ಕೊಲ್ಕತಾದ ಸ್ಕಾಟಿಷ್ ಚರ್ಚ್ ಕಾಲೇಜಿನಲ್ಲಿ ವಸ್ತ್ರ ಸಂಹಿತೆ ಜಾರಿ, ಸ್ಕರ್ಟ್, ಟಿ-ಷರ್ಟ್ ಗೆ ನಿಷೇಧ
ವಿದ್ಯಾರ್ಥಿಗಳು ಧರಿಸುವ ಉಡುಪು ಕಲಿಕೆ ಪರಿಸರದ ಪ್ರಾಮುಖ್ಯತೆ ಹಾಗೂ ಗಾಂಭೀರ್ಯತೆಯನ್ನು ಪ್ರತಿನಿಧಿಸುತ್ತದೆ ಆದ್ದರಿಂದ ಕಾಲೇಜಿನ ಆವರಣದಲ್ಲಿ ನಿರಾಡಂಬರತೆ ಮತ್ತು ಸುರಕ್ಷತೆಯ ಉಡುಪುಗಳನ್ನು ಧರಿಸಬೇಕು- ಸ್ಕಾಟಿಷ್ ಚರ್ಚ್ ಕಾಲೇಜ್ ಆದೇಶ

ಕೋಲ್ಕತಾ: ಕೋಲ್ಕತಾದ ಸ್ಕಾಟಿಷ್ ಚರ್ಚ್ ಕಾಲೇಜು ವಿದ್ಯಾರ್ಥಿಗಳಿಗೆ ಸರಳ ಉಡುಗೆ ಧರಿಸಲು ಸೂಚನೆ ನೀಡಿದ್ದು, ಕಾಲೇಜು ನಲ್ಲಿ ವಸ್ತ್ರ ಸಂಹಿತೆ(ಡ್ರೆಸ್ ಕೋಡ್) ಜಾರಿ ಮಾಡಿದೆ. ವೃತ್ತಾಕಾರದ ಕೊರಳುಪಟ್ಟಿ( ರೌಂಡ್ ನೆಕ್) ಹೊಂದಿರುವ ಟಿ-ಷರ್ಟ್, ಸ್ಕರ್ಟ್ ಧರಿಸುವುದನ್ನು ಚರ್ಚ್ ಕಾಲೇಜು ನಿಷೇಧಿಸಿದೆ.
ಸ್ಕಾಟಿಷ್ ಕಾಲೇಜಿನ ಈ ಕ್ರಮಕ್ಕೆ ಶಿಕ್ಷಣತಜ್ಞರು, ವಿದ್ಯಾರ್ಥಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳು ಧರಿಸುವ ಉಡುಪು ಕಲಿಕೆ ಪರಿಸರದ ಪ್ರಾಮುಖ್ಯತೆ ಹಾಗೂ ಗಾಂಭೀರ್ಯತೆಯನ್ನು ಪ್ರತಿನಿಧಿಸುತ್ತದೆ ಆದ್ದರಿಂದ ಕಾಲೇಜಿನ ಆವರಣದಲ್ಲಿ ನಿರಾಡಂಬರತೆ ಮತ್ತು ಸುರಕ್ಷತೆಯ ಉಡುಪುಗಳನ್ನು ಧರಿಸಬೇಕೆಂದು ಸ್ಕಾಟಿಷ್ ಕಾಲೇಜ್ ನ ಆಡಳಿತ ಮಂಡಲಿ ನೊಟೀಸ್ ಬೋರ್ಡ್ ನಲ್ಲಿ ಸೂಚನೆ ನೀಡಿದೆ.
ವಿದ್ಯಾರ್ಥಿಗಳು ವಿದ್ಯಾಭ್ಯಾಸದ ವಾತಾವರಣಕ್ಕೆ ಪೂರಕವಾಗಿರುವಂತಹ ಉಡುಪನ್ನು ಮಾತ್ರ ಧರಿಸಬೇಕು, ರೌಂಡ್ ನೆಕ್ ಟಿ-ಷರ್ಟ್, ಸ್ಕರ್ಟ್ ಧರಿಸಬಾರದು ಎಂದು ಸ್ಕಾಟಿಷ್ ಚರ್ಚ್ ನ ಆಡಳಿತ ಮಂಡಳಿ ಆದೇಶ ನೀಡಿರುವುದು ಅಚ್ಚರಿ ಮೂಡಿಸಿದೆ. ಈ ಕ್ರಮವನ್ನು ವಿರೋಧಿಸಿ ವಿದ್ಯಾರ್ಥಿಗಳು, ಕೆಲ ಶಿಕ್ಷಣ ತಜ್ಞರು ಪ್ರತಿಭಟನೆ ನಡೆಸುತ್ತಿದ್ದಾರೆ.
ಬರಹಗಳನ್ನು/ ಶೀರ್ಷಿಕೆಗಳು ಮುದ್ರಿತವಾಗಿರುವ ಟಿ-ಷರ್ಟ್ ಹಾಗೂ ಸ್ಕರ್ಟ್ ಗಳನ್ನು ನಿಷೇಧಿಸಿರುವ ಚರ್ಚ್ ಕಾಲೇಜು, ಉದ್ದದ ಪ್ಯಾಂಟ್ ಗಳನ್ನು ಮಾತ್ರ ಧರಿಸಬೇಕೆಂದು ಹೇಳಿದೆ. ಕಾಲೇಜಿನ ಈ ಕ್ರಮ ವಿದ್ಯಾರ್ಥಿಗಳ ಸ್ವಾತಂತ್ರ್ಯವನ್ನು ಹತ್ತಿಕ್ಕುತಿದೆ ಎಂದು ಆರೋಪಿಸಿ ಶಿಕ್ಷಣ ತಜ್ಞರು, ಸಾಮಾಜಿಕ ಕಾರ್ಯಕರ್ತರು ಕಾಲೇಜಿನ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


