ಇನ್ನು ಮುಂದೆ ಎಲ್ಲೆಂದರಲ್ಲಿ ಕಾಂಡೋಮ್, ನ್ಯಾಪ್ಕಿನ್ ಎಸೆಯುವಂತಿಲ್ಲ!
ಇನ್ನು ಮುಂದೆ ನಾಗರಿಕರು ಎಲ್ಲೆಂದರಲ್ಲಿ ನ್ಯಾಪ್ಕಿನ್, ಕಾಂಡೋಮ್ ಮತ್ತು ಟ್ಯಾಂಪರ್ಸ್ ಗಳನ್ನು ಎಸೆಯುವಂತಿಲ್ಲ. ಏಕೆಂದರೆ ತ್ಯಾಜ್ಯ ವಿಲೇವಾರಿಯಲ್ಲಿ...

ನವದೆಹಲಿ: ಇನ್ನು ಮುಂದೆ ನಾಗರಿಕರು ಎಲ್ಲೆಂದರಲ್ಲಿ ನ್ಯಾಪ್ಕಿನ್, ಕಾಂಡೋಮ್ ಮತ್ತು ಟ್ಯಾಂಪರ್ಸ್ ಗಳನ್ನು ಎಸೆಯುವಂತಿಲ್ಲ. ಏಕೆಂದರೆ ತ್ಯಾಜ್ಯ ವಿಲೇವಾರಿಯಲ್ಲಿ ಹೊಸ ನಿಯಮ ಜಾರಿಗೆ ತರಲಾಗಿದ್ದು, ಇದರಲ್ಲಿ 'ಸ್ಯಾನಿಟರಿ ವೇಸ್ಟ್' ಬಗ್ಗೆ ಪ್ರತ್ಯೇಕವಾಗಿ ವ್ಯಾಖ್ಯಾನಿಸಲಾಗಿದೆ.
ಹೊಸ ನಿಯಮದಲ್ಲಿ ಡೈಪರ್ಸ್, ನ್ಯಾಪ್ಕಿನ್ಸ್, ಟ್ಯಾಂಪರ್ಸ್, ಸ್ಯಾನಿಟರಿ ಟವೆಲ್ಸ್ ಮತ್ತು ಕಾಂಡೋಮ್‌ಗಳನ್ನು ಹೇಗೆ ವಿಲೇವಾರಿ ಮಾಡಬೇಕು ಎಂಬುದರ ಬಗ್ಗೆ ವಿವರಿಸಲಾಗಿದೆ. 'ತ್ಯಾಜ್ಯ ಉತ್ಪಾದಕರ ಕರ್ತವ್ಯಗಳು' ಎಂಬ ಸೆಕ್ಷನ್ ಅಡಿಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿಲಾಗಿದೆ.
ನಾಗರಿಕರು 'ಸ್ಯಾನಿಟರಿ ವೇಸ್ಟ್‌ಗಳನ್ನು ಬಳಸಿದ ಕೂಡಲೇ ದಿನಪತ್ರಿಕೆ ಅಥವಾ ಇತರೆ ಜೈವಿಕವಾಗಿ ಕರಗುವಂಥ ಉತ್ಪನ್ನಗಳಲ್ಲಿ ಸುತ್ತಿ, ಒಣ ತ್ಯಾಜ್ಯಗಳನ್ನು ಇರಿಸುವಂತಹ ಪ್ರತ್ಯೇಕ ಕಸದ ಬುಟ್ಟಿಯಲ್ಲಿ ಹಾಕಬೇಕು' ಎಂದು ಹೊಸ ನಿಯಮದಲ್ಲಿ ವಿವರಿಸಲಾಗಿದೆ.
ಒಣ ತ್ಯಾಜ್ಯಗಳನ್ನು ರಸ್ತೆ, ಖಾಲಿ ಜಾಗ, ಚರಂಡಿ ಅಥವಾ ನೀರು ಇರುವ ಜಾಗದಲ್ಲಿ ಎಸೆಯುವಂತಿಲ್ಲ ಎಂದು ಒಣ ತ್ಯಾಜ್ಯ ವಿಲೇವಾರಿ ಕಾನೂನಿನಲ್ಲಿ ಹೇಳಲಾಗಿದೆ.
ಎಲ್ಲಾ ರೀತಿಯ ಕಸ ವಿಲೇವಾರಿಯ ಜವಾಬ್ದಾರಿಯನ್ನೂ ನಗರಾಡಳಿತಕ್ಕೆ ವಹಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಸೂಕ್ತವಾದ ಕಾರ್ಯಕ್ರಮಗಳನ್ನು ಹಾಗೂ ನಿಯಮಗಳನ್ನು ಮಾಡಿಕೊಳ್ಳಬಹುದಾಗಿದೆ. ಆದರೆ, ಇನ್ನು ಮುಂದೆ ಎಲ್ಲೆಂದರಲ್ಲಿ, ಹೇಗೆಂದರೆ ಹಾಗೆ ಮನ ಬಂದಂತೆ ಎಸೆಯುವಂತಹ ಸ್ಯಾನಿಟರಿ ಕಡಿವಾಣ ಹಾಕಲೇಬೇಕು ಎಂದು ಹೊಸ ನಿಯಮದಲ್ಲಿ ಸ್ಪಷ್ಟಪಡಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


