ಲಲಿತ್ ಮೋದಿ ನನಗೆ ಕೆಲಸದ ಆಫರ್ ನೀಡಿದ್ದರು: ಸುಷ್ಮಾ ಪತಿ ಸ್ವರಾಜ್ ಕೌಶಲ್
ಲಲಿತ್ ಮೋದಿ ನನಗೆ ಕೆಲಸದ ಆಫರ್ ನೀಡಿದ್ದರು. ಆದರೆ ನಾನು ಅದನ್ನು ನಿರಾಕರಿಸಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಪತಿ ಸ್ವರಾಜ್ ಕೌಶಲ್ ತಿಳಿಸಿದ್ದಾರೆ....
ನವದೆಹಲಿ: ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿ ದಿನಕ್ಕೊಬ್ಬ ರಾಜಕಾರಣಿಗಳ ಹೆಸರಿನ ಜೊತೆ ಥಳುಕು ಹಾಕಿಕೊಳ್ಳುತ್ತಿದೆ. ಈ ನಡುವೆ ಲಲಿತ್ ಮೋದಿ ನನಗೆ ಕೆಲಸದ ಆಫರ್ ನೀಡಿದ್ದರು. ಆದರೆ ನಾನು ಅದನ್ನು ನಿರಾಕರಿಸಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಪತಿ ಸ್ವರಾಜ್ ಕೌಶಲ್ ತಿಳಿಸಿದ್ದಾರೆ.
ನಾನು ಕಳೆದ 20 ವರ್ಷಗಳಿಂದ ಲಲಿತ್ ಮೋದಿ ಅವರ ವಕೀಲನಾಗಿ ಕೆಲಸ ಮಾಡುತ್ತಿದ್ದೇನೆ. ಏಪ್ರಿಲ್ 15, 2015 ರಂದು ಲಲಿತ್ ಮೋದಿ ಇಂಡೋಫಿಲ್ ಬೋರ್ಡ್ ನಲ್ಲಿ ನಿರ್ದೇಶಕರಾಗಲು ಲಲಿತ್ ಮೋದಿ ನನಗೆ ಆಹ್ವಾನ ನೀಡಿದ್ದರು. ಏಪ್ರಿಲ್ 24 ರಂದು ಇಂಡೋಫಿಲ್ ಬೋರ್ಡ್ ನಿರ್ದೇಶಕ ಸ್ಥಾನ ತನಗೆ ಬೇಡ ಎಂದು ನಿರಾಕರಿಸಿದ್ದಾಗಿ ಸ್ವರಾಜ್ ಕೌಶಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ,
ಲಲಿತ್ ಮೋದಿ ಜೊತೆ ಸುಷ್ಮಾ ಸ್ವರಾಜ್ ಕುಟುಂಬಕ್ಕೆ ಇರುವ ಸಂಬಂಧದ ಬಗ್ಗೆ ನರೇಂದ್ರ ಮೋದಿ ದೇಶದ ಜನತೆಗೆ ವಿವರಣೆ ನೀಡಬೇಕೆಂದು ಕಾಂಗ್ರೆಸ್ ಆಗ್ರಹಿಸಿದೆ,
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

