ತುರ್ತು ಪರಿಸ್ಥಿತಿ ವೇಳೆ ಇಂದಿರಾಗೆ ಹೆದರಿದ್ದ ಅಮೆರಿಕ!
ತುರ್ತು ಪರಿಸ್ಥಿತಿ ವೇಳೆ ಭಾರತದಲ್ಲಿ ನಾಗರಿಕ ಸ್ವಾತಂತ್ರ್ಯ ಮೊಟಕುಗೊಂಡಿತ್ತಾದರೂ, ಭಾರತ ಸರ್ಕಾರದೊಂದಿಗೆ ಉತ್ತಮ ಸಂಬಂಧ ಕಾಯ್ದುಕೊಳ್ಳುವುದು ಅತಿ ಮುಖ್ಯ ಎಂದು ಅಮೆರಿಕ ಅಭಿಪ್ರಾಯವಾಗಿತ್ತು.

ನವದೆಹಲಿ: ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರುವ ಆರು ತಿಂಗಳ ಮುನ್ನವೇ ಅದಕ್ಕಾಗಿ ಸಿದ್ಧತೆ ನಡೆದಿತ್ತು ಎಂಬ ವಿಷಯ ಬಯಲಾದ ನಂತರ, ತುರ್ತು ಪರಿಸ್ಥಿತಿಗೆ ಸಂಬಂಧಿಸಿದಂತೆ ಹಲವು ಅಚ್ಚರಿಯ ಸಂಗತಿಗಳು ಬಹಿರಂಗವಾಗುತ್ತಿದೆ.
ಭಾರತ, ಪ್ರಜಾಪ್ರಭುತ್ವಕ್ಕೆ ವಿರೋಧವಾಗಿದ್ದ ತುರ್ತು ಪರಿಸ್ಥಿತಿ ಎದುರಿಸುತ್ತಿದ್ದ ಸಂದರ್ಭದಲ್ಲಿ, ಪ್ರಜಾಪ್ರಭುತ್ವದ ಬಗ್ಗೆ ಸ್ಪಷ್ಟ ಬದ್ಧತೆ ಹೊಂದಿದ್ದ ಅಮೆರಿಕಾದ ನಿಲುವು ಸಂಪೂರ್ಣ ಭಿನ್ನವಾಗಿತ್ತು ಎಂಬುದನ್ನು ವಿಕಿಲೀಕ್ಸ್ ಬಹಿರಂಗಪಡಿಸಿದೆ. ವಿಲಿಯಂ ಬಿ ಸಾಕ್ಸ್ ಬೇ ಅವರು ಭಾರತದಲ್ಲಿನ ಅಮೇರಿಕಾ ರಾಯಭಾರಿಯಾಗಿದ್ದ ಸಂದರ್ಭದಲ್ಲಿ ಅವರ ಹಾಗೂ ಅಮೆರಿಕಾ ಸರ್ಕಾರದ ನಡುವೆ ನಡೆದ ಮಾತುಕತೆಯ ಸಾರಾಂಶ ಅಮೇರಿಕಾ ಪ್ರಜಾಪ್ರಭುತ್ವಕ್ಕೆ ಬದ್ಧವಾಗಿದ್ದರೂ ಭಾರತದಲ್ಲಿ ಪ್ರಜಾಪ್ರಭುತ್ವಕ್ಕೆ ವಿರುದ್ಧವಾದ ತುರ್ತು ಪರಿಸ್ಥಿತಿಯ ವಿರುದ್ಧ ಮಾತನಾಡಿರಲಿಲ್ಲ ಎಂದು ತಿಳಿದುಬಂದಿದೆ.
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ಪ್ರಕಟವಾದ ವರದಿ ಪ್ರಕಾರ, ಇಂದಿರಾ ಗಾಂಧಿ ನೇತೃತ್ವದ ಸರ್ಕಾರ ಭಾರತದಲ್ಲಿ ನಾಗರಿಕ ಸ್ವಾತಂತ್ರ್ಯಗಳ ಮೊಟಕುಗೊಳಿಸಿತ್ತಾದರೂ, ಚೀನಾ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳಲು ಯತ್ನಿಸುತ್ತಿದ್ದ ವೇಳೆ ಸೋವಿಯತ್ ಕಡೆಗೆ ಹೆಚ್ಚು ಒಲವನ್ನು ತೋರದಂತೆ ತಡೆಗಟ್ಟಲು ಭಾರತ ಸರ್ಕಾರದೊಂದಿಗೆ ಉತ್ತಮ ಸಂಬಂಧ ಕಾಯ್ದುಕೊಳ್ಳುವುದು ಅತಿ ಮುಖ್ಯ ಎಂಬುದು ತುರ್ತು ಪರಿಸ್ಥಿತಿಯಾ ವೇಳೆ ವಿಶ್ವದ ಅತಿ ಬಲಿಷ್ಠ ರಾಷ್ಟ್ರವಾಗಿದ್ದ ಅಮೆರಿಕಾ ಅಭಿಪ್ರಾಯವಾಗಿತ್ತಂತೆ.
ಭಾರತದಲ್ಲಿ ತುರ್ತು ಪರಿಸ್ಥಿತಿ ಜಾರಿಯಾದ ಬಳಿಕ ಅಮೆರಿಕಾದ ರಾಯಭಾರಿ ವಿಲಿಯಂ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಎರಡು ಬಾರಿ ಭೇಟಿ ಮಾಡಿದ್ದರು. ವಿರೋಧ ಪಕ್ಷದವರೊಂದಿಗೆ ಮಾತನಾಡಂತೆ ಅಮೆರಿಕಾದ ಪತ್ರಕರ್ತರು ಹಾಗೂ ರಾಯಭಾರಿ ಕಚೇರಿ ಅಧಿಕಾರಿಗಳಿಗೆ ಸೂಚನೆ ನೀಡಿರಲಿಲ್ಲವಾದರೂ, ಈ ವಿಷಯದಲ್ಲಿ ಸ್ವಯಂ ನಿಯಂತ್ರಣ ವಿಧಿಸಿಕೊಂಡಿತ್ತು ಎಂದು ತಿಳಿದುಬಂದಿದೆ.
ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಡಲು ವಿರೋಧ ಪಕ್ಷಗಳಿಗೆ ಸಿಐಎ ಬೆಂಬಲ ನೀಡುತ್ತಿಲ್ಲ ಎಂಬುದನ್ನು ಅಮೆರಿಕಾದ ರಾಯಭಾರಿ ವಿಲಿಯಮ್ಸ್ ಇಂದಿರಾಗಾಂಧಿ ಅವರೊಂದಿಗಿನ ಮಾತುಕತೆ ವೇಳೆ ಮನವರಿಕೆ ಮಾಡಿದ್ದರು. ಅಲ್ಲದೇ ಸಿಐಎ ನಿರ್ದೇಶಕರೊಂದಿಗೂ ಮಾತನಾಡಿದ್ದ ವಿಲಿಯಮ್, ಒಂದು ವೇಳೆ ಅಂತಹದ್ದೇನಾದರೂ ನಡೆದಿದ್ದರೆ ತಾವು ಕೂಡಲೇ ರಾಜೀನಾಮೆ ನೀಡುವುದಾಗಿ ತಿಳಿಸಿದ್ದರು. ಆದರೆ ಸಿಐಎ ಪಾತ್ರದ ಬಗ್ಗೆ ಕಾಂಗ್ರೆಸ್ ವಿಚಾರಣೆ ನಂತರ, ರಾಯಭಾರಿ ಸ್ಥಾನಕ್ಕೆ ರಾಜೀನಾಮೆ ನೀದದಂತೆ ಇಂದಿರಾ ಗಾಂಧಿ ವಿಲಿಯಮ್ಅಮೆರಿಕ ರಾಯಭಾರಿಗೆ ಹೇಳಿದ್ದರಂತೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


