ಅಂಬೇಡ್ಕರ್ ವಾಸದ ಮನೆ ಮಾರಾಟ
ನಮ್ಮ ದೇಶದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ತಾವು ವಿದ್ಯಾರ್ಥಿಯಾಗಿದ್ದಾಗ ಲಂಡನ್ ನಲ್ಲಿ ಕಳೆದ ಮನೆ ಮತ್ತು ಜಾಗವನ್ನು ಭಾರತ ಖರೀದಿಸಲಿದೆ. ಅದು ಬರೋಬ್ಬರಿ ಸುಮಾರು 4 ದಶಲಕ್ಷ ಪೌಂಡ್ ಗೆ...
ಲಂಡನ್: ಗಣ್ಯ ವ್ಯಕ್ತಿಗಳು ಬಳಸುತ್ತಿದ್ದ ವಸ್ತುಗಳು ಸಾವಿರಾರು ಕೋಟಿ ರೂಪಾಯಿಗೆ ಹರಾಜಾಗುವುದು ಮತ್ತು ಮಾರಾಟವಾಗುವುದನ್ನು ನಾವು ಕೇಳಿದ್ದೇವೆ. ಇದೀಗ ನಮ್ಮ ದೇಶದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ತಾವು ವಿದ್ಯಾರ್ಥಿಯಾಗಿದ್ದಾಗ ಲಂಡನ್ ನಲ್ಲಿ ಕಳೆದ ಮನೆ ಮತ್ತು ಜಾಗವನ್ನು ಭಾರತ ಖರೀದಿಸಲಿದೆ. ಅದು ಬರೋಬ್ಬರಿ ಸುಮಾರು 4 ದಶಲಕ್ಷ ಪೌಂಡ್ ಗೆ.
ಉತ್ತರ ಲಂಡನ್ ನ ಚಾಕ್ ಫಾರ್ಮ್ ಪ್ರದೇಶದಲ್ಲಿರುವ 10 ಕಿಂಗ್ ಹೆನ್ರಿ ರಸ್ತೆಯ ಬಳಿ ಅಂಬೇಡ್ಕರ್ ಅವರು ವಾಸಿಸುತ್ತಿದ್ದ ಮನೆ ಹಾಗೂ ಆಸ್ತಿಯಿದ್ದು ಅದರ ಮಾರಾಟ ಪ್ರಕ್ರಿಯೆ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಅಂಬೇಡ್ಕರ್ ಅವರು 1921-22ರಲ್ಲಿ ಲಂಡನ್ ನ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಓದುತ್ತಿರುವ ಸಂದರ್ಭದಲ್ಲಿ ಅಲ್ಲಿ ವಾಸವಾಗಿದ್ದರು ಎಂದು ಅಲ್ಲಿನ ಒಂದು ನೀಲಿ ಅಲಂಕಾರ ನೆನಪಿಸುತ್ತದೆ.
ಖರೀದಿ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಭಾರತೀಯ ಉನ್ನತ ಆಯೋಗದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಹಾರಾಷ್ಟ್ರ ಸರ್ಕಾರ ಆಸ್ತಿಯನ್ನು ಖರೀದಿಸಲು ನಿರ್ಧಾರ ತೆಗೆದುಕೊಂಡಿತ್ತು.
''ಇದು ನಮಗೊಂದು ಐತಿಹಾಸಿಕ ಕ್ಷಣ. ಅದು ಕೇವಲ ಮನೆಯಾಗಿರದೆ ಭಾರತೀಯರ ಭಾವನಾತ್ಮಕ ಸಂಬಂಧವಾಗಿದೆ ಎಂದು ಮಹಾರಾಷ್ಟ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ವಿಶೇಷ ನೆರವು ಸಚಿವ ರಾಜ್ ಕುಮಾರ್ ಬದೋಲೆ ತಿಳಿಸಿದ್ದಾರೆ.
ಆಸ್ತಿಯನ್ನು ಮಹಾರಾಷ್ಟ್ರ ಸರ್ಕಾರ ಖರೀದಿಸಲಿದ್ದು, ಇದರ ಬೆಲೆ 3.2 ದಶಲಕ್ಷ ಪೌಂಡ್ ನಿಂದ 4 ದಶಲಕ್ಷ ಪೌಂಡ್ ಎಂದು ಅಂದಾಜಿಸಲಾಗಿದೆ. ಕಟ್ಟಡದಲ್ಲಿ ಡಾ.ಭೀಮರಾವ್ ಅಂಬೇಡ್ಕರ್, ಭಾರತದ ಸಾಮಾಜಿಕ ನ್ಯಾಯ ಹೋರಾಟಗಾರ ಎಂದು ಬರೆದಿದೆ. ಖರೀದಿಸಿದ ನಂತರ ಕೆಲವು ಅಗತ್ಯ ದುರಸ್ತಿ ನಡೆಸಿ ನಂತರ ಸಾರ್ವಜನಿಕ ವೀಕ್ಷಣೆಗೆ ಮುಕ್ತಗೊಳಿಸಲಾಗುವುದು ಎಂದು ತಿಳಿಸಿದರು.
ಇಂಗ್ಲೆಂಡಿಗೆ ಅಧ್ಯಯನಕ್ಕೆ ತೆರಳುವ ವಿದ್ಯಾರ್ಥಿಗಳಿಗೆ ಬಳಸಲು ಕಟ್ಟಡದ ಒಂದು ನೆಲವನ್ನು ನೀಡಲಾಗುವುದು. 2 ಸಾವಿರದ 50 ಚದರಡಿ ವಿಸ್ತೀರ್ಣದ ಮೂರು ಮಹಡಿಯಿರುವ ಲಂಡನ್ ನ ಪ್ರಮುಖ ಪ್ರದೇಶದಲ್ಲಿರುವ ಕಟ್ಟಡದ ಮಾರಾಟ ಪ್ರಕ್ರಿಯೆ ಕಳೆದ ವರ್ಷ ಆರಂಭವಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

