ಬುಲೆಟ್ ಟ್ರೈನ್ ಗೆ ನೀವೂ ಹೆಸರು ಸೂಚಿಸಬಹುದು!
ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ, ಹೈ-ಸ್ಪೀಡ್ ಬುಲೆಟ್ ಟ್ರೈನ್ ಗೆ ನೀವು ಹೆಸರು ಸೂಚಿಸಬಹುದು!

ನವದೆಹಲಿ: ಬುಲೆಟ್ ಟ್ರೈನ್ ಗೆ ಸಂಬಂಧಿಸಿದಂತೆ ನಿಮ್ಮ ಹೆಸರು ರಾರಾಜಿಸುವಂತೆ ಮಾಡಬೇಕಾ? ಹಾಗಾದರೆ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ, ಹೈ-ಸ್ಪೀಡ್ ಬುಲೆಟ್ ಟ್ರೈನ್ ಗೆ ಹೆಸರು ಕೊಡಿ!
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಹೈ-ಸ್ಪೀಡ್ ಬುಲೆಟ್ ಟ್ರೈನ್ ಯೋಜನೆ ಮೊದಲ ಹಂತದಲ್ಲಿದ್ದರೂ, ರೈಲ್ವೇ ಇಲಾಖೆ ಮಾತ್ರ ಬುಲೆಟ್ ಟ್ರೈನ್ ಗೆ ಭಾರತೀಯ ಹೆಸರನ್ನೇ ನೀಡುವುದಕ್ಕೆ ತಯಾರಿ ನಡೆಸಿದೆ. ಬುಲೆಟ್ ಟ್ರೈನ್ ಗೆ ದೇಸಿ ಹೆಸರು ನೀಡಲು ಈ ಹಿಂದೆ ಇಲಾಖೆಯ ನೌಕರರಿಗೆ ಸಚಿವ ಸುರೇಶ್ ಪ್ರಭು ಸೂಚನೆ ನೀಡಿದ್ದರು ಈ ಯೋನನೆಯನ್ನು ವಿಸ್ತರಿಸಿರುವ ರೈಲ್ವೆ ಸಚಿವರು, ಜನಸಾಮಾನ್ಯರು ಸಹ ಬುಲೆಟ್ ಟ್ರೈನ್ ಗೆ ಹೆಸರು ಸೂಚಿಸಬಹುದೆಂದು ಆದೇಶಿಸಿದ್ದಾರೆ.
ರೈಲ್ವೆ ಇಲಾಖೆಯ ಸಿಬ್ಬಂದಿಗಳ ಪೈಕಿ ಅತಿ ಹೆಚ್ಚು ಜನರು ಪುರಾಣಿಕ ಕಥೆಗಳಲ್ಲಿ ಬರುವ ವಿಮಾನದ ಹೆಸರಾಗಿದ್ದ ಪುಷ್ಪಕ್ ಎಂಬ ಹೆಸರನ್ನು ಸೂಚ್ಚಿ ದ್ದಾರೆ. ಇದರೊಂದಿಗೆ ತೇಜಸ್ ಎಂಬ ಹೆಸರನ್ನೂ ಸೂಚಿಸಲಾಗಿದೆ. ಅಧಿಕಾರಿಗಳು ಸೂಚಿಸುತ್ತಿರುವ ಹೆಸರು ರೈಲ್ವೇ ಸಚಿವರಿಗೆ ಒಪ್ಪಿಗೆಯಾಗದ ಹಿನ್ನೆಲೆಯಲ್ಲಿ ಬುಲೆಟ್ ಟ್ರೈನ್ ಗೆ ನಾಮಕರಣ ಮಾಡುವ ಪ್ರಕ್ರಿಯೆಯಲ್ಲಿ ಜನಸಾಮಾನ್ಯರು ಭಾಗವಹಿಸಬೇಕು ಎಂದು ಹೇಳಿದ್ದಾರೆ. ಶೀಘ್ರದಲ್ಲೆ ಟ್ವಿಟರ್ ಫೇಸ್ ಬುಕ್ ನಲ್ಲಿ ಮನವಿ ಮಾಡಲಾಗುವುದು ಎಂದು ರೈಲ್ವೆ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬುಲೆಟ್ ಟ್ರೈನ್ ಗಾಗಿ ಜನಸಾಮಾನ್ಯರು ಸಾಮಾಜಿಕ ಜಾಲತಾಣಗಳಲ್ಲಿ ನೀಡುವ ಹೆಸರುಗಳಲ್ಲಿ ಅತ್ಯುತ್ತಮವಾದದ್ದನ್ನು ಅಂಗೀಕರಿಸುತ್ತೇವೆ. ಇದಕ್ಕಾಗಿ ಸ್ವತಃ ಸಚಿವರನ್ನೊಳಗೊಂಡ ತಂಡ ಕಾರ್ಯನಿರ್ವಹಿಸಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


