ಪ್ರಧಾನಿಯಿಂದ 'ನರೇಂದ್ರ ಮೋದಿ ಮೊಬೈಲ್ ಆಪ್' ಗೆ ಚಾಲನೆ
ಪ್ರಧಾನಿ, 'ನರೇಂದ್ರ ಮೋದಿ' ಮೊಬೈಲ್ ಆಪ್ ನ್ನು ಉದ್ಘಾಟಿಸಿದ್ದಾರೆ.

ನವದೆಹಲಿ: ತಂತ್ರಜ್ಞಾನವನ್ನು ಬಳಸಿಕೊಂಡು ಪ್ರಚಾರ ಕೈಗೊಳ್ಳುವ ರಾಜಕಾರಣಿಗಳಲ್ಲಿ ಮುಂಚೂಣಿಯಲ್ಲಿರುವ ಪ್ರಧಾನಿ, 'ನರೇಂದ್ರ ಮೋದಿ' ಮೊಬೈಲ್ ಆಪ್ ನ್ನು ಉದ್ಘಾಟಿಸಿದ್ದಾರೆ.
ಈ ಆಪ್ ಮೂಲಕ ಪ್ರಧಾನಿಗೆ ಸಂಬಂಧಿಸಿದ ಆ ಕ್ಷಣದ ಮಾಹಿತಿ ಹಾಗೂ ಅವರಿಂದ ನೇರವಾಗಿ ಸಂದೇಶ ಹಾಗೂ ಇ-ಮೇಲ್ ಗಳನ್ನು ಪಡೆಯಬಹುದಾಗಿದೆ. ಅಲ್ಲದೇ ಪ್ರಧಾನಿಯೊಂದಿಗೆ ನೇರವಾಗಿ ಸಂವಹನ ನಡೆಸಿ ತಮ್ಮ ಆಲೋಚನೆಗಳನ್ನು ಮತ್ತು ಸಲಹೆಗಳನ್ನು ಹಂಚಿಕೊಳ್ಳಲು ಈ ಆಪ್ ಸಹಕಾರಿಯಾಗಲಿದೆ.
ಆಪ್ ಬಿಡುಗಡೆ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ, ನರೇಂದ್ರ ಮೋದಿ ಮೊಬೈಲ್ ಆಪ್ ಬಿಡುಗಡೆಯಾಗಿದ್ದು, ನಾವೆಲ್ಲರೂ ಮೊಬೈಲ್ ನಲ್ಲಿ ಸಂಪರ್ಕದಲ್ಲಿರೋಣ, ಆಪ್ ನಲ್ಲಿ ನವೀನ ವೈಶಿಷ್ಟ್ಯಗಲಿದ್ದು, ಪ್ಲೇ ಸ್ಟೋರ್ ಮೂಲಕ ಇದನ್ನು ಡೌನ್ ಲೋಡ್ ಮಾಡಬಹುದಾಗಿದೆ, ಪ್ರತಿಕ್ರಿಯೆಗಳಿಗೆ ಸ್ವಾಗತ ಎಂದು ತಿಳಿಸಿದ್ದಾರೆ.
ಮೋದಿ ಅವರ ಬ್ಲಾಗ್ ಅಪ್ ಡೇಟ್ ಹಾಗೂ ಅವರ ಆಲೋಚನೆಗಳ ಬಗ್ಗೆಯೂ ಆಪ್ ಮೂಲಕ ಮಾಹಿತಿ ಪಡೆಯಬಹುದಾಗಿದೆ. ಆಪ್ ನ ಜೀವನಚರಿತ್ರೆ ವಿಭಾಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ಸಾಧ್ಯವಿದ್ದು, ಭಾರತ ಜಾಗತಿಕ ಮಟ್ಟದಲ್ಲಿ ಬಲಿಷ್ಠವಾಗುವುದಕ್ಕೆ ಮೋದಿ ಕೈಗೊಳ್ಳುತ್ತಿರುವ ಕ್ರಮಗಳನ್ನು ತಿಳಿದುಕೊಳ್ಳಬಹುದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


