ಭವಾನಿ ಸಿಂಗ್ ಎಸ್ಪಿಪಿಯಾಗಿರಬೇಕೇ?

ವಿಶೇಷ ಕೋರ್ಟಲ್ಲಿ ಜಯಲಿಲತಾ ಪ್ರಕರಣದಲ್ಲಿ ವಾದ ಮಾಡಿದ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ (ಎಸ್‍ಪಿಪಿ) ಭವಾನಿ ಸಿಂಗ್‍ಗೆ ಹೈಕೋರ್ಟಲ್ಲಿ ವಾದ ಮಂಡನೆಗೆ...

ಜಯಾ ಅಕ್ರಮ ಆಸ್ತಿ: ಹೈಕೋರ್ಟಲ್ಲೂ ಭವಾನಿ ಸಿಂಗ್ ಎಸ್ಪಿಪಿಯಾಗಿರಬೇಕೇ?
ಮಾಜಿ ಮುಖ್ಯಮಂತ್ರಿ ಜಯಲಲಿತಾ ಮತ್ತು ಹಿರಿಯ ವಕೀಲರಾದ ಭವಾನಿಸಿಂಗ್
Published On :

ನವದೆಹಲಿ: `ವಿಶೇಷ ಕೋರ್ಟಲ್ಲಿ ಜಯಲಿಲತಾ ಪ್ರಕರಣದಲ್ಲಿ ವಾದ ಮಾಡಿದ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ (ಎಸ್‍ಪಿಪಿ) ಭವಾನಿ ಸಿಂಗ್‍ಗೆ ಹೈಕೋರ್ಟಲ್ಲಿ ವಾದ ಮಂಡನೆಗೆ ಅವಕಾಶವೇಕೆ? ಅಲ್ಲಿ ಪ್ರಕರಣ ಮುಕ್ತಾಯವಾದಾಗ ಅವರ ಕರ್ತವ್ಯ ಮುಗಿದಿತ್ತು.'- ಹೀಗೆಂದು ಕರ್ನಾಟಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡದ್ದು ಸುಪ್ರೀಂಕೋರ್ಟ್.

ಅಣ್ಣಾಡಿಎಂಕೆ ನಾಯಕಿ ಜಯಲಲಿತಾರ ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟಲ್ಲಿ ನಡೆಯುತ್ತಿರುವ ವಿಚಾರಣೆಯಲ್ಲಿ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್‍ರನ್ನು ವಜಾಮಾಡಬೇಕೆಂದು ಡಿಎಂಕೆ ನಾಯಕ ಕೆ.ಅನ್ಬಳಗನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಕರ್ನಾಟಕ ಸರ್ಕಾರವನ್ನು ಕೋರ್ಟ್ ತರಾಟೆಗೆಗೆ ತೆಗೆದುಕೊಂಡಿದೆ. ಇದೇ ಸಂದರ್ಭದಲ್ಲಿ ಹೈಕೋರ್ಟಲ್ಲಿ ನಡೆಯುತ್ತಿರುವ ಅಣ್ಣಾಡಿಎಂಕೆ ನಾಯಕಿಯ ವಿರುದ್ಧ ಪ್ರಕರಣಕ್ಕೆ ತಡೆಯಾಜ್ಞೆ ನೀಡಬೇಕೆಂದು ಆಗ್ರಹಿಸಿದ್ದಾರೆ.

ನೀವೇಕೆ ಅವರನ್ನು ಹೈಕೋರ್ಟಲ್ಲಿ ವಾದ ಮಂಡಿಸದಂತೆ ತಡೆಯಲಿಲ್ಲ. ಅದಕ್ಕೆ ಅವಕಾಶವಿಲ್ಲದಿದ್ದರೂ ನೀವೇನೂ ಕ್ರಮ ಕೈಗೊಂಡಿಲ್ಲ ಎಂದು ನ್ಯಾ.ಮದನ್ ಬಿ.ಲೋಕುರ್ ಮತ್ತು ನ್ಯಾ.ಆರ್. ಭಾನುಮತಿ ಅವರನ್ನೊಳಗೊಂಡ ಪೀಠ ಪ್ರಶ್ನಿಸಿದೆ. ಭವಾನಿ ಸಿಂಗ್ ಬದಲಾಗಿ ಮತ್ತೊಬ್ಬ ಎಸ್ ಪಿಪಿಯನ್ನು ನೇಮಕ ಮಾಡದೇ ಇದ್ದದ್ದು ಮತ್ತು ಈ ಬಗ್ಗೆ ಯಾವುದೇ ಉತ್ತರ ಸಲ್ಲಿಸದೇ ಇದ್ದ ಕರ್ನಾಟಕ ಸರ್ಕಾರದ ಧೋರಣೆಯನ್ನೂ ಸುಪ್ರೀಂಕೋರ್ಟ್ ಟೀಕಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.