ಮನೆಯೆಂದರೆ ನಾಲ್ಕು ಗೋಡೆ, ಒಂದು ಛಾವಣಿಗೆ ಸೀಮಿತ ಅಲ್ಲ: ಪ್ರಧಾನಿ

ನವದೆಹಲಿ: ಗ್ರಾಹಕರ ಹಕ್ಕುಗಳನ್ನು ಎಲ್ಲಾ ಸಮಯದಲ್ಲಿಯೂ ರಕ್ಷಿಸುವುದು ತಮ್ಮ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.
ನಗರ ಪ್ರದೇಶಗಳಲ್ಲಿ ಮನೆ ಖರೀದಿಸುವಾಗ ಜನರು ಎದುರಿಸುವ ತೊಂದರೆಗಳ ಕುರಿತು ಮಾತನಾಡಿದ ಅವರು, ಇಂದು ನಮ್ಮ ದೇಶದಲ್ಲಿ ಬಿಲ್ಡರ್ ಗಳ ಚಿತ್ರಣ ಬದಲಾಗಿದೆ. ಗ್ರಾಹಕರು ಅವರನ್ನು ಋಣಾತ್ಮಕವಾಗಿ ನೋಡುತ್ತಾರೆ.
ನಗರಗಳ ಖಾಸಗಿ ಬಿಲ್ಡರ್ ಗಳ ಮೇಲೆ ವಾಗ್ದಾಳಿ ನಡೆಸಿದ ಪ್ರಧಾನಮಂತ್ರಿ, ನಗರಗಳು ಹೇಗೆ ಬೆಳೆಯಬೇಕು ಎಂಬುದನ್ನು ಖಾಸಗಿ ಬಿಲ್ಡರ್ ಗಳು ನಿರ್ಧಾರ ಮಾಡಬಾರದು. ಅದನ್ನು ನಗರ ನಿವಾಸಿಗಳು ಮತ್ತು ನಾಯಕರು ನಿರ್ಧಾರ ಮಾಡಬೇಕು ಎಂದು ಹೇಳಿದರು.
ಮನೆ ಖರೀದಿಸುವವರಿಗೆ ಎದುರಾಗುವ ಸಮಸ್ಯೆಗಳನ್ನು ಆಲಿಸಲು ಶೀಘ್ರವೇ ಕಾನೂನನ್ನು ಜಾರಿಗೆ ತರಲಾಗುವುದು. ಸ್ವಂತ ಸೂರು ಹೊಂದುವುದು ಪ್ರತಿಯೊಬ್ಬರ ಕನಸಾಗಿರುತ್ತದೆ. ಮನೆಯೆಂದರೆ ನಾಲ್ಕು ಗೋಡೆ ಮತ್ತು ಛಾವಣಿಗೆ ಸೀಮಿತವಾಗಿಲ್ಲ. ಅದರಿಂದಾಚೆ ಅನೇಕ ವಿಷಯಗಳಿರುತ್ತವೆ ಎಂದು ಪ್ರಧಾನಿ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


