ಎಸಿಬಿ ಮುಖ್ಯಸ್ಥ ಎಂ.ಕೆ ಮೀನಾ ಅಧಿಕಾರ ಮೊಟಕುಗೊಳಿಸಿದ ಎಎಪಿ
ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ದೆಹಲಿ ಭ್ರಷ್ಟಾಚಾರ ವಿರೋಧಿ ಶಾಖೆ ನೇಮಕ ಮಾಡಿದ್ದ ಎಂ.ಕೆ ಮೀನಾ ಅವರ ಅಧಿಕಾರವನ್ನು ಅಪ್ ಸರ್ಕಾರ ಮೊಟಕುಗೊಳಿಸಿದೆ.

ನವದೆಹಲಿ: ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ದೆಹಲಿ ಭ್ರಷ್ಟಾಚಾರ ವಿರೋಧಿ ಶಾಖೆಗೆ ನೇಮಕ ಮಾಡಿದ್ದ ಎಂ.ಕೆ ಮೀನಾ ಅವರ ಅಧಿಕಾರವನ್ನು ಅಪ್ ಸರ್ಕಾರ ಮೊಟಕುಗೊಳಿಸಿದೆ. ದೆಹಲಿ ಹೈಕೋರ್ಟ್ ನಿಂದ ಅಂತಿಮ ತೀರ್ಪು ಬರುವವರೆಗೂ ತರಬೇತಿ ಕೆಲಸ ಹಾಗೂ ಪ್ರಕರಣಗಳ ಮೇಲ್ವಿಚಾರಣೆ ನೋಡಿಕೊಳ್ಳುವಂತೆ ದೆಹಲಿ ಸರ್ಕಾರ ಮೀನಾ ಅವರಿಗೆ ಸೂತಿಸಿದೆ.
ಎಬಿಸಿ ಮುಖ್ಯಸ್ಥರಾಗಿ ನೇಮಕಗೊಂಡಿರುವ ಎಂ.ಕೆ ಮೀನಾ ಅವರನ್ನು ವಾಪಸ್ ಕರೆಸಿಕೊಳ್ಳಬೇಕೆಂದು ಆಪ್ ಸರ್ಕಾರ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದೆ. ಪ್ರಕರಣದ ತೀರ್ಪು ಇನ್ನು ಹೊರ ಬರಬೇಕಿರುವುದರಿಂದ ಅಲ್ಲಿಯವರೆಗೂ ಎಲ್ಲಾ ಮುಖ್ಯ ಕೆಲಸಗಳ ಮೇಲ್ವಿಚಾರಣೆಯನ್ನು ಹೆಚ್ಚುವರಿ ಆಯುಕ್ತ ಎಸ್.ಎಸ್ ಯಾದವ್ ನೋಡಿಕೊಳ್ಳಲು ಆಪ್ ಸರ್ಕಾರ ತಿಳಿಸಿದೆ.
ಎಂಕೆ ಮೀನಾ ಎಸಿಬಿಯ ಜಂಟಿ ಪೊಲೀಸ್ ಆಯುಕ್ತರಾಗಿ ನೇಮಕಗೊಂಡಿದ್ದಾರೆ. ಜಂಟಿ ಪೊಲೀಸ್ ಆಯುಕ್ತರಿಗೆ ಯಾವುದೇ ಒಂದು ನಿಖರವಾದ ಹುದ್ದೆ ಇರುವುದಿಲ್ಲ ಎಂದು ಆಪ್ ಸರ್ಕಾರ ಹೇಳಿದೆ, ಇನ್ನು ಜಾಗೃತ ದಳವೇ ಪ್ರಮುಖವಾಗಿದ್ದು, ಜಾಗೃತ ದಳ ನಿರ್ದೇಶಕರ ಅಡಿಯಲ್ಲಿ ಎಬಿಸಿ ಕೆಲಸ ಮಾಡಬೇಕು ಎಂದು ಆಪ್ ಸರ್ಕಾರ ಸಮರ್ಥಿಸಿಕೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


