ಜಿಹಾದಿಯಲ್ಲಿ ಸಂತೋಷವಿದೆ. ಮತ್ತೆ ಭಾರತಕ್ಕೆ ಬರಲ್ಲ: ಭಾರತೀಯ ಯುವಕ
ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ(ಇಸಿಸ್) ಉಗ್ರ ಸಂಘಟನೆ ಸೇರಿದ್ದ ಭಾರತೀಯ ಮೂಲದ ಯುವಕನೊಬ್ಬ ಜಿಹಾದಿ ಕೆಲಸದಲ್ಲಿ ನಾನು ಖುಷಿಯಾಗಿದ್ದೇನೆ.

ಕಲ್ಯಾಣ: ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ(ಇಸಿಸ್) ಉಗ್ರ ಸಂಘಟನೆ ಸೇರಿದ್ದ ಭಾರತೀಯ ಮೂಲದ ಯುವಕನೊಬ್ಬ ಜಿಹಾದಿ ಕೆಲಸದಲ್ಲಿ ನಾನು ಖುಷಿಯಾಗಿದ್ದೇನೆ. ಮತ್ತೇಂದು ಭಾರತಕ್ಕೆ ಬರುವುದಿಲ್ಲ ಎಂದು ಪೋಷಕರಿಗೆ ತಿಳಿಸಿದ್ದಾನೆ.
ಕಳೆದ ವರ್ಷ ಕಲ್ಯಾಣದಿಂದ ತೆರಳಿದ್ದ ನಾಲ್ವರು ಯುವಕರ ಪೈಕಿ ಅರೀಬ್ ಮಜೀದ್ ಎಂಬಾತ ಭಾರತಕ್ಕೆ ಮರಳಿದ್ದು, ಆದರೆ ಅಲ್ಲೆ ಉಳಿದಿರುವ ಫಹಾದ್ ಶೇಖ್ ತನ್ನ ಕುಟುಂಬಸ್ಥರೊಂದಿಗೆ ಸಂಕರ್ಪಕದಲ್ಲಿದ್ದು, ಪೋಷಕರ ಒತ್ತಾಯಕ್ಕೆ ಮಣಿಯದ ಶೇಖ್ ಜಿಹಾದಿ ಕೆಲಸದಲ್ಲಿ ನಾನು ಖುಷಿಯಾಗಿದ್ದೇನೆ. ಮತ್ತೆ ಭಾರತಕ್ಕೆ ಮರಳುವುದಿಲ್ಲ ಎಂದು ಹೇಳಿದ್ದಾನೆ. ಅಲ್ಲದೆ ತಮ್ಮ ಜತೆ ಬಂದಿದ್ದ ಶಮೀಮ್ ಟಂಕಿ ಎಂಬಾತ ಮೃತಪಟ್ಟಿದ್ದಾನೆ ಎಂಬ ಮಾಹಿತಿ ನೀಡಿದ್ದು, ಟಂಕಿಯ ಫೋಟೋವನ್ನು ಕಳುಹಿಸಿದ್ದಾನೆ.
ಅರೀಬ್ ಮಜೀದ್ ಸ್ವದೇಶಕ್ಕೆ ಮರಳಿದಂತೆ ತಮ್ಮ ಮಗನು ಬರಲಿ ಎಂದು ಪೋಷಕರು ಹಾಗೂ ಕೆಲ ಸ್ನೇಹಿತರು ಪೋನ್ ಅಥವಾ ಸ್ಕೈಪೆ ಮೂಲಕ ಸಂಕರ್ಪಕಿಸುತ್ತಿದ್ದು ಭಾರತಕ್ಕೆ ಮರಳುವಂತೆ ಒತ್ತಾಯಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


