ಪರರ ದೈವ ಪತಿ ಹಿಡಿಯಲು ಹೋಗಿ ಪರಲೋಕ ಸೇರಿದ ಪತ್ನಿ!
ಗಂಡ- ಹೆಂಡಿರ ಜಗಳ ರಸ್ತೆಗೆ ಬಂದರೆ ಏನಾಗುತ್ತೆ ಎನ್ನುವುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಇನ್ನೊಂದಿಲ್ಲ! ಪರ ಸ್ತ್ರೀ ಸಂಗ ಮಾಡಲು ಹೋದ ಪತಿಯನ್ನು ಹಿಡಿಯಲು ಹೋಗಿ ಮಹಿಳೆಯೊಬ್ಬಳು ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ...

ಹೂಸ್ಟನ್: ಗಂಡ- ಹೆಂಡಿರ ಜಗಳ ರಸ್ತೆಗೆ ಬಂದರೆ ಏನಾಗುತ್ತೆ ಎನ್ನುವುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಇನ್ನೊಂದಿಲ್ಲ! ಪರ ಸ್ತ್ರೀ ಸಂಗ ಮಾಡಲು ಹೋದ ಪತಿಯನ್ನು ಹಿಡಿಯಲು ಹೋಗಿ ಮಹಿಳೆಯೊಬ್ಬಳು ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ.
ಪತಿಯೇ ಪರ ದೈವ ಅಂದು-ಕೊಂಡರೆ ಆತ ಪರರ ದೈವ ಆಗುತ್ತಿದ್ದಾನೆ. ಬೇರೊಬ್ಬ ಹೆಂಗಸಿನ ಜತೆಗೆ ಓಡಾಡುತ್ತಿದ್ದಾನೆ. ಗಂಡನ ಮೋಸದಾಟವನ್ನು ರೆಡ್‍ಹ್ಯಾಂಡ್ ಆಗಿ ಹಿಡಿಯಬೇಕೆಂಬ ಪ್ರಯತ್ನದಲ್ಲಿ ರೇಸಿಗೆ ಬಿದ್ದು ಎನ್‍ಯುವಿ ಓಡಿಸಿದ ಟೆಕ್ಸಾಸ್‍ನ ನ್ಯಾನ್ಸಿ ಎಕೋಸ್ಟಾ ಎಂಬಾಕೆ ಈಗ ಇಹಲೋಕ ತ್ಯಜಿಸಿದ್ದಾಳೆ. ಟೆಕ್ಸಾಸ್‍ನ ಈ ಮೂರು ಮಕ್ಕಳ ತಾಯಿಗೆ ತನ್ನ ಪತಿ
ಬೇರೊಬ್ಬಳ ಜತೆಗೆ ಲಲ್ಲೆಗರೆಯುತ್ತಿದ್ದಾನೆ, ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾನೆ ಎನ್ನುವ ಅನುಮಾನ ವಿತ್ತು.
ಮನೆಯಲ್ಲಿ ನಡೆಯುತ್ತಿದ್ದ ಜಗಳ, ತಿರಸ್ಕಾರದಿಂದಾಗಿ ಅನುಮಾನಗೊಂಡ ಆಕೆ ಪತಿಯ ಹಿಂದೆ ಬೇಹುಗಾರರನ್ನೂ ಬಿಟ್ಟಿದ್ದಳು. ಗುರುವಾರ ಗಂಡ ಬೇರೊಬ್ಬ ಹೆಂಗಸಿನ ಜತೆಗೆ ಕಾರಲ್ಲಿ ಹೋಗುತ್ತಿರುವ ಮಾಹಿತಿ ಬಂದ ತಕ್ಷಣ ತನ್ನ ಎಸ್‍ಯುವಿ ಏರಿ ಫಾಲೋ ಮಾಡಿದ್ದಾಳೆ. ಗಂಡನಿರುವ ಕಾರನ್ನು ಅಡ್ಡಹಾಕ ಬೇಕು, ಆತನನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಎರಡು ತದಕಬೇಕು ಎಂದು ಅಂದು ಕೊಂಡಿದ್ದಳೋ ಏನೋ? ಈ ಬರದಲ್ಲಿ ರೇಸಿಗೆ ಬಿದ್ದಿದ್ದಾಳೆ.
ಈ ವೇಳೆ ಟ್ರಾಫಿಕ್ ಮಧ್ಯೆ ಆಕೆಯಿದ್ದ ಎಸ್‍ಯುವಿ ನಿಯಂತ್ರಣ ಕಳೆದುಕೊಂಡ ಪರಿಣಾಮ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದೆ. ಎರಡು, ಮೂರು ಪಲ್ಟಿಯಾದ ಎಸ್‍ಯುವಿ ಸಂಪೂರ್ಣ ನಜ್ಜುಗುಜ್ಜಾದ ಹಿನ್ನೆಲೆಯಲ್ಲಿ ಅದರಲ್ಲಿದ್ದ ನ್ಯಾನ್ಸಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.ಇನ್ನು ಎಸ್‍ಯುವಿ ಡಿಕ್ಕಿ ಹೊಡೆದ ಕಾರಿನ ಚಾಲಕನೂ ಗಂಭೀರ ಗಾಯಗೊಂಡಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


