ಕರಾಚಿಗೆ ಭಾರತ ಮೂಲಕ ತೆರಳಿತ್ತು ಚೀನಾ ಸಬ್ ಮೆರಿನ್
ಚೀನಾದ ಅತ್ಯಾಧುನಿಕ ಜಲಾಂತರ್ಗಾಮಿಯೊಂದು ಭಾರತೀಯ ಜಲಮಾರ್ಗದ ಮೂಲಕ ಸಾಗಿ ಕರಾಚಿ ಬಂದರಿನಲ್ಲಿ ತಂಗಿರುವ...

ನವದೆಹಲಿ: ಚೀನಾದ ಅತ್ಯಾಧುನಿಕ ಜಲಾಂತರ್ಗಾಮಿಯೊಂದು ಭಾರತೀಯ ಜಲಮಾರ್ಗದ ಮೂಲಕ ಸಾಗಿ ಕರಾಚಿ ಬಂದರಿನಲ್ಲಿ ತಂಗಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.
ಚೀನಾದ ಯುವಾನ್ ಕ್ಲಾಸ್ 335 ಜಲಾಂತರ್ಗಾಮಿ ಅರಬ್ಬೀಸಮುದ್ರವನ್ನು ದಾಟಿ ಮೇ 22ರಂದು ಕರಾಚಿ ಬಂದರು ತಲುಪಿದೆ. ಚೀನಾಗೆ ವಾಪಸಾಗುವ ಮೊದಲು ಕನಿಷ್ಠ ವಾರ ಕಾಲ ಕರಾಚಿ ಬಂದರಿನಲ್ಲಿ ತಂಗಿದೆ. ಪ್ರಧಾನಿ ಮೋದಿ ಚೀನಾ ಭೇಟಿ ಮುಗಿಸಿ ವಾರದ ನಂತರ ಈ ಬೆಳವಣಿಗೆ ನಡೆದಿದೆ.
ಚೀನಾದ ಈ ಸಬ್‍ಮೆರಿನ್ ಟಾರ್ಪೋಡಸ್, ಆ್ಯಂಟಿಶಿಪ್ ಕ್ಷಿಪಣಿಗಳನ್ನು ಹೊಂದಿದೆ. ಆದರೆ, ಈ ಸಬ್‍ಮೆರಿನ್ ಭಾರತದ ಭದ್ರತಾ ಸಂಸ್ಥೆಗಳ ಗಮನಸೆಳೆದದ್ದು ಇದೇ ಮೊದಲು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


