ದೇಶ

ಸೇನೆ- ಮೇಘಾಲಯ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರ ಹತ್ಯೆ

ಭಾರತೀಯ ಸೇನೆ ಹಾಗೂ ಮೇಘಾಲಯ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಎ.ಎಂ.ಇ.ಎಫ್ ಸಂಘಟನೆಗೆ ಸೇರಿದ ಇಬ್ಬರು ಉಗ್ರರನ್ನು ಹತ್ಯೆ ಮಾಡಿದ್ದಾರೆ.

ಸೇನೆ- ಮೇಘಾಲಯ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರ ಹತ್ಯೆ
ಸೇನಾ ಕಾರ್ಯಾಚರಣೆ(ಸಾಂದರ್ಭಿಕ ಚಿತ್ರ)
Published On :

ಶಿಲ್ಲಾಂಗ್: ಭಾರತೀಯ ಸೇನೆ ಹಾಗೂ ಮೇಘಾಲಯ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಎ.ಎಂ.ಇ.ಎಫ್ ಸಂಘಟನೆಗೆ ಸೇರಿದ ಇಬ್ಬರು ಉಗ್ರರನ್ನು ಹತ್ಯೆ ಮಾಡಿದ್ದಾರೆ.  

ಅಸ್ಸಾಂ- ಮೇಘಾಲಯ ಗಡಿಯಲ್ಲಿರುವ ಉತ್ತರ ಗಾರೋ ಹಿಲ್ಸ್ ನಲ್ಲಿ ಉಗ್ರರು ಹಾಗೂ ಸೇನಾಪಡೆ ನಡುವೆ ಗುಂಡಿನ ಚಕಮಕಿ ನಡೆದಿದೆ. ಉಗ್ರರನ್ನು ಹತ್ಯೆ ಮಾಡಿರುವ ಸೇನಾಪಡೆ, ಎರಡು ಪಿಸ್ತೂಲ್, ಮದ್ದುಗುಂಡುಗಳನ್ನು ಇಟ್ಟಿದ್ದ ಎರಡು ಪೆಟ್ಟಿಗೆ ಹಾಗೂ ಒಂದು ಬ್ಯಾಗ್ ನ್ನು ವಶಪಡಿಸಿಕೊಂಡಿದೆ.

ಗಾರೋ ಹಿಲ್ಸ್ ನಲ್ಲಿ ನಡೆದ ಸೇನಾಪಡೆಯ ಯಶಸ್ವಿ ಕಾರ್ಯಾಚರಣೆಗೆ ಬಿಜೆಪಿ ಶ್ಲಾಘಿಸಿದೆ. ಸೇನಾ ಪಡೆಯ ಪ್ರತಿಯೊಂದು ಯಶಸ್ವಿ ಕಾರ್ಯಾಚರಣೆಯೂ ಶ್ಲಾಘನೆಗೆ ಅರ್ಹವಾದದ್ದೇ ಎಂದು ಬಿಜೆಪಿ ವಕ್ತಾರ ಜಿವಿಲ್ ನರಸಿಂಹ ರಾವ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.