ದೇಶ

ನನ್ನ ಮೇಲೆ ಆರೋಪ ಮಾಡಿದವರು ಸಾಕ್ಷ್ಯ ಒದಗಿಸಲಿ: ಶಿಲ್ಪಾ ಶೆಟ್ಟಿ

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಆಕೆಯ ಪತಿ ರಾಜ್ ಕುಂದ್ರಾ ಅವರ ಕಂಪನಿಯೊಂದರಲ್ಲಿ ರು. 9 ಕೋಟಿ ಹೂಡಿಕೆ ಮಾಡಿದ ...

ನನ್ನ ಮೇಲೆ ಆರೋಪ ಮಾಡಿದವರು ಸಾಕ್ಷ್ಯ ಒದಗಿಸಲಿ: ಶಿಲ್ಪಾ ಶೆಟ್ಟಿ
ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ
Published On :

ನವದೆಹಲಿ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಆಕೆಯ ಪತಿ ರಾಜ್ ಕುಂದ್ರಾ ಅವರ ಕಂಪನಿಯೊಂದರಲ್ಲಿ ರು. 9 ಕೋಟಿ ಹೂಡಿಕೆ ಮಾಡಿದ ಕೊಲ್ಕತ್ತಾ ಕಂಪನಿಯ ಮಾಲೀಕ ಮನೋಜ್ ಜೈನ್, ಶಿಲ್ಪಾ ದಂಪತಿ ತನಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಆದರೆ ಈ ಆರೋಪ ನಿರಾಧಾರ,  ಮನೋಜ್ ಜೈನ್ ಅವರು ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಯತ್ನಿಸುತ್ತಿದ್ದಾರೆ. ಜೈನ್ ಅವರಿಗೆ ಮೋಸ ಆಗಿದ್ದರೆ ನನ್ನ ಮೇಲಿನ ಆರೋಪಕ್ಕೆ ಸಾಕ್ಷಿ ಒದಗಿಸಿ ಸಾಬೀತು ಪಡಿಸಲಿ ಎಂದು ಶಿಲ್ವಾ ಟ್ವಿಟರ್‌ನಲ್ಲಿ ಗುಡುಗಿದ್ದಾರೆ.

ಶಿಲ್ಪಾ ದಂಪತಿಗಳ ಮಾಲೀಕತ್ವದ ಎಸೆನ್‌ಶಿಯಲ್ ಸ್ಫೋರ್ಟ್ಸ್ ಆ್ಯಂಡ್ ಮೀಡಿಯಾ ಪ್ರೈವೆಟ್ ಲಿಮಿಟೆಡ್ (ಇಎಸ್‌ಪಿಎಲ್) ನಲ್ಲಿ ಮನೋಜ್ ಜೈನ್ ಅವರ ಎಂಕೆ ಮೀಡಿಯಾ ಪ್ರೈವೆಟ್ ಲಿಮಿಟೆಡ್ ಹೂಡಿಕೆ ಮಾಡಿತ್ತು. ಆದರೆ ಇದಾದನಂತರ ಇಎಸ್‌ಪಿಎಲ್ ಈ ವಿಚಾರದ ಬಗ್ಗೆ ಯಾವುದೇ ಮಾತುಕತೆ ನಡೆಸಿಲ್ಲ. ಆದ್ದರಿಂದ ತಮಗೆ ಮೋಸವಾಗಿದೆ ಎಂದು ಎಂಕೆ ಮೀಡಿಯದ ಹೆಚ್ಚುವರಿ ನಿರ್ದೇಶಕ ದೇಬಶಿಶ್ ದೂರು ನೀಡಿದ್ದರು.

ಇಎಸ್‌ಪಿಎಲ್ ನಲ್ಲಿ ಹೂಡಿಕೆ ನಡೆಸಿದರೆ ಎರಡು ವರ್ಷಗಳಲ್ಲಿ ಆ ಹಣದ 10 ಪಟ್ಟು ಹಣ ಹೂಡಿಕೆದಾರರರಿಗೆ ಸಿಗುತ್ತೆ ಎಂದು ಶಿಲ್ಪಾ ದಂಪತಿ ಮತ್ತು ಇತರರು  ನಂಬಿಸಿದ್ದರು. ಮಾತ್ರವಲ್ಲದೆ ಶಿಲ್ಪಾ ಅವರ ಕಂಪನಿಯ 20 ಲಕ್ಷ ಇಕ್ವಿಟಿ ಶೇರ್‌ನ್ನು ಎಂಕೆ ಕಂಪನಿಗೆ ಹಂಚಿಕೆ ಮಾಡಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.