ಗಿಣಿ ಮಾತಿನ ಹಿಂದಿರುವ ರಹಸ್ಯ ಬಯಲು
ಮನುಷ್ಯನಂತೆ ಗಿಳಿ ಮಾತಾಡುವುದು ಹೇಗೆ ಎಂಬ ಕುತೂಹಲ ಎಲ್ಲರಲ್ಲೂ ಇರುತ್ತದೆ. ಇದೀಗ ಈ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಡ್ಯೂಕ್ ವಿಶ್ವ ವಿದ್ಯಾನಿಲಯ....

ನವದೆಹಲಿ: ಮನುಷ್ಯನಂತೆ ಗಿಳಿ ಮಾತಾಡುವುದು ಹೇಗೆ ಎಂಬ ಕುತೂಹಲ ಎಲ್ಲರಲ್ಲೂ ಇರುತ್ತದೆ. ಇದೀಗ ಈ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಡ್ಯೂಕ್ ವಿಶ್ವ ವಿದ್ಯಾನಿಲಯದ ಸಂಶೋಧಕರ ತಂಡ ಗಿಳಿ ಮಾತಿನ ಹಿಂದಿರುವ ರಹಸ್ಯವನ್ನು ಪತ್ತೆ ಹಚ್ಚಿದ್ದಾರೆ.
ಗಿಣಿ ಮಾತಿನ ರಹಸ್ಯ : ಗಿಳಿಗಳ ಮೆದುಳು ಸಾಧಾರಣವಾಗಿ ಹಾಡುಹಕ್ಕಿಗಳ ಅಥವಾ ಹಮ್ಮಿಂಗ್ ಬರ್ಡ್ ನಂತಿರಲ್ಲ. ಹಾಡುವ ಹಕ್ಕಿಗಳ ದನಿಯನ್ನು ಮೆದುಳು ನಿಯಂತ್ರಿಸುವಂತೆ ಗಿಳಿಗಳಲ್ಲಿ ದನಿ ಹೊರಡಿಸುವ, ದನಿಯನ್ನು ಗ್ರಹಿಸುವ ಶಕ್ತಿಯಿರುವ ಶೆಲ್‌ಗಳು ಮೆದುಳಿನಲ್ಲಿವೆ. ಈ ಶೆಲ್‌ಗಳ ಸಹಾಯದಿಂದ ಗಿಳಿಗಳು ಮನುಷ್ಯನ ಮಾತುಗಳನ್ನು ಅನುಕರಿಸಬಲ್ಲವು.
ಹೆಚ್ಚಿನ ಹಕ್ಕಿಗಳಲ್ಲಿ ಧ್ವನಿ ಹೊರಡಿಸಲು ಸಹಾಯ ಮಾಡುವ ಮೆದುಳಿನವ ಭಾಗವು ಅದರ ಚಲನೆಯನ್ನೂ ನಿಯಂತ್ರಿಸುತ್ತದೆ. ಆದರೆ ಕೆಲವು ಗಿಳಿಗಳ ಜೀನ್‌ಗಳಲ್ಲಿ ವಿಶೇಷ ರೀತಿಯ ಅಂಶಗಳು ಕಂಡು ಬಂದಿವೆ. ಹೀಗೆ ವಿಶೇಷ ರೀತಿಯ ಜೀನ್‌ಗಳನ್ನು ಹೊಂದಿರುವ ಗಿಳಿಗಳು ಮಾತ್ರ ಹಾಡುವುದನ್ನು, ಕುಣಿಯುವುದನ್ನು ಕಲಿಯುತ್ತವೆ ಎಂದು ಸಂಶೋಧಕರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


