ಲಂಚ ಸ್ವೀಕರಿಸುತ್ತಿದ್ದ ಮೂವರು ಸಿಎಸ್ ಕೆ ಆಟಗಾರರನ್ನು ರಕ್ಷಿಸಿದ ಶ್ರೀನಿವಾಸನ್: ಲಲಿತ್ ಮೋದಿ
ದಿನಕ್ಕೊಂದು ಹೊಸ ಬಾಂಬ್ ಸಿಡಿಸಿ ವಿವಾದಗಳ ಕೇಂದ್ರ ಬಿಂದುವಾಗಿರುವ ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ,..

ನವದೆಹಲಿ: ದಿನಕ್ಕೊಂದು ಹೊಸ ಬಾಂಬ್ ಸಿಡಿಸಿ ವಿವಾದಗಳ ಕೇಂದ್ರ ಬಿಂದುವಾಗಿರುವ ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ, ಇಂದು ಐಸಿಸಿ ಚೇರ್ ಮನ್ ಎನ್ ಶ್ರೀನಿವಾಸನ್ ವಿರುದ್ಧ ಆರೋಪ ಮಾಡಿದ್ದಾರೆ.
ಲಂಚ ಸ್ವೀಕರಿಸುತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್ ನ ಮೂರು ಆಟಗಾರರನ್ನು ಐಸಿಸಿ ಅಧ್ಯಕ್ಷ ಎನ್ ಶ್ರೀನಿವಾಸನ್ ರಕ್ಷಿಸಿದ್ದಾರೆ ಎಂದು ಲಲಿತ್ ಮೋದಿ ದೂರಿದ್ದಾರೆ,
ಲಂಡನ್ ನಲ್ಲಿ ಖಾಸಗಿ ಚಾನೆಲ್ ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಲಲಿತ್ ಮೋದಿ, ನನಗೆ ಭಯವಿಲ್ಲದೆ ಜೀವನ ನಡೆಸಬಹುದು ಎನಿಸಿದಾಗ ಭಾರತಕ್ಕೆ ವಾಪಸಾಗುವುದಾಗಿ ಹೇಳಿರುವ ಲಲಿತ್ ಮೋದಿ, ಮೂವರು ಆಟಗಾರರನ್ನು ರಕ್ಷಿಸಿರುವ ಶ್ರೀನಿವಾಸನ್ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ ಯಾವ ಕ್ರಮ ತೆಗೆದುಕೊಂಡಿದೆ ಎಂಬುದು ಇಡಿ ದೇಶಕ್ಕೆ ತಿಳಿಯಬೇಕು ಎಂದು ಒತ್ತಾಯಿಸಿದ್ದಾರೆ.
ಒಂದು ವೇಳೆ ಎನ್ ಶ್ರೀನಿವಾಸ್ ನಂಬಲರ್ಹವಲ್ಲದ ವ್ಯಕ್ತಿಯಾಗಿದ್ದರೆ ದೇವರೇ ಬಂದು ಭಾರತವನ್ನು ಹಾಗೂ ಕ್ರಿಕೆಟ್ ಮತ್ತು ಕ್ರೀಡೆಗಳನ್ನು ರಕ್ಷಿಸಬೇಕು ಎಂದಿದ್ದಾರೆ. ಇನ್ನು ಚೆನ್ನೈ ಸೂಪರ್ ಕಿಂಗ್ಸ್ ನ ಮೂರು ಆಟಗಾರರು ಉದ್ಯಮಿಯೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ವಿಷಯ ಸಂಬಂಧ 2013 ರಲ್ಲಿ ಐಪಿಎಲ್ ಮುಖ್ಯಸ್ಥರಾಗಿದ್ದ ಲಲಿತ್ ಮೋದಿ ಯವರಿಂದ ಪತ್ರ ಬಂದಿರುವುದಾಗಿ ನಿನ್ನೆಯಷ್ಟೆ ಐಸಿಸಿ ಸ್ಪಷ್ಟಪಡಿಸಿದೆ,
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


