ದೇಶ

ಮತ್ತೆ ಬಡವರತ್ತ ಕಾಂಗ್ರೆಸ್ ಹೆಜ್ಜೆ!

ಸತತ ಸೋಲಿನಿಂದ ಕಂಗೆಟ್ಟಿರುವ ಶತಮಾನದ ಇತಿಹಾಸ ಹೊಂದಿರುವ ಕಾಂಗ್ರೆಸ್ ರಾಹುಲ್ ಗಾಂಧಿ ನೇತೃತ್ವದಲ್ಲಿ ಮತ್ತೆ ತಲೆ ಎತ್ತಲು ತಯಾರಿ ನಡೆಸಿದೆ. ಇದಕ್ಕಾಗಿ `ಬಡವರ ಪರ' ಮುಖ ಹೊತ್ತು ಭವಿಷ್ಯದಲ್ಲಿ ಬಿಜೆಪಿ ವಿರುದ್ಧ ಸೆಣೆಸಲು ನಿರ್ಧರಿಸಿದೆ....

ಮತ್ತೆ ಬಡವರತ್ತ ಕಾಂಗ್ರೆಸ್ ಹೆಜ್ಜೆ!
ಕಾಂಗ್ರೆಸ್
Published On :

ನವದೆಹಲಿ: ಸತತ ಸೋಲಿನಿಂದ ಕಂಗೆಟ್ಟಿರುವ ಶತಮಾನದ ಇತಿಹಾಸ ಹೊಂದಿರುವ  ಕಾಂಗ್ರೆಸ್ ರಾಹುಲ್ ಗಾಂಧಿ ನೇತೃತ್ವದಲ್ಲಿ ಮತ್ತೆ ತಲೆ ಎತ್ತಲು ತಯಾರಿ ನಡೆಸಿದೆ. ಇದಕ್ಕಾಗಿ `ಬಡವರ ಪರ' ಮುಖ ಹೊತ್ತು ಭವಿಷ್ಯದಲ್ಲಿ ಬಿಜೆಪಿ ವಿರುದ್ಧ ಸೆಣೆಸಲು ನಿರ್ಧರಿಸಿದೆ.

12 ದಿನಗಳ ಧ್ಯಾನ ಮುಗಿಸಿ ಕಾಂಗ್ರೆಸ್ ಯುವರಾಜ ಹಿಂದಿರುಗಿದೊಡನೆ ಏಪ್ರಿಲ್ ನಲ್ಲಿ ನಡೆಯುವ ಎಐಸಿಸಿ ಅಧಿವೇಶನದಲ್ಲಿ ಈ ಹೊಸ ನಿಲುವು ಪ್ರಕಟವಾಗುವ ಸಾಧ್ಯತೆ ಇದೆ. ಸದ್ಯ ಅಲ್ಪಸಂಖ್ಯಾತರು ಮತ್ತು ಹಿಂದುಳಿದವರ ಪರ ಎಂಬ ಬ್ರಾಂಡ್ ಕಾಂಗ್ರೆಸ್‍ಗಿದೆ. ಅದರಿಂದ ಹೊರಬಂದು `ಬಡವರ ಕಾಂಗ್ರೆಸ್' ಎನ್ನುವ ಇಮೇಜ್ ಬೆಳೆಸಿಕೊಳ್ಳಲು ಪಕ್ಷ ಹೊರಟಿದೆ.

1971ರ ಚುನಾವಣೆಯಲ್ಲಿ ಇಂದಿರಾಗಾಂಧಿ ವಿರೋಧ ಪಕ್ಷಗಳನ್ನು ಚುನಾವಣೆಯಲ್ಲಿ ಹಣಿಯಲು ಬಳಸಿದ್ದು ಇದೇ ರೀತಿಯ ತಂತ್ರ. ವಿರೋಧಿಗಳು `ಇಂದಿರಾ ಹಟಾವೋ' ಎನ್ನುವ ಘೋಷಣೆ ಕೂಗುತ್ತಿದ್ದಾಗ `ಗರೀಬಿ ಹಟಾವೋ' ಎನ್ನುವ ಮಂತ್ರ ಪಠಿಸಿ ಇಂದಿರಾ ಮತ್ತೆ ಅಧಿಕಾರಕ್ಕೇರಿದ್ದರು. ಈಗ ರಾಹುಲ್ ಬಣವೂ ಅದೇ ರೀತಿಯ ತಂತ್ರಗಾರಿಕೆ ಹೆಣೆದಿದೆ. ಸದ್ಯದಲ್ಲೇ ರಾಹುಲ್‍ಗಾಂಧಿಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಪಟ್ಟ ಕಟ್ಟಲಾಗುವುದು. ಆ ಬಳಿಕ ಆಮ್ ಆದ್ಮಿಯಂತೆ ಎಲ್ಲ ಧರ್ಮಗಳ ಬಡವರ ಪರ ಪಕ್ಷ ಎಂಬ ಸಿದ್ಧಾಂತದೊಡನೆ ಪಕ್ಷವನ್ನು ಪುನರ್ ರಚಿಸಲು ರಾಹುಲ್ ಬಣ ಚಿಂತನೆ ನಡೆಸಿದೆ.

ರೈತರ ಸಾಲ ಮನ್ನಾ, ಉದ್ಯೋಗ ಖಾತ್ರಿ ಯೋಜನೆ, ಆಹಾರಭದ್ರತೆ ಕಾಯಿದೆ, ಮತ್ತು ಭೂಸ್ವಾಧೀನ ಪರಿಹಾರ ಮೊತ್ತದ ಹೆಚ್ಚಳ , ಮತ್ತು ಪುನರ್ವಸತಿ ಯೋಜನೆಗಳು ಕಾಂಗ್ರೆಸ ಬಡವರ ಪರ ತಂದ ಯೋಜನೆಗಳು ಎಂದು ಬ್ರಾಂಡ್ ಮಾಡಲು ಹೊರಟಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.