ಮ್ಯಾಗಿ ನಂತರ ಕಪ್ಪುಪಟ್ಟಿಯಲ್ಲಿ ಸ್ಟಾರ್‍ಬಕ್ಸ್, ಕೆಲ್ಲಾಗ್ಸ್?
ನೆಸ್ಲೆ ಮ್ಯಾಗಿ ತಯಾರಿಕೆಗೆ ತಡೆ ಆದೇಶ ಬರುತ್ತಿರುವ ಹೊತ್ತಲ್ಲೆ ಇನ್ನಷ್ಟು ಉತ್ಪನ್ನಗಳು ನಿರ್ಬಂಧ ಭೀತಿ ಅನುಭವಿಸಿವೆ...

ನವದೆಹಲಿ/ಸಿಂಗಾಪುರ: ನೆಸ್ಲೆ ಮ್ಯಾಗಿ ತಯಾರಿಕೆಗೆ ತಡೆ ಆದೇಶ ಬರುತ್ತಿರುವ ಹೊತ್ತಲ್ಲೆ ಇನ್ನಷ್ಟು ಉತ್ಪನ್ನಗಳು ನಿರ್ಬಂಧ ಭೀತಿ ಅನುಭವಿಸಿವೆ.
ಭಾರತ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್ಎಸ್‍ಎಸ್‍ಎಐ) ಈಗಾಗಲೇ ಒಂದು ಕಪ್ಪು ಪಟ್ಟಿ ಸಿದ್ಧಪಡಿಸಿ ರಾಜ್ಯಗಳಿಗೆ ನೀಡಿದ್ದು, ಜನಪ್ರಿಯ ಸ್ಟಾರ್ ಬಕ್ಸ್, ಕೆಲ್ಲಾಗ್ ಸ್, ವೆಂಕಿ'ಸ್ ಉತ್ಪನ್ನಗಳು ತಿರಸ್ಕೃತ ಪಟ್ಟಿಯಲ್ಲಿ ಕಾಣಿಸಿಕೊಂಡಿವೆ. ಹೀಗೆಂದು ಮೂಲಗಳನ್ನು ಉಲ್ಲೇಖಿಸಿ ಖಾಸಗಿ ಪತ್ರಿಕೆಯೊಂದು ಬುಧವಾರ ವರದಿ ಮಾಡಿದೆ.
'ಈ ಕಪ್ಪುಪಟ್ಟಿಯ ಬಗ್ಗೆ ತಮಗೇನೂ ಮಾಹಿತಿ ಇಲ್ಲವೆನ್ನುತ್ತಿದ್ದು, ತಾಂತ್ರಿಕ ಕಾರಣಗಳಿಗೆ ಕೆಲವು ಉತ್ಪನ್ನಗಳು ತಿರಸ್ಕೃತಗೊಂಡಿವೆಯೇ ಹೊರತು ಸುರಕ್ಷತೆಯ ವಿಷಯದಲ್ಲಿ ಯಾವ ಸಮಸ್ಯೆಯಿಲ್ಲ. ಆಹಾರ ಪ್ರಾಧಿಕಾರದೊಂದಿಗೆ ಸಂಪರ್ಕದಲ್ಲಿದ್ದು, ಶೀಘ್ರದಲ್ಲೇ ಅನುಮೋದನೆ ದೊರೆಯಲಿದೆ'' ಎಂದು ಸ್ಟಾರ್‍ಬಕ್ಸ್ ವಿವರಣೆ ನೀಡಿದೆ. ಅದರೆ ಎಫ್ಎಸ್‍ಎಸ್ ಎಐ ಮಾತ್ರ ತನ್ನ ವರದಿಯಲ್ಲಿ, ಇವೆಲ್ಲ ಉತ್ಪನ್ನಗಳನ್ನು ಸುರಕ್ಷತೆಯ ಮಾನದಂಡದ ಮೇಲೆಯೇ ಕಪ್ಪುಪಟ್ಟಿಗೆ ಸೇರಿಸಿರುವುದಾಗಿ ಪ್ರಾಧಿಕಾರ ದೃಢಪಡಿಸಿದೆ ಎಂದು ಪತ್ರಿಕೆ ವರದಿಯಲ್ಲಿ ತಿಳಿಸಿದೆ.
ಯಾವುದಕ್ಕೆಲ್ಲ ನಿರ್ಬಂಧದ
* ಕೆಲ್ಲಾಗ್ ಸ್ ನ ಸ್ಪೆಷಲ್ ಕೆ ರೆಡ್‍ಬೆರ್ರಿ
* ವೆಂಕಿ'ಸ್ ಕಂಪನಿಯ ರೆಡಿ ಟು ಈಟ್ ಚಿಕನ್, (ಅರೇಬಿಕ್ ಕೋಫ್ತ, ಚಿಕನ್ ಬರ್ಗರ್)
* ನ್ಯೂಟ್ರಿಶಿಯಾ ಕಂಪೆನಿಯ ಪ್ರೋಟೀನ್‍ಎಕ್ಸ್ ಸೇರಿದಂತೆ 13 ಪ್ರೋಟೀನ್ ಸಪ್ಲಿಮೆಂಟ್‍ಗಳು
* ಕೂದಲು ಬೆಳೆಸುವ ಉತ್ಪನ್ನ, ಹಸಿವು ಹೆಚ್ಚಿಸುವ ಮಾತ್ರೆ, ರೋಗನಿರೋಧಕ ಮಾತ್ರೆ, ಸೌಂದರ್ಯವರ್ಧಕಗಳು, ವಿಟಮಿನ್ ಸ್ಪ್ರೇಗಳು, ರ್ಯಾನ್‍ಬಾಕ್ಸಿ ಕಂಪನಿಯ ರಿವೈಟಲ್, ಆ್ಯಮ್ ವೇಯ ನ್ಯೂಟ್ರಲೈಟ್
* ಮಾನ್‍ಸ್ಟರ್, ಝಿಂಗಾ ಮುಂತಾದ ಎನರ್ಜಿ ಪೇಯಗಳು, ರೆಡಿ ಟು ಈಟ್ ಚಪಾತಿ, ಎಣ್ಣೆಗಳು, ಟೀಬ್ಯಾಗ್, ಕೇಕ್ ಇತ್ಯಾದಿ
ತಿರಸ್ಕೃತವಾಗಲು ಕಾರಣ
* ಸಾಸ್ ಮತ್ತು ಸಿರಪ್‍ಗಳಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆ ಹಾಗೂ ಕ್ಯಾರಾಮೆಲ್ ಪತ್ತೆ
* ರೆಡಿ ಟು ಈಟ್ ಉತ್ಪನ್ನಗಳಲ್ಲಿ ಅಪಾಯಕಾರಿ ಪ್ರಮಾಣದ ಉಪ್ಪಿನಂಶ ಮತ್ತು ಭಾರ ಲೋಹದಂಶಗಳು
* ಟೀ ಉತ್ಪನ್ನಗಳಲ್ಲಿ ಕಬ್ಬಿಣದ ಪುಡಿಯಂಶಗಳು ಶಕ್ತಿ ಪೇಯಗಳಲ್ಲಿ ಮಿತಿಮೀರಿದ ಕೆಫಿನ್ ಮತ್ತು ಗಿನ್‍ಸೆಂಗ್
ಸಿಂಗಾಪುರದಲ್ಲಿ ತಿನ್ನಲು ಯೋಗ್ಯ
ಭಾರತದಲ್ಲಿ ತಯಾರಾದ ಮ್ಯಾಗಿ ನೂಡಲ್ಸ್ ಸಿಂಗಾಪೂರ್ ಆಹಾರ ಪ್ರಾಧಿಕಾರಗಳಿಂದ ಪರೀಕ್ಷಿಸಲ್ಪಟ್ಟಿದ್ದು, ಆರೋಗ್ಯಕ್ಕೆ ಹಾನಿಕರವಲ್ಲ ಎಂದು ಪ್ರಮಾಣ ಪಡೆದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


