ವೈದ್ಯರಿಗೆ ಇನ್ನು ಕ್ಯಾಪಿಟಲ್ ಅಕ್ಷರ ಕಡ್ಡಾಯ
ಡಾಕ್ಟರ್ ಕೈಬರಹ ಯಾಕೆ ಹೀಗಿರುತ್ತೆ.. ಇದು ಯಾವ ಲಿಪಿ ಅಂತ ಅರ್ಥ ಆಗೋದಿಲ್ವಲ್ಲ.. ಎಂದು ರೋಗಿಗಳು ಒದ್ದಾಡೋದು ಮಾಮೂಲು. ಆ ಬಗ್ಗೆ ತಮಾಷೆಗಳೂ...

ನವದೆಹಲಿ : ಡಾಕ್ಟರ್ ಕೈಬರಹ ಯಾಕೆ ಹೀಗಿರುತ್ತೆ.. ಇದು ಯಾವ ಲಿಪಿ ಅಂತ ಅರ್ಥ ಆಗೋದಿಲ್ವಲ್ಲ.. ಎಂದು ರೋಗಿಗಳು ಒದ್ದಾಡೋದು ಮಾಮೂಲು. ಆ ಬಗ್ಗೆ ತಮಾಷೆಗಳೂ ಸಾಮಾನ್ಯ. ಆದರೆ ಮೆಡಿಕಲ್ ಶಾಪ್‍ನವರೂ ಕೂಡ ಡಾಕ್ಟರ್ ನೀಡುವ ಪ್ರಿಸ್ಕ್ರಿಪ್ಷನ್ ಅರ್ಥ ಮಾಡಿಕೊಳ್ಳಲು ಹೆಣಗೋದು, ತಪ್ಪಾಗಿ ಅರ್ಥೈಸಿಕೊಂಡು ಇನ್ಯಾವುದೋ ಔಷಧ ಕೊಡೋದು, ಅದರಿಂದ ರೋಗಿಯ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರೋದು ಇಂಥವೆಲ್ಲ ಬಹಳಷ್ಟು ನಡೆದಿದೆ.
ಇನ್ನುಮುಂದೆ ಇದಕ್ಕೆಲ್ಲ ಪೂರ್ಣವಿರಾಮ ಬೀಳಲಿದೆ. ಡಾಕ್ಟರ್‍ಗಳು ಇನ್ನುಮುಂದೆ ಔಷಧ ಚೀಟಿಯಲ್ಲಿ ಕಡ್ಡಾಯವಾಗಿ ಇಂಗ್ಲಿಷ್ ಕ್ಯಾಪಿಟಲ್ ಅಕ್ಷರಗಳನ್ನು ಬಳಸಬೇಕಿದೆ. ಅಷ್ಟೇ ಅಲ್ಲ ಔಷಧಗಳ ಸಾರ್ವತ್ರಿಕ ಹೆಸರನ್ನೇ ನಮೂದಿಸಬೇಕಿದೆ. ಕೇಂದ್ರ ಆರೋಗ್ಯ ಸಚಿವಾಲಯ ಶೀಘ್ರದಲ್ಲೇ ಈ ಆದೇಶದ ಗೆಜೆಟ್ ಸೂಚನೆ ಬಿಡುಗಡೆ ಮಾಡಲಿದ್ದು, ತಕ್ಷಣವೇ ದೇಶಾದ್ಯಂತ ಈ ನಿಯಮ ಜಾರಿಗೆ ಬರಲಿದೆ ಎಂದು ಭಾರತೀಯ ವೈದ್ಯಕೀಯ ಸಂಘದ ಡಾ.ಕೆ.ಕೆ. ಅಗರ್ವಾಲ್ ತಿಳಿಸಿದ್ದಾರೆ.
ವೈದ್ಯರ ಸಮೂಹ ಈ ಹೊಸ ನಿಯಮವನ್ನು ಸ್ವಾಗತಿಸಿದ್ದು, ``ಆಸ್ಪತ್ರೆಯಲ್ಲಿ ಹೆಚ್ಚು ಸಂಖ್ಯೆಯ ರೋಗಿಗಳಿರುವಾಗ ಈ ನಿಯಮದಿಂದಾಗಿ ಕೆಲಸಗಳ ವೇಗ ತಗ್ಗಬಹುದು. ಆದರೂ ಅವರ ಹಿತದೃಷ್ಟಿಯಿಂದ ಇದು ಒಳ್ಳೆಯದು''ಎಂದಿದ್ದಾರೆ.
2002ರಲ್ಲಿ ಮೆಡಿಕಲ್ ಕೌನ್ಸಿಲ್ ಕಾಯ್ದೆಯಲ್ಲಿ ಈ ಬಗ್ಗೆ ತಿದ್ದುಪಡಿ ತಂದಿದ್ದರೂ, 13 ವರ್ಷಗಳ ನಂತರ ಅನುಷ್ಠಾನಕ್ಕೆ ಬರುತ್ತಿದೆ. ಶೀಘ್ರದಲ್ಲೇ ಈ ಹೊಸ ನಿಯಮದ ಬಗ್ಗೆ ದೇಶಾದ್ಯಂತ ಇರುವ ಎಲ್ಲ ವೈದ್ಯರಿಗೂ ಆದೇಶ ಹಾಗೂ ಮಾಹಿತಿ ತಲುಪಿಸಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ನಡ್ಡಾ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


