ರಾಜ್ಯದ ಸಂಶೋಧಕರಿಂದ ಚಿರತೆ ಬೆಕ್ಕು ದಾಖಲಾತಿ
ಪಶ್ಚಿಮಘಟ್ಟದಲ್ಲಿ ಸಾಮಾನ್ಯವಾಗಿ ಕಾಣಸಿಗುವ ಆದರೆ ಹೆಚ್ಚಿನವರಿಗೆ ಪರಿಚಿತವಲ್ಲದ ಚಿರತೆ ಬೆಕ್ಕಿನ ದಾಖಲಾತಿ ಕಾರ್ಯ ವನ್ನು ಕರ್ನಾಟಕದ ಪ್ರಾಣಿ ಸಂಶೋಧಕರು ಆರಂಭಿಸಿದ್ದಾರೆ...

ನವದೆಹಲಿ: ಪಶ್ಚಿಮಘಟ್ಟದಲ್ಲಿ ಸಾಮಾನ್ಯವಾಗಿ ಕಾಣಸಿಗುವ ಆದರೆ ಹೆಚ್ಚಿನವರಿಗೆ ಪರಿಚಿತವಲ್ಲದ ಚಿರತೆ ಬೆಕ್ಕಿನ ದಾಖಲಾತಿ ಕಾರ್ಯ ವನ್ನು ಕರ್ನಾಟಕದ ಪ್ರಾಣಿ ಸಂಶೋಧಕರು ಆರಂಭಿಸಿದ್ದಾರೆ.
ಹೆಸರೇ ಸೂಚಿಸುವಂತೆ ಈ ಬೆಕ್ಕುಗಳು ನೋಡಲು ಮರಿಚಿರತೆಯನ್ನೇ ಹೋಲುತ್ತವೆ. ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗಿ ಕಂಡು ಬರುವ ಈ ರೀತಿಯ ಬೆಕ್ಕುಗಳ ಕುರಿತು ಅನ್ಯ ದೇಶಗಳಲ್ಲಿ ಸಾಕಷ್ಟು ಅಧ್ಯಯನಗಳು ನಡೆದಿವೆ. ಆದರೆ, ಭಾರತದಲ್ಲಿ ಮಾತ್ರ ಈ ಕುರಿತ ಅಧ್ಯಯನ ನಡೆದದ್ದು ಕಡಿಮೆ. ಆದರೆ, ಈಗ ಕರ್ನಾಟಕದ ಶ್ರೀವತ್ಸ, ರವಿಶಂಕರ್ ಪರಮೇಶ್ವರನ್, ಸುಷ್ಮಾ ಶರ್ಮಾ ಮತ್ತು ಡಾ. ಉಲ್ಲಾಸ್ ಕಾರಂತ್‍ರನ್ನೊಳಗೊಂಡ ತಂಡವೊಂದು 2,075 ಕಿ.ಮೀ. ವ್ಯಾಪ್ತಿಯ ಭದ್ರಾ, ಬಿಳಿಗಿರಿರಂಗಸ್ವಾಮಿ ದೇವಸ್ಥಾನ, ಬಂಡೀಪುರ ಮತ್ತು ನಾಗರಹೊಳೆ ಹುಲಿ ರಕ್ಷಿತಾರಣ್ಯದಲ್ಲಿ ಕ್ಯಾಮೆರಾ ಟ್ರ್ಯಾಪ್ ಮೂಲಕ ಇಂಥ ಬೆಕ್ಕುಗಳ ಕುರಿತು ಮಹತ್ವದ ದಾಖಲೆಗಳನ್ನು ಸಂಗ್ರಹಿಸಿದ್ದಾರೆ.
ಕರ್ನಾಟಕದ ಭದ್ರಾ ವನ್ಯಮೃಗ ಅರಣ್ಯಧಾಮದಲ್ಲಿ 100 ಚದರ ಕಿ.ಮೀ.ಗೆ ಇಂಥ ಹತ್ತು ಬೆಕ್ಕುಗಳಿವೆ. ಬಿಳಿಗಿರಿ ರಂಗ ದೇವಸ್ಥಾನ ಹುಲಿ ರಕ್ಷಿತಾರಣ್ಯದಲ್ಲಿ 100 ಚದರ ಕಿ.ಮೀ.ಗೆ ನಾಲ್ಕು ಚಿರತೆಬೆಕ್ಕುಗಳಿರುವುದು ಪತ್ತೆಯಾಗಿದೆ. ಸಾಮಾನ್ಯವಾಗಿ ಈ ರೀತಿಯ ಬೆಕ್ಕುಗಳು, ಇಲಿ, ಮೊಲದಂಥ ಪ್ರಾಣಿಗಳು ಹೆಚ್ಚಿರುವ ಪ್ರದೇಶದಲ್ಲೇ ವಾಸಿಸುತ್ತವೆ ಎಂದು ಜರ್ನಲ್ ಆಫ್
ಮ್ಯಾಮಲೊಜಿಯಲ್ಲಿ ಪ್ರಕಟವಾದ ಲೇಖನದಲ್ಲಿ ಹೇಳಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


