ಹಿಲರಿ ನನ್ನ ಬದುಕಿನ ಅಮೂಲ್ಯ ಕೊಡುಗೆ: ಬಿಲ್ ಕ್ಲಿಂಟನ್
``ಹಿಲರಿಯು ನಾನು ಹಿಂದೆಂದೂ ಭೇಟಿಯಾಗಿರದಂತಹ ಅಮೂಲ್ಯ ಕೊಡುಗೆ. ಸಂಕಷ್ಟದ ಸಂದರ್ಭದಲ್ಲೂ ಆಕೆ ನನ್ನೊಂದಿಗೆ ಕಲ್ಲಿನಂತೆ ನಿಂತಿದ್ದಳು''. ಅಮೆರಿಕದ 2016ರ ಅಧ್ಯಕ್ಷೀಯ ಚುನಾವಣೆಯ ರೇಸ್ ನಲ್ಲಿರುವ ಹಿಲರಿ ಕ್ಲಿಂಟನ್ ಅವರ ಬಗ್ಗೆ ಪತಿ ಬಿಲ್ ಕ್ಲಿಂಟನ್ ಹೇಳಿದ ಮಾತಿದು...

ವಾಷಿಂಗ್ಟನ್: ``ಹಿಲರಿಯು ನಾನು ಹಿಂದೆಂದೂ ಭೇಟಿಯಾಗಿರದಂತಹ ಅಮೂಲ್ಯ ಕೊಡುಗೆ. ಸಂಕಷ್ಟದ ಸಂದರ್ಭದಲ್ಲೂ ಆಕೆ ನನ್ನೊಂದಿಗೆ ಕಲ್ಲಿನಂತೆ ನಿಂತಿದ್ದಳು''. ಅಮೆರಿಕದ 2016ರ ಅಧ್ಯಕ್ಷೀಯ ಚುನಾವಣೆಯ ರೇಸ್ ನಲ್ಲಿರುವ ಹಿಲರಿ ಕ್ಲಿಂಟನ್ ಅವರ ಬಗ್ಗೆ ಪತಿ ಬಿಲ್ ಕ್ಲಿಂಟನ್ ಹೇಳಿದ ಮಾತಿದು.
ಸಿಎನ್‍ಎನ್‍ಗೆ ಸಂದರ್ಶನ ನೀಡಿ ಮಾತನಾಡಿದ ಬಿಲ್ ಕ್ಲಿಂಟನ್, ``ಆಕೆ ಏನಾಗಬೇಕೆಂದು ನಾನು ಬಯಸಿದ್ದೆನೋ, ಆ ಕನಸು ನನಸಾಗುವ ಅವಕಾಶವನ್ನು ಕಸಿಯಲು ನನಗೆ ಇಷ್ಟವಿಲ್ಲ. ಆಕೆ ತನ್ನ ರಾಜಕೀಯ ಗುರಿಯನ್ನು ತಲುಪಲು ನಾನು ಬೆಂಬಲ ನೀಡುತ್ತೇನೆ. ನೀನು ನನಗೆ 26 ವರ್ಷಗಳನ್ನು ನೀಡಿದ್ದಿ, ನಾನೂ ನಿನಗೆ 26 ವರ್ಷಗಳನ್ನು ನೀಡುತ್ತೇನೆ.
ಆ ಅವಧಿಯಲ್ಲಿ ಏನೇನು ಮಾಡಬೇಕೆಂದೆನಿಸುತ್ತದೋ ಅದೆಲ್ಲವನ್ನೂ ಸಾಧಿಸು ಎಂದು ಹಿಲರಿ ನ್ಯೂಯಾರ್ಕ್‍ನಿಂದ ಸೆನೇಟ್‍ಗೆ ಆಯ್ಕೆಯಾದಾಗಲೇ ನಾನು ಹೇಳಿದ್ದೆ'' ಎಂದಿದ್ದಾರೆ ಕ್ಲಿಂಟನ್. ಕ್ಲಿಂಟನ್‍ರ ಈ ಸಂದರ್ಶನವು ಭಾನುವಾರ ಪ್ರಸಾರವಾಗಲಿದೆ. ಇದೇ ವೇಳೆ, ಹಿಲರಿ ಅವರ ಪ್ರಚಾರ ರ್ಯಾಲಿಗೆ ನ್ಯೂಯಾರ್ಕ್‍ನಲ್ಲಿ ಶನಿವಾರ ಚಾಲನೆ ನೀಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


