ಟ್ವಿಟರ್‍ನಲ್ಲಿ ಗೇಲಿಗೊಳಗಾದ ಅಮೆರಿಕನ್ ಬಾಬ್ಬಿ ಜಿಂದಾಲ್
ಅಮೆರಿಕ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಬಾಬ್ಬಿ ಜಿಂದಾಲ್ ವಿರುದ್ಧದ ಟೀಕಾಪ್ರಹಾರಗಳು, ಕುಚೋದ್ಯಗಳು ಟ್ವಿಟರ್ ಟ್ರೆಂಡಿಂಗ್‍ನಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ.

Published On :
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಬಾಬ್ಬಿ ಜಿಂದಾಲ್ ವಿರುದ್ಧದ ಟೀಕಾಪ್ರಹಾರಗಳು, ಕುಚೋದ್ಯಗಳು ಟ್ವಿಟರ್ ಟ್ರೆಂಡಿಂಗ್‍ನಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ.
ಭಾರತೀಯರಿಂದ ಹಾಗೂ ಭಾರತೀಯ ಮೂಲದ ಅಮೆರಿಕನ್ನರಿಂದಲೇ ಬಾಬ್ಬಿ ಗೇಲಿಗೆ ಗುರಿಯಾಗಿರುವುದಕ್ಕೆ ಕಾರಣ ಇಲ್ಲಿದೆ. ಅಧ್ಯಕ್ಷೀಯ ಚುನಾವಣೆಗಾಗಿ ರಿಪಬ್ಲಿಕನ್ ಪಾರ್ಟಿಯಿಂದ ತಮ್ಮನ್ನು ಸ್ಪರ್ಧಾಳು ಎಂದು ಘೋಷಿಸಿಕೊಂಡ ಲೂಯಿಸಿಯಾನಾದ ಬಾಬ್ಬಿ ಜಿಂದಾಲ್, ಆ ನಂತರ ಮಾತನಾಡುವಾಗ, ಎದುರಾಳಿ ಹಿಲರಿ ಕ್ಲಿಂಟನ್‍ರನ್ನು ಟೀಕಿಸುವ ಭರದಲ್ಲಿ ``ನಾನು ಭಾರತೀಯ ಅಮೆರಿಕನ್ ಎಂದು ಕರೆಸಿಕೊಳ್ಳಲು ಬಯಸುವುದಿಲ್ಲ. ನಾನು ಅಮೆರಿಕನ್' ಎಂದಿರುವುದೇ ಭಾರತೀಯರ ಅಸಮಾಧಾನಕ್ಕೆ ಕಾರಣವಾಗಿದೆ.
``ಪಂಜಾಬ್ ಮೂಲದ ನನ್ನ ತಂದೆತಾಯಿ ವಿದ್ಯಾವಂತರಲ್ಲ. ಆದರೂ ಆ ಕಾಲದಲ್ಲೇ ಅಮೆರಿಕದತ್ತ ಆಕರ್ಷಿತರಾದರು. ಇಲ್ಲಿ ಉತ್ತಮ ಜೀವನಕ್ಕೆ ಭರಪೂರ ಅವಕಾಶಗಳಿವೆ. ಆದರೆ ಹಿಲರಿ ಕ್ಲಿಂಟನ್ ಒಡೆದು ಆಳುವ ನೀತಿಯವರು. ಭಾರತೀಯ ಅಮೆರಿಕನ್, ಆಫ್ರಿಕನ್ ಅಮೆರಿಕನ್, ಐರಿಶ್ ಅಮೆರಿಕನ್, ಧನಿಕ ಅಮೆರಿಕನ್, ಬಡ ಅಮೆರಿಕನ್ ಅಂತೆಲ್ಲ ವಿಭಜಿಸುವ ಪ್ರಯತ್ನ ಮಾಡುತ್ತಿದ್ದಾರೆ. ನಾವು ಭಾರತೀಯ ಅಮೆರಿಕನ್ ಅಂತ ಯಾಕೆ ಪ್ರತ್ಯೇಕವಾಗಿರಬೇಕು? ನಾವು ಅಮೆರಿಕನ್ಸ್ ಅಷ್ಟೆ'' ಎಂದು ಜಿಂದಾಲ್ ಹೇಳಿರುವುದು ಸಹಜವಾಗಿಯೇ 30 ಲಕ್ಷಕ್ಕೂ ಹೆಚ್ಚಿನ ಭಾರತೀಯ ಅಮೆರಿಕನ್ನರಿಗೆ ಬೇಸರ ತಂದಿದೆ.
ಆದರೆ ಬಾಬ್ಬಿ ಜಿಂದಾಲ್ ಈ ಮಾತುಗಳನ್ನಾಡಿರುವುದು ಇದೇ ಮೊದಲಲ್ಲ. ನಾಲ್ಕು ವರ್ಷಗಳ ಹಿಂದೊಮ್ಮೆ ಹಾಗೂ ಆನಂತರವೂ ಕೆಲಸಂದರ್ಭಗಳಲ್ಲಿ ಈ ಹೇಳಿಕೆ ನೀಡಿದ್ದರು. ಆದರೆ ಟ್ವಿಟರ್ ಬಾಯಿಗೆ ಸುದ್ದಿ ಈಗ ಸಿಕ್ಕಿರುವುದರಿಂದ ``ಬಾಬ್ಬಿ ಜಿಂದಾಲ್ ಈಸ್ ಸೋ ವೈಟ್'' ಎಂಬ ಹ್ಯಾಶ್‍ಟ್ಯಾಗ್ ಅಡಿಯಲ್ಲಿ ಸಹಸ್ರಾರು ಟ್ವೀಟ್‍ಗಳು ಹರಿದಾಡಿವೆ. ಕೆಲವು ಟ್ವೀಟ್‍ಗಳಲ್ಲಿ ನೇರವಾಗಿ ಬಾಬ್ಬಿ ಜಿಂದಾಲ್ ರನ್ನು ಬಯ್ಯಲಾಗಿದೆ. ಇನ್ನು ಕೆಲವುಗಳಲ್ಲಿ ಜೋಕ್ ಮಾಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Washingtonಅಧ್ಯಕ್ಷೀಯ ಚುನಾವಣೆpresidential electionವಾಷಿಂಗ್ ಟನ್Louisiana Governor Bobby Jindalಲೂಸಿಯಾನ ಗವರ್ನರ್ ಬಾಬಿ ಜಿಂದಾಲ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


