ಯುಪಿಯಲ್ಲಿ 3 ದಲಿತ ಹುಡುಗಿರ ಮೃತದೇಹ ಪತ್ತೆ, ಪೋಷಕರಿಂದ ಗ್ಯಾಂಗ್‌ರೇಪ್ ಆರೋಪ
ಉತ್ತರಪ್ರದೇಶದ ದೇವರಿಯ ಜಿಲ್ಲೆಯ ಮೂವರು ದಲಿತ ಹುಡುಗಿಯರು ಕಳೆದ ಶುಕ್ರವಾರ ನಾಪತ್ತೆಯಾಗಿದ್ದು, ಅವರ ಮೃತದೇಹಗಳು ಶನಿವಾರ ಪತ್ತೆಯಾಗಿದ್ದು....

ಲಖನೌ: ಉತ್ತರಪ್ರದೇಶದ ದೇವರಿಯ ಜಿಲ್ಲೆಯ ಮೂವರು ದಲಿತ ಹುಡುಗಿಯರು ಕಳೆದ ಶುಕ್ರವಾರ ನಾಪತ್ತೆಯಾಗಿದ್ದು, ಅವರ ಮೃತದೇಹಗಳು ಶನಿವಾರ ಪತ್ತೆಯಾಗಿದ್ದು, ಹುಡುಗಿಯರ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ಮೃತಪಟ್ಟಿರುವ ಮೂವರು ಹುಡುಗಿಯರ ಪೈಕಿ ಇಬ್ಬರು ಅಪ್ರಾಪ್ತೆಯರಾಗಿದ್ದು, ಇವರೆಲ್ಲ ಕಟಿಯಾರ್ ಗ್ರಾಮದವರು ಎಂದು ಹೇಳಲಾಗುತ್ತಿದೆ.
ಮೂವರು ಹುಡುಗಿಯರ ಪೈಕಿ ಒಬ್ಬಳಿಗೆ 18 ವರ್ಷ, ಅಪ್ರಾಪ್ತೆ ಬಾಲಕಿಯರಿಗೆ 13 ಮತ್ತು 9 ವರ್ಷದವರಾಗಿದ್ದು, ಇವರೆಲ್ಲ ಶುಕ್ರವಾರ ಮಧ್ಯಾಹ್ನ ಹಸುಗಳಿಗೆ ಮೇವು ಸಂಗ್ರಹಿಸಲು ತೆರಳಿದ್ದು, ಮತ್ತೆ ಮನೆಗೆ ವಾಪಸ್ಸಾಗಿರಲಿಲ್ಲ ಪೋಷಕರ ಹೇಳಿದ್ದಾರೆ.
ಮಾರನೇ ದಿನ ಅವರ ಮೃತದೇಹಗಳು ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿದ್ದು, ಅವರ ತಲೆ ಮತ್ತು ಕುತ್ತಿಗೆ ಮೇಲೆ ಗಾಯದ ಗುರುತುಗಳಾಗಿವೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನು ಕಳಿಸಿದ್ದು ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.
ತಲೆಗೆ ತೀವ್ರ ಗಾಯಗಳಾಗಿರುವುದರಿಂದ ಅವರು ಮೃತಪಟ್ಟಿದ್ದು, ಅವರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಇಲ್ಲ ಎಂಬುದನ್ನು ಮರಣೋತ್ತರ ವರದಿ ನಂತರ ತಿಳಿಸಿಲಾಗುವುದು ಎಂದು ದೇವರಿಯ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ಕುಮಾರ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


