ವಿಮಾನ ಪತನ: ಹಾಲಿವುಡ್ ನಟ ಹ್ಯಾರಿಸನ್‌ಗೆ ಗಂಭೀರ ಗಾಯ

ಲಾಸ್‌ಏಂಜಲಿಸ್: ಹಾಲಿವುಡ್ ನಟ ಹ್ಯಾರಿಸನ್ ಫೋರ್ಡ್ ಪ್ರಯಾಣಿಸುತ್ತಿದ್ದ ಲಘು ವಿಮಾನ ಗುರುವಾರ ಅಪಘಾತಕ್ಕಿಡಾಗಿದ್ದು, ಘಟನೆಯಲ್ಲಿ ಹ್ಯಾರಿಸನ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಲಾಸ್‌ಏಂಜಲಿಸ್‌ನ ಹೊರವಲಯದಲ್ಲಿರುವ ಗಾಲ್ಫ್ ಕೋರ್ಸ್‌ನಲ್ಲಿ ಈ ಅವಘಡ ಸಂಭವಿಸಿದ್ದು, 72 ವರ್ಷದ ಹಾಲಿವುಡ್ ಹಿರಿಯ ನಟನ ತಲೆ ಮತ್ತು ದೇಹದ ಇತರ ಭಾಗಗಳಿಗೆ ಬಲವಾದ ಏಟು ಬಿದ್ದಿದೆ ಎಂದು ಟಿಎಂಝಡ್ ಸೆಲೆಬ್ರಿಟಿ ವೆಬ್‌ಸೈಟ್ ವರದಿ ಮಾಡಿದೆ.
ಹ್ಯಾರಿಸನ್ ಫೋರ್ಡ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಅವರಿಗಾದ ಗಂಭೀರ ಗಾಯಗಳ ಕುರಿತು ಇನ್ನು ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಹ್ಯಾರಿಸನ್ ಅವರ ವಿಂಟೇಜ್ ಲಘು ವಿಮಾನ ಗುರುವಾರ ಮಧ್ಯಾಹ್ನ ಪತನಗೊಂಡಿದ್ದು, ಹಾಲಿವುಡ್ ನಟನನ್ನು ಗುರುತಿಸಿದ ಲಾಸ್‌ಏಂಜಲಿಸ್ ಅಗ್ನಿ ಶಾಮಕ ದಳದ ಸಿಬ್ಬಂದಿ, ಸಿಂಗಲ್ ಇಂಜಿನ್‌ನ ಎರಡು ಸೀಟುಗಳ ಹಳೇ ಲಘು ವಿಮಾನ ಪತನವಾದ ಪರಿಣಾಮ ಪೈಲಟ್ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದಷ್ಟೇ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


