ಆಕ್ಸ್ ಫರ್ಡ್ ನಿಘಂಟಿನಲ್ಲಿ ಭೇಲ್‍ಪುರಿ!
ಜಗತ್ತಿನ ನಂಬರ್‍ಒನ್ ನಿಘಂಟು ಎಂದೇ ಖ್ಯಾತವಾಗಿರುವ ಆಕ್ಸ್ ಫರ್ಡ್ ಡಿಕ್ಷನರಿ, ಒಂದೊಂದೇ ಭಾರತೀಯ ಪದಗಳನ್ನು ತನ್ನ ಪದ ಕೋಶಕ್ಕೆ ಸೇರಿಸಿಕೊಳ್ಳುತ್ತಿದೆ...

ಕೋಲ್ಕತ: ಜಗತ್ತಿನ ನಂಬರ್‍ಒನ್ ನಿಘಂಟು ಎಂದೇ ಖ್ಯಾತವಾಗಿರುವ ಆಕ್ಸ್ ಫರ್ಡ್ ಡಿಕ್ಷನರಿ, ಒಂದೊಂದೇ ಭಾರತೀಯ ಪದಗಳನ್ನು ತನ್ನ ಪದ ಕೋಶಕ್ಕೆ ಸೇರಿಸಿಕೊಳ್ಳುತ್ತಿದೆ.
ಈಗಾಗಲೇ ದಿನಬಳಕೆಯಲ್ಲಿರುವ ಹಲವು ಭಾರತೀಯ ಪದಗಳಿಗೆ, ಪಡೆನುಡಿಗಳಿಗೆ ತನ್ನೊಳಗೆ ಸ್ಥಾನ ಕೊಟ್ಟಿರುವ ಆಕ್ಸ್ ಫರ್ಡ್ ಇದೀಗ ಭೇಲ್ ಪುರಿ, ಚೂಡಿದಾರ್, ಢಾಬಾ ಮತ್ತು ಅರ್ರೆ ಯಾರ್ ಪದಗಳನ್ನೂ ನಿಘಂಟಿಗೆ ಸೇರಿಸಿಕೊಂಡು ಅದಕ್ಕೆ ಅರ್ಥವಿವರಣೆ ನೀಡಿದೆ. ವಿಶೇಷವೆಂದರೆ ಚೂಡಿದಾರ್ ಮತ್ತು ಅರ್ರೆ ಯಾರ್ ಪದಗಳು ನಿಘಂಟಿಗೆ ಈಗ ಸೇರ್ಪಡೆಯಾಗುತ್ತಿದೆಯಾದರೂ, ಅವು ಇಂಗ್ಲಿಷ್ ಭಾಷೆಯವರಿಗೆ ಅಪರಿ ಚಿತವೇನಲ್ಲ. 1880ರಲ್ಲಿ `ಚೂಡಿದಾರ್' ಪದ ಇಂಗ್ಲೀಷಿನವರಲ್ಲಿ ಬಳಕೆಯಾಗಿತ್ತು. ಇದೀಗ ಅಧಿಕೃತವಾಗಿ ಡಿಕ್ಷನರಿ ಸೇರಿದೆ.
ಅಂತೆಯೇ `ಅರ್ರೆ ಯಾರ್' ಪದ ಕೂಡ ಸುಮಾರು 180 ವರ್ಷಗಳ ಹಿಂದೆಯೇ ಇಂಗ್ಲಿಷರಲ್ಲಿ ಜನಜನಿತವಾಗಿತ್ತು ಎನ್ನಲಾಗಿದೆ. ಆಕ್ಸ್ ಫರ್ಡ್ ನಿಘಂಟಿನಲ್ಲಿ ನೀಡಿರುವ ಅರ್ಥ ವಿಶೇಷ ಹೀಗಿದೆ:-
ಚೂಡಿದಾರ್: ದಕ್ಷಿಣ ಏಷಿಯಾದ ಜನರಿಂದ ಸಾಂಪ್ರದಾಯಿಕವಾಗಿ ಬಳಸಲ್ಪಡುವ ಪಾದದ ಬಳಿ ಹೆಚ್ಚಿನ ಬಟ್ಟೆಯಿರುವ ಬಿಗಿಯಾದ ಪೈಜಾಮ
ಢಾಬಾ: (ನಾಮಪದ) ರಸ್ತೆ ಬದಿಯ ಆಹಾರ ಕೇಂದ್ರ
ಅರ್ರೆ ಯಾರ್ : ಗೆಳೆಯರನ್ನು ಅಥವಾ ಆಪ್ತರನ್ನು ಸಂಬೋಧಿಸಲು ಬಳಸುವ ಪದ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


