ವಾಟ್ಸ್‌ಪ್ ರೇಪ್ ವಿಡಿಯೋ: ಐವರ ಪೈಕಿ ಓರ್ವನ ಬಂಧನ
ಮಹಿಳೆಯರಿಬ್ಬರನ್ನು ಅತ್ಯಾಚಾರ ಮಾಡಿ ವಾಟ್ಸ್‌ಪ್ ಗೆ ವಿಡಿಯೋ ಅಪ್ ಲೋಡ್ ಮಾಡಿದ್ದ ಐವರು ಕೀಚಕರ ಪೈಕಿ ಓರ್ವನನ್ನು ಬಂಧಿಸಲಾಗಿದೆ.

ನವದೆಹಲಿ: ಮಹಿಳೆಯರಿಬ್ಬರನ್ನು ಅತ್ಯಾಚಾರ ಮಾಡಿ ವಾಟ್ಸ್‌ಪ್ ಗೆ ವಿಡಿಯೋ ಅಪ್ ಲೋಡ್ ಮಾಡಿದ್ದ ಐವರು ಕೀಚಕರ ಪೈಕಿ ಓರ್ವನನ್ನು ಒಡಿಶಾದಲ್ಲಿ ಬಂಧಿಸಲಾಗಿದೆ.
ಭುವನೇಶ್ವರದ ಸುಬ್ರತ ಸಾವು ಎಂಬಾತನನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದು ಇಂದು ಆತನನ್ನು ದೆಹಲಿಗೆ ಕರೆತರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅತ್ಯಾಚಾರ ವಿಡಿಯೋಗಳು ವಾಟ್ಸ್‌ಪ್ ನಲ್ಲಿ ಹರಿದಾಡುತ್ತಿರುವುದನ್ನು ಗಮನಿಸಿದ ಕಾರ್ಯಕರ್ತೆ ಸುನೀತಾ ಕೃಷ್ಣನ್ ಅವರು ಆರು ತಿಂಗಳಷ್ಟು ಹಳೆಯ ಎರಡು ಪ್ರತ್ಯೇಕ ವಾಟ್ಸ್‌ಪ್ ರೇಪ್ ವಿಡಿಯೋ ಚಿತ್ರಿಕೆಗಳನ್ನು ಒದಗಿಸಿದ್ದರು. ಅದರಲ್ಲಿ ಕಂಡುಬರುವ ಐವರು ಅತ್ಯಾಚಾರಿಗಳನ್ನು ಹಿಡಿದೇ ತೀರಬೇಕೆಂಬ ಸಂಕಲ್ಪದಲ್ಲಿ ತೊಡಗಿದ್ದಾರೆ.
ಸುನೀತ ಕೃಷ್ಣನ್ ಮನದಾಳವನ್ನು ಅರಿತ ಸುಪ್ರೀಂಕೋರ್ಟ್ ವಾಟ್ಸ್‌ಪ್ ರೇಪ್ ವಿಡಿಯೋ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಎಂಟು ಪ್ರಕರಣಗಳನ್ನು ದಾಖಲಿಸಿದ್ದು, ಶಂಕಿತ ಆರೋಪಿಗಳು ಪಶ್ಚಿಮ ಬಂಗಾಳ, ಒಡಿಶಾ ಮತ್ತು ಉತ್ತರ ಪ್ರದೇಶವರಾಗಿದ್ದಾರೆ ಎಂದು ಶಂಕಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


