ಬ್ರೇಕ್ ವೈಫಲ್ಯ ದುರಂತಕ್ಕೆ ಕಾರಣ?
ಉತ್ತರ ಪ್ರದೇಶದ ರಾಯ್ ಬರೇಲಿ ಸಮೀಪ ನಡೆದ ರೈಲು ದುರಂತಕ್ಕೆ ಬ್ರೇಕ್ ವೈಫಲ್ಯವೇ ಕಾರಣ. ಹೀಗೆಂದು ರೈಲ್ವೆ ಇಲಾಖೆಯ ಮೂಲಗಳು...

ಲಖನೌ/ ನವದೆಹಲಿ: ಉತ್ತರ ಪ್ರದೇಶದ ರಾಯ್ ಬರೇಲಿ ಸಮೀಪ ನಡೆದ ರೈಲು ದುರಂತಕ್ಕೆ ಬ್ರೇಕ್ ವೈಫಲ್ಯವೇ ಕಾರಣ. ಹೀಗೆಂದು ರೈಲ್ವೆ ಇಲಾಖೆಯ ಮೂಲಗಳು ಖಚಿತಪಡಿಸಿವೆ. ರೈಲಿನ ಲೋಕೋಮೋ ಟಿವ್ ಮತ್ತು ಕೋಚ್‍ಗಳ ನಡುವೆ ಇರುವ ಬ್ರೇಕ್ ಪೈಪ್ ಮುರಿದು ಹೋಗಿದ್ದರಿಂದ ದುರಂತಕ್ಕೆ ಕಾರಣಕ್ಕೆ ಎಂದು ಇಲಾಖೆಯ ಉನ್ನತ ಮೂಲಗಳ ಹೇಳಿಕೆ. ಆದರೂ ಮೇಲ್ನೋಟಕ್ಕೆ ಚಾಲಕ ಸಿಗ್ನಲ್ ಉಲ್ಲಂಘಿಸಿದ್ದೇ ಕಾರಣ. ಘಟನೆ ಬಗ್ಗೆ ಉತ್ತರ ವಲಯದ ರೈಲ್ವೆ ಸುರಕ್ಷತಾ ಆಯುಕ್ತರು ತನಿಖೆ ನಡೆಸಲಿದ್ದಾರೆ ಎಂದು ರೈಲ್ವೆ ಸಚಿವ ಸುರೇಶ್ ಪ್ರಭು ತಿಳಿಸಿದ್ದಾರೆ. ಇದಾದ ಬಳಿಕವೇ ಘಟನೆ ಬಗ್ಗೆ ಕಾರಣತಿಳಿದುಬರಲಿದೆ ಎಂದು ರೈಲ್ವೆ ಸಚಿವರು ತಿಳಿಸಿದ್ದಾರೆ. ಇದೇ ವೇಳೆ, ಘಟನೆ ಬಗ್ಗೆ ರಾಷ್ಟ್ರಪತಿ, ಪ್ರಧಾನಿ, ಉ.ಪ್ರ.ಸಿಎಂ ಅಖಿಲೇಶ್ ಯಾದವ್ ಶೋಕ ವ್ಯಕ್ತಪಡಿಸಿದ್ದಾರೆ. ಪರಿಹಾರ: ಮೃತರ ಸಂಬಂಧಿಗಳಿಗೆ ರು 2 ಲಕ್ಷ ಹಾಗೂ ಗಂಭೀರವಾಗಿ ಗಾಯಗೊಂಡವರಿಗೆ ರು. 50 ಸಾವಿರ ಪರಿಹಾರ ಪ್ರಕಟಿಸ ಲಾಗಿದೆ. ರೈಲು ದುರಂತದ ವಿಚಾರ ಉ.ಪ್ರ. ವಿಧಾನ ಸಭೆಯಲ್ಲಿ ಪ್ರಸ್ತಾಪವಾಗಿ ಗದ್ದಲ ಏರ್ಪ ಟ್ಟಿತು. ಬಿಎಸ್‍ಪಿ ಶಾಸಕರು ವಿಚಾರ ಪ್ರಸ್ತಾಪಿಸಿ ಗದ್ದಲ ಎಬ್ಬಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


