ನ್ಯೂಯಾರ್ಕ್ ಗ್ಲೋಬಲ್ ಗ್ರೂಪ್ ಸಿಇಒ ವಿರುದ್ಧ ಲೈಂಗಿಕ ಕಿರುಕುಳ ಆರೋಪ: 850 ಮಿಲಿಯನ್ ಡಾಲರ್ ನೀಡಲು ದಾವೆ
ನ್ಯೂಯಾರ್ಕ್ ಗ್ಲೋಬಲ್ ಗ್ರೂಪ್ ನ ಸಿಇಒ ಬೆಂಜಮಿನ್ ವೇಯ್ ವಿರುದ್ಧ ಲೈಂಗಿಕ ಕಿರುಕುಳ ನೀಡಿರುವ ಆರೋಪದಡಿ ಮೊಕದ್ದಮೆ ದಾಖಲಾಗಿದೆ.

ನವದೆಹಲಿ: ನ್ಯೂಯಾರ್ಕ್ ಗ್ಲೋಬಲ್ ಗ್ರೂಪ್ ನ ಸಿಇಒ ಬೆಂಜಮಿನ್ ವೇಯ್ ವಿರುದ್ಧ ಲೈಂಗಿಕ ಕಿರುಕುಳ ನೀಡಿರುವ ಆರೋಪದಡಿ ಮೊಕದ್ದಮೆ ದಾಖಲಾಗಿದೆ.
ಸ್ವೀಡನ್ ನ ಮಾಜಿ ರೂಪದರ್ಶಿ ಬೆಂಜಮಿನ್ ವೇಯ್ ವಿರುದ್ಧ ಪ್ರಕರಣ ದಾಖಲಿಸಿದ್ದು 850 ಮಿಲಿಯನ್ ಡಾಲರ್ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾಳೆ, ಅನುಭವದ ಕೊರತೆ ಇದ್ದರೂ ನ್ಯೂಯಾರ್ಕ್ ಗ್ಲೋಬಲ್ ಗ್ರೂಪ್ ನ ಸಿಇಒ ಬೆಂಜಮಿನ್ ವೇಯ್, 2013 ರಲ್ಲಿ ಹಾನ್ನಾ ಬೋವೆಂಗ್ ನ್ನು ನ್ಯೂಯಾರ್ಕ್ ಗ್ಲೋಬಲ್ ಗ್ರೂಪ್ ನ ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥೆಯಾಗಿ ನೇಮಿಸಿದ್ದರು. ಆದರೆ ಆಕೆ ಹೆಚ್ಚು ನೈಟ್ ಕ್ಲಬ್ ಗಳಲ್ಲಿ ಕಾಲ ಕಳೆಯುತ್ತಿದ್ದರಿಂದ ಹನ್ನಾ ಬೋವೆಂಗ್ ಅವರನ್ನು ಮಾರುಕಟ್ಟೆ ಮುಖ್ಯಸ್ಥರ ಸ್ಥಾನದಿಂದ ವಜಾಗೊಳಿಸಲಾಗಿತ್ತು.
ತಮ್ಮ ವಿರುದ್ಧದ ಆರೋಪಕ್ಕೆ ಪ್ರತಿಕ್ರಿಯಿಸಿರುವ ಬೆಂಜಮಿನ್ ವೇಯ್, ವಜಾಗೊಳಿಸುವವರೆಗೂ ಮಾಜಿ ರೂಪದರ್ಶಿ ಪ್ರಕರಣ ದಾಖಲಿಸಿರಲಿಲ್ಲ, ಮಾರ್ಕೇಟಿಂಗ್ ವಿಭಾಗದ ಮುಖ್ಯಸ್ಥರ ಸ್ಥಾನದಿಂದ ವಜಾಗೊಳಿಸಿದ ನಂತರ ತಮ್ಮ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಹೇಳಿದ್ದಾರೆ. ಪ್ರಕರಣ ಇತ್ಯರ್ಥವಾಗದೆ ಇದ್ದರೆ, ಕಾನೂನು ಜಾರಿ ಮಾಡಿಸುವುದಾಗಿ ಹನ್ನಾ ಬೆದರಿಕೆ ಹಾಕಿದ್ದರು ಎಂದು ತಿಳಿದುಬಂದಿದೆ.
ಅಲ್ಲದೇ ತಮ್ಮ ವಿರುದ್ಧ ಆರೋಪ ಮಾಡಿರುವ ಮಾಜಿ ರೂಪದರ್ಶಿಯನ್ನು ವೇಶ್ಯೆ ಎಂದು ಹೇಳಿರುವ ವೇಯ್, ಆಕೆ ಕೊಕೇನ್ ಡೀಲರ್ ನೊಂದಿಗೆ ಸುತ್ತಾಡುತ್ತಿರುತ್ತಾಳೆ ಎಂದು ತಾವೇ ನಡೆಸುತ್ತಿರುವ ಬೋಲ್ಟ್ ಎಂಬ ಪತ್ರಿಕೆಯಲ್ಲಿ ಬರೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


