ಇಂಡೋನೇಷ್ಯಾ ವಿಮಾನ ಪತನ: 116ಕ್ಕೇರಿದ ಸಾವಿನ ಸಂಖ್ಯೆ
ಇಂಡೋನೇಷ್ಯಾ ವಾಯುಪಡೆ ಸಾರಿಗೆ ವಿಮಾನವೊಂದು ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡು, ಮೆಡಾನ್ ನಗರದ ವಸತಿ ಪ್ರದೇಶದ ಮೇಲೆ ನುಗ್ಗಿದ ಪರಿಣಾಮ ನೂರಾರು ಮಂದಿ ಮೃತಪಟ್ಟಿದ್ದಾರೆ. ಮೂಲಗಳ ಪ್ರಕಾರ ಸಾವಿನ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 116ಕ್ಕೇರಿದೆ...

Published On :
ಮೆಡಾನ್: ಇಂಡೋನೇಷ್ಯಾ ವಾಯುಪಡೆ ಸಾರಿಗೆ ವಿಮಾನವೊಂದು ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡು, ಮೆಡಾನ್ ನಗರದ ವಸತಿ ಪ್ರದೇಶದ ಮೇಲೆ ನುಗ್ಗಿದ ಪರಿಣಾಮ ನೂರಾರು ಮಂದಿ ಮೃತಪಟ್ಟಿದ್ದಾರೆ. ಮೂಲಗಳ ಪ್ರಕಾರ ಸಾವಿನ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 116ಕ್ಕೇರಿದೆ.
ಎರಡೇ ನಿಮಿಷದಲ್ಲಿ ಪತನ
ಮಂಗಳವಾರ ಬೆಳಗ್ಗೆ ಭಾರತೀಯ ಕಾಲಮಾನ 5.08ಕ್ಕೆ ಹರ್ಕ್ಯುಲಸ್ ಸಿ-130 ವಿಮಾನ ಟೇಕ್ ಆಫ್ ಆಗಿತ್ತು. ಇದಾದ 2 ನಿಮಿಷಗಳಲ್ಲೇ ಅದು ಪತನಗೊಂಡು, ಮೆಡಾನ್‍ನ ವಸತಿ ದೇಶದಲ್ಲಿದ್ದ ಮಸಾಜ್ ಪಾರ್ಲರ್ ಮತ್ತು ಸಣ್ಣ ಹೋಟೆಲ್‍ಗೆ ಡಿಕ್ಕಿ ಹೊಡೆಯಿತು. ಈ ವೇಳೆ ವಿಮಾನದಲ್ಲಿದ್ದ 12 ಮಂದಿ ಸಿಬ್ಬಂದಿ, 101 ಪ್ರಯಾಣಿಕರು ಹಾಗೂ ವಸತಿ ಪ್ರದೇಶದಲ್ಲಿದ್ದ ಮೂವರು ಮೃತಪಟ್ಟಿದ್ದಾರೆ. ನಗರದ ಅನೇಕ ಕಟ್ಟಡಗಳಿಗೆ ಹಾನಿಯಾಗಿವೆ. ಅಲ್ಲೇ ನಿಲ್ಲಿಸಿದ ವಾಹನಗಳು ಸುಟ್ಟು ಕರಕಲಾಗಿವೆ. ಈವರೆಗೆ 66 ಮೃತದೇಹ ಪತ್ತೆಯಾಗಿವೆ. 3 ಅಂತಸ್ತಿನ ಮಸಾಜ್ ಪಾರ್ಲರ್ ನೆಲಸಮವಾಗಿದ್ದು, ಅವಶೇಷಗಳಡಿ ಯಾರಾದರೂ ಸಿಲುಕಿದ್ದಾರೆಯೇ ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ.
``ಮೃತರಲ್ಲಿ ಹೆಚ್ಚಿನವರು ಇಂಡೋನೇಷ್ಯಾ ಸೇನಾಪಡೆ ಯೋಧರ ಕುಟುಂಬ ಸದಸ್ಯರು. ದುರಂತದಲ್ಲಿ ಯಾರೂ ಬದುಕಿರುವ ಸಾಧ್ಯತೆಯೇ ಇಲ್ಲ'' ಎಂದು ವಾಯುಪಡೆ ಮುಖ್ಯಸ್ಥ ಆಗಸ್ ಸುಪ್ರಿಯತ್ನಾ ಹೇಳಿದ್ದಾರೆ. ಜತೆಗೆ, ಎಂಜಿನ್ ದೋಷದಿಂದ ಈ ದುರಂತ ಸಂಭವಿಸಿರಬಹುದು ಎಂದೂ ಅಂದಾಜಿಸಿದ್ದಾರೆ. ಇಂಡೋನೇಷ್ಯಾ ಅಧ್ಯಕ್ಷ ಜೋಕೋ ವಿಡೋಡೋ, ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಘಟನೆ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ.
ಎಂಜಿನ್‍ನಲ್ಲಿ ದೋಷವಿತ್ತೇ?
ಟೇಕ್ ಆಫ್ ಆದ ಕೂಡಲೇ ವಿಮಾನದ ಎಂಜಿನ್‍ನಲ್ಲಿ ದೋಷವಿರುವ ಅನುಮಾನ ಮೂಡಿದ ಹಿನ್ನೆಲೆಯಲ್ಲಿ ತಕ್ಷಣವೇ ವಾಪಸಾಗುವಂತೆ ಪೈಲಟ್‍ಗೆ ಸೂಚಿಸಲಾಯಿತು. ಆದರೆ, ಅಷ್ಟರಲ್ಲಾಗಲೇ ಅದು ಬೆಂಕಿಯುಂಡೆಯಂತಾಗಿತ್ತು ಎಂದೂ ಸುಪ್ರಿಯತ್ನಾ ತಿಳಿಸಿದ್ದಾರೆ. ಈ ಘಟನೆಯು ಇಂಡೋನೇಷ್ಯಾದ ವೈಮಾನಿಕ ಸುರಕ್ಷತೆಯ ವೈಫ್ಯಲ್ಯಕ್ಕೆ ಮತ್ತೊಮ್ಮೆ ಕನ್ನಡಿ ಹಿಡಿದಿದೆ. ಇಲ್ಲಿನ ಏರ್ ಏಷ್ಯಾ ವಿಮಾನವೊಂದು ಜಾವಾ ಸಮುದ್ರದಲ್ಲಿ ಪತನಗೊಂಡು, 162 ಮಂದಿ ಜಲಸಮಾಧಿಯಾದ 6 ತಿಂಗಳಲ್ಲೇ ಈ ದುರಂತ ಸಂಭವಿಸಿದೆ. ಜತೆಗೆ, ಕಳೆದ ಒಂದು ದಶಕದಲ್ಲಿ ಇಂಡೋನೇಷ್ಯಾದ ವಾಯುಪಡೆ ವಿಮಾನ ಪತನಗೊಳ್ಳುತ್ತಿರುವುದು ಇದು 6ನೇ ಬಾರಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಸಾವುdeadMedanIndonesia air forceHercules C-130 plane crashಮೆಡಾನ್ಇಂಡೋನೇಷಿಯಾಸ ವಾಯು ದಳಹರ್ಕ್ಯುಲಸ್ ಸಿ-130 ವಿಮಾನ ಪತನ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


