ದೇಶ

ನಮ್ಮ ವಿವಿಯಿಂದ ತೋಮರ್ ಪದವಿ ಪಡೆದಿಲ್ಲ: ಆರ್‌ಎಂಎಲ್ ಅವಧ್ ಯುನಿವರ್ಸಿಟಿ

ನಕಲಿ ಕಾನೂನು ಪದವಿ ಪ್ರಮಾಣ ಪತ್ರ ಆರೋಪಕ್ಕೆ ಗುರಿಯಾಗಿ ಪೊಲೀಸ್ ಕಸ್ಟಡಿಯಲ್ಲಿರುವ ದೆಹಲಿ ಮಾಜಿ ಕಾನೂನು ಸಚಿವ ಜಿತೇಂದ್ರ ಸಿಂಗ್ ತೋಮರ್ ಗೆ ಮತ್ತೊಂದು ಕಂಟಕ ಎದುರಾಗಿದೆ...

ನಮ್ಮ ವಿವಿಯಿಂದ ತೋಮರ್ ಪದವಿ ಪಡೆದಿಲ್ಲ: ಆರ್‌ಎಂಎಲ್ ಅವಧ್ ಯುನಿವರ್ಸಿಟಿ
Published On :

ಫೈಝಾಬಾದ್: ನಕಲಿ ಕಾನೂನು ಪದವಿ ಪ್ರಮಾಣ ಪತ್ರ ಆರೋಪಕ್ಕೆ ಗುರಿಯಾಗಿ ಪೊಲೀಸ್ ಕಸ್ಟಡಿಯಲ್ಲಿರುವ ದೆಹಲಿ ಮಾಜಿ ಕಾನೂನು ಸಚಿವ ಜಿತೇಂದ್ರ ಸಿಂಗ್ ತೋಮರ್ ಗೆ ಮತ್ತೊಂದು ಕಂಟಕ ಎದುರಾಗಿದೆ.

ಜಿತೇಂದ್ರ ಸಿಂಗ್ ತೋಮರ್ ಅವರು ನಮ್ಮ ವಿದ್ಯಾಲಯದಿಂದ ಪದವಿ ಪಡೆದಿಲ್ಲ ಎಂದು ರಾಮ್ ಮನೋಹರ್ ಲೋಹಿಯಾ ಅವಧ್ ವಿದ್ಯಾಲಯ ಹೇಳಿದೆ. ಇದರಿಂದಾಗಿ ಜಿತೇಂದ್ರ ಸಿಂಗ್ ತೋಮರ್ ಅವರು ಯಾವ ವಿದ್ಯಾಲಯದಿಂದ ಪದವಿ ಪಡೆದಿರುವುದಾಗಿ ಹೇಳಿದ್ದರೋ ಅದೇ ವಿದ್ಯಾಲಯ ಪದವಿ ಪಡೆದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ.

ತೋಮರ್ ಅವರ ಡಿಗ್ರಿ ಮಾರ್ಕ್ಸ್ ಕಾರ್ಡ್ ಕುರಿತು ಮಾಹಿತಿ ನೀಡುವಂತೆ ಪ್ರದೀಪ್ ಕುಮಾರ್ ಎಂಬುವರು ಆರ್ಟಿಐ ಮುಖಾಂತರ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಕಳೆದ ಜನವರಿ 22 ರಂದು ಉತ್ತರಿಸಿದ್ದ ವಿದ್ಯಾಲಯ ತೋಮರ್ ಅವರ ಬಿಎಸ್ಇ ಡಿಗ್ರಿ ಪ್ರಮಾಣ ಪತ್ರ ಬೇರೋಬ್ಬರ ಪ್ರಮಾಣಪತ್ರದ ನಕಲು ಎಂದು ತನ್ನ ಹಳೆಯ ವಾದವನ್ನೆ ಮುಂದಿಟ್ಟಿದೆ.

ದೆಹಲಿಯ ತ್ರೀ ನಗರದ ಶಾಸಕ ತೋಮರ್ ಅವರನ್ನು ನಕಲಿ ಪದವಿ ಪ್ರಮಾಣ ಪತ್ರ ಸಂಬಂಧ ಹೌಸ್ ಖಾನ್ ಠಾಣೆ ಪೊಲೀಸರು ಬಂಧಿಸಿದ್ದರು. ಬಳಿಕ ನ್ಯಾಯಾಲಯ ತೋಮರ್ ಅವರನ್ನು ನಾಲ್ಕು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿತ್ತು. ಈ ಬೆನ್ನಲ್ಲೆ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.