ಕಲ್ಲಿದ್ದಲು, ಗಣಿ ವಿಧೇಯಕ ಪಾಸ್
ಹಣಕಾಸು ಕ್ಷೇತ್ರದಲ್ಲಿ ಸುಧಾರ ಣೆಗಳನ್ನು ಮಾಡಲು ಮುಂದಾಗಿರುವ ಮೋದಿ ಸರ್ಕಾರಕ್ಕೆ ನೆಮ್ಮದಿ. ಬಹುಚರ್ಚಿತ ಕಲ್ಲಿದ್ದಲು ಮತ್ತು ಗಣಿ ಮತ್ತು ಖನಿಜ ವಿಧೇಯಕ ರಾಜ್ಯಸಭೆ...

ನವದೆಹಲಿ: ಹಣಕಾಸು ಕ್ಷೇತ್ರದಲ್ಲಿ ಸುಧಾರಣೆಗಳನ್ನು ಮಾಡಲು ಮುಂದಾಗಿರುವ ಮೋದಿ ಸರ್ಕಾರಕ್ಕೆ ನೆಮ್ಮದಿ. ಬಹುಚರ್ಚಿತ ಕಲ್ಲಿದ್ದಲು ಮತ್ತು ಗಣಿ ಮತ್ತು ಖನಿಜ ವಿಧೇ
ಯಕ ರಾಜ್ಯಸಭೆ ಅನುಮೋದನೆ ಪಡೆದಿದೆ. 117 ಮಂದಿ ಪರವಾಗಿ, 69 ಮಂದಿ ವಿರೋಧವಾಗಿ ಮತ ಹಾಕಿದ್ದಾರೆ. ಕಾಂಗ್ರೆಸ್ ಮತ್ತು ಎಡಪಕ್ಷಗಳ ಸದಸ್ಯರು ಎರಡೂ
ವಿಧೇಯಕಗಳ ವಿರುದ್ಧ ಮತ ಹಾಕಿದರೆ, ಜೆಡಿಯು ಸಭಾತ್ಯಾಗ ಮಾಡಿತು. ಟಿಎಂಸಿ, ಎಸ್‍ಪಿ, ಬಿಎಸ್‍ಪಿ ಸರ್ಕಾರದ ಪರ ನಿಂತ ಹಿನ್ನೆಲೆಯಲ್ಲಿ ಶುಕ್ರವಾರ ಸುಲಭವಾಗಿ 2
ವಿಧೇಯಕಗಳಿಗೆ ಅನುಮತಿ ಸಿಕ್ಕಿತು. ಗಣಿ ಮತ್ತು ಖನಿಜ ವಿಧೇಯಕವನ್ನು ಲೋಕಸಭೆ ಯಲ್ಲಿ ಮಂಡಿಸಿದ ವೇಳೆ, ಕೇವಲ 20 ನಿಮಿಷದಲ್ಲಿ ಅದಕ್ಕೆ ಅನುಮೋದನೆ ಸಿಕ್ಕಿತ್ತು.
ಕಪ್ಪುಹಣ ವಿಧೇಯಕ ಮಂಡನೆ: ಈ ಮಧ್ಯೆ ಕೇಂದ್ರ ಸರ್ಕಾರ ಬಹು ಚರ್ಚಿತ ಬಹಿರಂಗಪಡಿಸದ ವಿದೇಶಿ ಆದಾಯ ಮತ್ತು ಆಸ್ತಿ(ಹೊಸ ತೆರಿಗೆ ವಿ„ಸುವಿಕೆ) ವಿಧೇಯಕ
2015ನ್ನು ಲೋಕಸಭೆಯಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸಿದ್ದಾರೆ. ಪ್ರಸ್ತಾವಿತ ವಿಧೇಯಕದಲ್ಲಿ ಉಲ್ಲೇಖಿಸಿ ರುವಂತೆ ಮಾಹಿತಿ ಬಹಿರಂಗಪಡಿಸದೇ ಇದ್ದರೆ 10 ವರ್ಷಗಳ ಕಠಿಣ ಸಜೆ, ಶೇ. 90ರಷ್ಟು ದಂಡ ವಿಧಿಸುವ ಅವಕಾಶ ಇದೆ.
ಮತ್ತೊಮ್ಮೆ ಸುಗ್ರೀವಾಜ್ಞೆ ?: ಕೇಂದ್ರದ ಮಹತ್ವಾಕಾಂಕ್ಷಿ ಭೂಸ್ವಾಧೀನ ವಿಧೇಯಕಕ್ಕೆ ಲೋಕಸಭೆ ಅಂಗೀಕಾರ ನೀಡಿದೆ. ಆದರೆ ರಾಜ್ಯಸಭೆಯಲ್ಲಿ ಮಂಡನೆಗೆ ಕಾಂಗ್ರೆಸ್ ಮತ್ತಿತರ ಪಕ್ಷಗಳು ವಿರೋಧಿಸಿವೆ. ಹೀಗಾಗಿ, ಮತ್ತೊಮ್ಮೆ ಈ ಬಗ್ಗೆ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸುವ ಸಾಧ್ಯತೆ ಇದೆ. ಈ ಬಗ್ಗೆ ಕೇಂದ್ರ ಸಂಪುಟ ಶನಿವಾರ ನಿರ್ಧಾರ
ಕೈಗೊಳ್ಳಲಿದೆ ಎಂದಿದ್ದಾರೆ ವಿತ್ತ ಸಚಿವ ಅರುಣ್ ಜೇಟ್ಲಿ. ಮುಂದಿನ ತಿಂಗಳ 5ಕ್ಕೆ ಸದ್ಯ ಹೊರಡಿಸಿರುವ ಸುಗ್ರೀವಾಜ್ಞೆಯ ಅವಧಿ ಮುಕ್ತಾಯವಾಗುತ್ತದೆ.
ಪ್ರಮುಖ ವಿಧೇಯಕಗಳನ್ನು ಅಂಗೀಕರಿಸುವ ನಿಟ್ಟಿನಲ್ಲಿ ಕಲಾಪ 2 ದಿನ ವಿಸ್ತರಣೆಯಾಗುತ್ತದೆ ಎಂದು ನಿರೀಕ್ಷೆ ಇದ್ದಾಗಲೇ ಲೋಕಸಭೆ ಮತ್ತು ರಾಜ್ಯಸಭೆ
ಕಲಾಪಗಳನ್ನು ಏ.20ರ ವರೆಗೆ ಮುಂದೂಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


