ದೇಶ

ಯೋಗದ ಮಹತ್ವ ಸಾರಿದ ವಿಶ್ವಸಂಸ್ಥೆ ಕಾರ್ಯದರ್ಶಿ ಬಾನ್ ಕೀ ಮೂನ್

ಜೂನ್ 21 ರಂದು ಜಗತ್ತಿನಾದ್ಯಂತ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಭಾರತದ ಪುರಾತನ ಯೋಗ ಪದ್ಧತಿ ಕುರಿತಂತೆ ವಿಶ್ವಸಂಸ್ಥೆ ಮಹಾ...

ಯೋಗದ ಮಹತ್ವ ಸಾರಿದ ವಿಶ್ವಸಂಸ್ಥೆ ಕಾರ್ಯದರ್ಶಿ ಬಾನ್ ಕೀ ಮೂನ್
ಬಾನ್ ಕೀ ಮೂನ್
Published On :

ನವದೆಹಲಿ: ಜೂನ್ 21 ರಂದು ಜಗತ್ತಿನಾದ್ಯಂತ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಭಾರತದ ಪುರಾತನ ಯೋಗ ಪದ್ಧತಿ ಕುರಿತಂತೆ ವಿಶ್ವಸಂಸ್ಥೆ ಮಹಾ ಕಾರ್ಯದರ್ಶಿ ಬಾನ್ ಕೀ ಮೂನ್ ಅವರು ಯೋಗ ಎಂಬುದು ಮನಸ್ಸಿಗೆ ಶಾಂತಿ, ನೆಮ್ಮದಿ ನೀಡುತ್ತದೆ ಎಂದಿದ್ದಾರೆ.

ಯೋಗ ಮಾಡುವ ಮೂಲಕ ದೈಹಿಕ ಆರೋಗ್ಯ ಹಾಗೂ ಮನಸ್ಥಿತಿ ಸುಧಾರಿಸುತ್ತದೆ ಹೀಗಾಗಿ ಇದರಲ್ಲಿ ಧರ್ಮ ರಾಜಕೀಯ ಬೇಡ ಯೋಗ ಕುರಿತು ತಾರತಮ್ಯ ಸರಿಯಲ್ಲ ಎಂದಿರುವ ಬಾನ್ ಕೀ ಮೂನ್ ಹೇಳಿದ್ದಾರೆ. ಅಲ್ಲದೆ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕೆಲವೊಂದು ಯೋಗಾಸನ ಮಾಡಿದ್ದು ಅದರಿಂದ ನನಗೆ ತೃಪ್ತಿ ಸಿಕ್ಕಿದ್ದು, ಯೋಗವನ್ನು ಯಾರು ಬೇಕಾದರೂ ಮಾಡಬಹುದು ಇದಕ್ಕೆ ಯಾವುದೇ ಧರ್ಮದ ಕಟ್ಟುಪಾಡುಗಳಿಲ್ಲ ಎಂದು ತಿಳಿಸಿದ್ದಾರೆ.

ಯೋಗ ಎಂಬುದು ಯಾವುದೇ ತಾರತಮ್ಯ ಸೃಷ್ಟಿಸುವುದಿಲ್ಲ, ವಯಸ್ಸು, ಸಾಮರ್ಥ್ಯದ ಭೇದವಿಲ್ಲದಂತೆ ಎಲ್ಲರೂ ಯೋಗ ತರಬೇತಿ ಪಡೆಯಬಹುದಾಗಿದ್ದು  ನನ್ನ ಮೊದಲ ಆಸನದಲ್ಲೇ ಯೋಗದ ಮಹತ್ವವನ್ನ ಅರಿತಿದ್ದೇನೆ ಎಂದಿರುವ ಮೂನ್  ಮೊದಲ ಬಾರಿ ಯೋಗ ಕಲಿಯುತ್ತಿರುವವರಿಗೆ ವೃಕ್ಷಾಸನ ಉತ್ತಮವಾದದ್ದು ಎಂಬ ಕಿವಿಮಾತನ್ನು ಹೇಳಿದ್ದಾರೆ.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.