ದೇಶ

ಮಹಿಳಾ ಐಎಎಸ್ ಅಧಿಕಾರಿಯನ್ನು ಸೆಕ್ಸಿಯಾಗಿ ಚಿತ್ರಿಸಿ ವಿವಾದಕ್ಕೀಡಾದ ಔಟ್‌ಲುಕ್ ಮ್ಯಾಗಜಿನ್

ತೆಲಂಗಾಣ ಮುಖ್ಯಮಂತ್ರಿಯವರ ಕಚೇರಿಯಲ್ಲಿನ ಮಹಿಳಾ ಐಎಎಸ್ ಅಧಿಕಾರಿಯನ್ನು ಸೆಕ್ಸಿಯಾಗಿ ಚಿತ್ರಿಸಿದ ಖ್ಯಾತ ಸುದ್ದಿ ಮಾಸಿಕ ಔಟ್‌ಲುಕ್ ವಿವಾದಕ್ಕೀಡಾಗಿದೆ...

ಮಹಿಳಾ ಐಎಎಸ್ ಅಧಿಕಾರಿಯನ್ನು ಸೆಕ್ಸಿಯಾಗಿ ಚಿತ್ರಿಸಿ ವಿವಾದಕ್ಕೀಡಾದ ಔಟ್‌ಲುಕ್ ಮ್ಯಾಗಜಿನ್
ಸ್ಮಿತಾ ಸಭರ್‌ವಾಲ್
Published On :

ಹೈದ್ರಾಬಾದ್: ತೆಲಂಗಾಣ ಮುಖ್ಯಮಂತ್ರಿಯವರ ಕಚೇರಿಯಲ್ಲಿನ ಮಹಿಳಾ ಐಎಎಸ್ ಅಧಿಕಾರಿಯನ್ನು ಸೆಕ್ಸಿಯಾಗಿ ಚಿತ್ರಿಸಿದ ಖ್ಯಾತ ಸುದ್ದಿ ಮಾಸಿಕ ಔಟ್‌ಲುಕ್ ವಿವಾದಕ್ಕೀಡಾಗಿದೆ.
ಸ್ಮಿತಾ ಸಭರ್‌ವಾಲ್ ಎಂಬ ಅಧಿಕಾರಿಯನ್ನು ಸೆಕ್ಸಿಯಾಗಿ ಚಿತ್ರಿಸಿ ಔಟ್‌ಲುಕ್ ತನ್ನ ಗಾಸಿಪ್ ಕಾಲಂನಲ್ಲಿ ಆ ಚಿತ್ರದ ಬಳಕೆ ಮಾಡಿತ್ತು. ಪ್ರಸ್ತುತ ಮಾಸಿಕದಲ್ಲಿ 'ಡೀಪ್ ಥ್ರೋಟ್‌' ಎಂಬ ಕಾಲಂನಲ್ಲಿ 'ನೋ ಬೋರಿಂಗ್ ಬಾಬು' ಎಂಬ ಶೀರ್ಷಿಕೆ ನೀಡಿ ಲೇಖನವೊಂದನ್ನು ಪ್ರಕಟಿಸಿತ್ತು.

ಮಹಿಳಾ ಅಧಿಕಾರಿಯ ಸೌಂದರ್ಯದ ಬಗ್ಗೆ ಮತ್ತು ಹೇಗೆ ಅವರಿಗೆ ಬಡ್ತಿ ಸಿಕ್ಕಿತು ಎಂಬುದನ್ನೂ, ಸೌಂದರ್ಯದಿಂದಾಗಿಯೇ ಅವರು ಈ ಹಂತಕ್ಕೆ ಮುಟ್ಟಿದ್ದಾರೆ ಎಂದು ಮಹಿಳಾ ಅಧಿಕಾರಿಯ ಹೆಸರು ಉಲ್ಲೇಖಿಸದೆ ಆ ಲೇಖನವನ್ನು ಬರೆಯಲಾಗಿತ್ತು. ಲೇಖನ ಜತೆಗೆ ಸೆಕ್ಸಿಯಾಗಿ ಕಾಣುವಂತೆ ಅರೆಬರೆ ಬಟ್ಟೆ ತೊಟ್ಟು ರ್ಯಾಂಪ್ ವಾಕ್ ಮಾಡುತ್ತಿರುವ ಐಎಎಸ್ ಅಧಿಕಾರಿಯನ್ನು ನೋಡಿ ಕ್ಯಾಮೆರಾ ಹಿಡಿದುಕೊಂಡು ನಿಂತಿರುವ ತೆಲಂಗಾಣ ಮುಖ್ಯಮಂತ್ರಿ ಹಾಗೂ ಖುಷಿಯಿಂದ ಅದನ್ನು ನೋಡುತ್ತಿರುವ ರಾಜಕಾರಣಿಗಳು- ಹೀಗೊಂದು ಕ್ಯಾರಿಕೇಚರ್ ನ್ನು ಔಟ್‌ಲುಕ್ ಪ್ರಕಟಿಸಿತ್ತು. ಈ ಕ್ಯಾರಿಕೇಚರ್ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.

Story image



ಆದಾಗ್ಯೂ, ಇಂಥದ್ದೊಂದು ಲೇಖನ ಪ್ರಕಟಿಸುವ ಮೂಲಕ ಔಟ್‌ಲುಕ್ ಎಲ್ಲ ಮಹಿಳೆಯರನ್ನು ಅಪಮಾನ ಮಾಡಿದೆ. ಆದ್ದರಿಂದ ಮಾಸಿಕ ಕ್ಷಮೆ ಕೇಳಬೇಕೆಂದು ಸ್ಮಿತಾ ಒತ್ತಾಯಿಸಿದ್ದಾರೆ.
14 ವರುಷ ನಾನು ಆ ಕ್ಷೇತ್ರದಲ್ಲಿ ಅನುಭವ ಹೊಂದಿದ್ದೇನೆ. ಈ ಲೇಖನದಿಂದಾಗಿ ನನಗೆ ತುಂಬಾ ನೋವುಂಟಾಗಿದೆ. ಜವಾಬ್ದಾರಿಯುತ ಸ್ಥಾನದಲ್ಲಿದ್ದು ಕೆಲಸ ನಿರ್ವಹಿಸುವ ಮಹಿಳೆಯರು ಇಂಥಾ ಪೀತ ಪತ್ರಿಕೆಯ ಬಲಿಪಶುವಾಗುತ್ತಿರುವುದಕ್ಕೆ ಕಡಿವಾಣ ಹಾಕಲೇ ಬೇಕು ಎಂದು ಸ್ಮಿತಾ ಪ್ರತಿಕ್ರಿಯಿಸಿದ್ದಾರೆ. ಮಾತ್ರವಲ್ಲದೆ ಔಟ್‌ಲುಕ್‌ಗೆ ಸ್ಮಿತಾ ನ್ಯಾಯಪೂರ್ವಕ ನೋಟೀಸ್ ಕಳಿಸಿದ್ದಾರೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.