ದೇಶ

ಕಾಶ್ಮೀರದಲ್ಲಿ ಇಸಿಸ್, ಪಾಕ್ ಧ್ವಜ ಹಾರಾಟ

ಕಾಶ್ಮೀರದಲ್ಲಿ ಶುಕ್ರವಾರ ಮತ್ತೆ ಪ್ರತ್ಯೇಕತಾವಾದಿಗಳು ಪಾಕಿಸ್ತಾನದ ಧ್ವಜದ ಹಾರಾಟ ಮಾಡಿದ್ದು, ಜಾಮಿಯಾ ಮಸೀದಿ ಬಳಿ ನಡೆದ ಯುವಕರ ಮೆರವಣಿಗೆಯಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಧ್ವಜ ಪ್ರದರ್ಶನ...

ಕಾಶ್ಮೀರದಲ್ಲಿ ಇಸಿಸ್, ಪಾಕ್ ಧ್ವಜ ಹಾರಾಟ
ಭದ್ರತಾ ಪಡೆಗಳತ್ತ ಕಲ್ಲು ತೂರಾಟದಲ್ಲಿ ತೊಡಗಿರುವ ಉದ್ರಿಕ್ತರು (ಸಂಗ್ರಹ ಚಿತ್ರ)
Published On :

ಶ್ರೀನಗರ: ಕಾಶ್ಮೀರದಲ್ಲಿ ಶುಕ್ರವಾರ ಮತ್ತೆ ಪ್ರತ್ಯೇಕತಾವಾದಿಗಳು ಪಾಕಿಸ್ತಾನದ ಧ್ವಜದ ಹಾರಾಟ ಮಾಡಿದ್ದು, ಜಾಮಿಯಾ ಮಸೀದಿ ಬಳಿ ನಡೆದ ಯುವಕರ ಮೆರವಣಿಗೆಯಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಧ್ವಜ ಪ್ರದರ್ಶನ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಪ್ರತ್ಯೇಕತಾವಾದಿಗಳು ಭಾರತ ಸರ್ಕಾರದ ಎಚ್ಚರಿಕೆಯ ನಡುವೆಯೂ ಪದೇ ಪದೇ ಪ್ರತಿಭಟನೆ ವೇಳೆ ಪಾಕಿಸ್ತಾನ ಧ್ವಜ ಹಾರಾಟ ಮಾಡುತ್ತಿದ್ದು, ಇಂದು ಮತ್ತೆ ಕಾಶ್ಮೀರದ ಎರಡು ಪ್ರತ್ಯೇಕ ಪ್ರದೇಶಗಳಲ್ಲಿ ಪಾಕ್ ಧ್ವಜ ಮತ್ತು ಇಸಿಸ್ ಉಗ್ರ ಸಂಘಟನೆ ಧ್ವಜ ಪ್ರದರ್ಶನ ಮಾಡಿದ್ದಾರೆ. ಶ್ರೀನಗರದ ನೋವಟ್ಟಾ ಚೌಕದ ಬಳಿ ಇರುವ ಜಾಮಾ ಮಸೀದಿಯ ಪ್ರದೇಶದಲ್ಲಿ ರ್ಯಾಲಿ ನಡೆಸುತ್ತಿದ್ದ ಮುಸುಕುದಾರಿ ಯುವಕರ ತಂಡ ಇಸಿಸ್ ಘೋಷಣೆಗಳಿರುವ ಫಲಕಗಳನ್ನು ಮತ್ತು ಇಸಿಸ್ ಉಗ್ರ ಸಂಘಟನೆಯ ಧ್ವಜವನ್ನು ಹಾರಿಸಿದ್ದಾರೆ. ಅಲ್ಲದೆ ರ್ಯಾಲಿಯಲ್ಲಿ ಪಾಕ್ ಪರ ಘೋಷಣೆಗಳನ್ನೂ ಕೂಡ ಕೂಗಿದ್ದಾರೆ ಎಂದು ತಿಳಿದುಬಂದಿದೆ.

ಈ ವೇಳೆ ರ್ಯಾಲಿಗೆ ಭಾರತೀಯ ಸೇನೆಯ ಭದ್ರತಾಪಡೆಗಳು ಅಡ್ಡಿ ಪಡಿಸಿದ್ದು, ಪ್ರತಿಭಟನಾ ನಿರತ ಯುವಕರನ್ನು ತಡೆಯಲು ಮುಂದಾದಾಗ ಆಕ್ರೋಶಗೊಂಡ ಅವರು ಭದ್ರತಾ ಪಡೆಗಳತ್ತ ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ಹುರಿಯತ್ ನಾಯಕ ಮೀರವೈಜ್ ಉಮರ್ ಫಾರೂಖ್ ಕೂಡ ಸ್ಥಳದಲ್ಲಿಯೇ ಇದ್ದರು ಮತ್ತು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು ಎಂದು ಮೂಲಗಳು ತಿಳಿಸಿವೆ. ಪ್ರಸ್ತುತ ಘಟನಾ ಸ್ಥಳದಲ್ಲಿ ಇದೀಗ ಪ್ರಕ್ಷುಬ್ದ ವಾತಾವರಣ ನೆಲೆಸಿದ್ದು, ಹಿರಿಯ ಸೇನಾಧಿಕಾರಿಗಳು ದೌಡಾಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.