ಗುಜರಾತ್ ಮಳೆಗೆ ಅಸುನೀಗಿದ್ದು 9 ಸಿಂಹ
ಗುಜರಾತ್ ಪ್ರವಾಹದಲ್ಲಿ ಅಸುನೀಗಿದ್ದು 5 ಅಲ್ಲ 9 ಸಿಂಹಗಳು ಎಂಬ ವಿಚಾರ ದೃಢಪಟ್ಟಿದೆ. ಗುಜರಾತ್‍ನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಸಿ.ಪಂತ್ ಪ್ರಕಾರ 100 ಸಿಬ್ಬಂದಿ ಗಿರ್ ಸಿಂಹೋದ್ಯಾನದ...

ಡೆಹ್ರಾಡೂನ್: ಗುಜರಾತ್ ಪ್ರವಾಹದಲ್ಲಿ ಅಸುನೀಗಿದ್ದು 5 ಅಲ್ಲ 9 ಸಿಂಹಗಳು ಎಂಬ ವಿಚಾರ ದೃಢಪಟ್ಟಿದೆ. ಗುಜರಾತ್‍ನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಸಿ.ಪಂತ್ ಪ್ರಕಾರ 100
ಸಿಬ್ಬಂದಿ ಗಿರ್ ಸಿಂಹೋದ್ಯಾನದ ವ್ಯಾಪ್ತಿಯಲ್ಲಿ ಶೋಧ ಕಾರ್ಯ ನಿರತರಾಗಿದ್ದಾರೆ.
ನದಿಯ ತಟದ ಗ್ರಾಮಗಳಲ್ಲಿ ಪ್ರವಾಹದಲ್ಲಿ ಸಿಲುಕಿದ್ದ 27 ಸಿಂಹಗಳನ್ನು ರಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ. ಅವುಗಳ ಆರೋಗ್ಯ ಸ್ಥಿತಿ ಉತ್ತಮವಾಗಿದೆ ಎಂದಿದ್ದಾರೆ. ಈ ಬಗ್ಗೆ ಪ್ರಾಣಿ ಪ್ರಿಯರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ಗುಜರಾತ್ ಸರ್ಕಾರ ಸಿಂಹಗಳ ರಕ್ಷಣೆಗೆ ನೆರೆಯ ಮಧ್ಯಪ್ರದೇಶದ ನೆರವನ್ನು ಕೋರಿದೆ.
ಧಾರಾಕಾರ ಮಳೆ: ಉತ್ತರಾಖಂಡದಲ್ಲಿ ಭಾನುವಾರ ತಡರಾತ್ರಿಧಾರಾಕಾರ ಮಳೆಯಾಗಿದೆ. ಡೆಹ್ರಾಡೂನ್‍ಲ್ಲಿಯೂ ಮಳೆಯಾಗಿದ್ದು, ಭಾರಿ ಗಾತ್ರದ ಮರಗಳು ಬುಡಮೇಲಾಗಿವೆ. ಇದರಿಂದಾಗಿ ಕಳೆದ ರಾತ್ರಿಯಿಂದೀಚೆಗೆ ವಿದ್ಯುತ್ ಸಂಪರ್ಕ ಕಡಿದುಹೋಗಿದೆ.ನಾಗರಿಕರು ಸಂಕಷ್ಟಪಡುವಂತಾಗಿದೆ. ದೇವ ಪ್ರಯಾಗ, ಲ್ಯಾನ್ಸ್‍ಡೌನ್ ಮತ್ತು ಡೆಹ್ರಾಡೂನ್‍ನಲ್ಲಿ ಅತ್ಯಂತ ಹೆಚ್ಚು ಮಳೆಯಾದ ಸ್ಥಳಗಳು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


