ನಾಗಾಲ್ಯಾಂಡ್ ಅತ್ಯಾಚಾರಿ ಹತ್ಯೆ: 18 ಮಂದಿ ಬಂಧನ
ನಾಗಾಲ್ಯಾಂಡ್ ನ ದಿಮಾಪುರ್ ಜೈಲಿನೊಳಗೆ ನುಗ್ಗಿ ಅತ್ಯಾಚಾರಿ ಆರೋಪಿಯನ್ನು ಹೊರಗೆಳೆದು ಹತ್ಯೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ನಾಗಲ್ಯಾಂಡ್ ಸರ್ಕಾರ ಭಾನುವಾರ 18 ಮಂದಿಯನ್ನು ಬಂಧಿಸಿದೆ.

ದಿಮಾಪುರ್: ನಾಗಾಲ್ಯಾಂಡ್ ನ ದಿಮಾಪುರ್ ಜೈಲಿನೊಳಗೆ ನುಗ್ಗಿ ಅತ್ಯಾಚಾರಿ ಆರೋಪಿಯನ್ನು ಹೊರಗೆಳೆದು ಹತ್ಯೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ನಾಗಲ್ಯಾಂಡ್ ಸರ್ಕಾರ ಭಾನುವಾರ 18 ಮಂದಿಯನ್ನು ಬಂಧಿಸಿದೆ.
ಈ ಪ್ರಕರಣ ನಡೆಯುತ್ತದಂತೆ ಈ ದುಷ್ಕೃತ್ಯದ ಹಿಂದಿರುವ ಜನರನ್ನು ಕೂಡಲೇ ಪತ್ತೆ ಹಚ್ಚಿ ಬಂಧಿಸುವಂತೆ ಕೇಂದ್ರ ಸರ್ಕಾರ ಶನಿವಾರ ನಾಗಲ್ಯಾಂಡ್ ಸರ್ಕಾರಕ್ಕೆ ಸೂಚಿಸಿತ್ತು.
ಅತ್ಯಾಚಾರಿ ಆರೋಪಿ ಸೈಯದ್ ಫರೀದ್ ಖಾನ್ ಹತ್ಯೆ ಪ್ರಕರಣ ಸಂಬಂಧ ಯಾರೆಲ್ಲ ಶಾಮೀಲಾಗಿದ್ದಾರೋ ಅವರನ್ನು ಪತ್ತೆ ಹಚ್ಚಲಾಗಿದ್ದು, ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ನಾಗಾಲ್ಯಾಂಡ್ ಪೊಲೀಸ್ ಮೂಲಗಳು ತಿಳಿಸಿರುವುದಾಗಿ ವರದಿ ತಿಳಿಸಿದೆ.
ಫೆ.23ರಂದು ಬಾಂಗ್ಲಾದೇಶ ಮೂಲದ ಸೈಯದ್ ಫರೀದ್ ಖಾನ್(35) ಎಂಬ ವ್ಯಾಪಾರಿಯೊಬ್ಬ ನಾಗಾ ಬಾಲಕಿಯನ್ನು ಅತ್ಯಾಚಾರ ಮಾಡಿದ್ದ. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆತನನ್ನು ಜೈಲಿಗಟ್ಟಿದ್ದರು. ಆದರೆ ನಾಗಾ ಜನರು ಉದ್ರಿಕ್ತಗೊಂಡು ಜೈಲಿನೊಳಗೆ ನುಗ್ಗಿ ಆರೋಪಿಯನ್ನು ಹೊರಗೆಳೆದು ತಂದು ಹಿಗ್ಗಾಮುಗ್ಗಾ ಥಳಿಸಿ ಕೊಂದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


